Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಿವೀಸ್‌ ವಿರುದ್ಧ ಪಾಕ್‌ ಗೆದ್ದ ಬಳಿಕ ಸಾನಿಯಾ ಮಿರ್ಜಾ ಹೇಳಿದ್ದೇನು?

ICC World Cup 2019 : ಪಾಕ್ ಪರ ವಹಿಸಿದ ಸಾನಿಯಾ..! ಅಭಿಮಾನಿಗಳು ಫುಲ್ ಗರಂ..! | IND vs WI
Sania calls sport an incredible leveler after Paks win

ಹೊಸದಿಲ್ಲಿ, ಜೂನ್‌ 27: ಇಂಡೊ-ಪಾಕ್‌ ವಿಶ್ವಕಪ್‌ ಕ್ರಿಕೆಟ್‌ ಕದನದಲ್ಲಿ ಹೀನಾಯ ಸೋಲುಂಡ ಪಾಕಿಸ್ತಾನ ತಂಡದ ವಿರುದ್ಧ ಸಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಮತ್ತು ಆಟಗಾರರ ವಿರುದ್ಧ ವೈಯಕ್ತಿಕ ನಿಂದನೆ ನಡೆಸಲಾಗಿತ್ತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇದೀಗ ತನ್ನೆಲ್ಲಾ ಟೀಕೆಗೆಳಿಗೆ ಪಾಕಿಸ್ತಾನ ತಂಡ ಆಟದ ಮೂಲಕವೇ ಉತ್ತರ ನೀಡುತ್ತಿದ್ದು, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ತಂಗಳನ್ನು ಮಣಿಸುವ ಮೂಲಕ ಭರ್ಜರಿ ಕಮ್‌ಬ್ಯಾಕ್‌ ಮಾಡಿ ಸೆಮಿಫೈನಲ್ಸ್‌ ರೇಸ್‌ನಲ್ಲಿ ಉಳಿದುಕೊಂಡಿದೆ. ಅದರಲ್ಲೂ ಅಜೇಯ ನ್ಯೂಜಿಲೆಂಡ್‌ಗೆ ಆಘಾತ ನೀಡಿ ಟೀಕಾಕಾರರ ಬಾಯಿ ಮಿಚ್ಚಿಸಿದೆ.

ಈ ಸಂದರ್ಭದಲ್ಲಿ ಪಾಕಿಸ್ತಾನ ಪರ ಟ್ವೀಟ್‌ ಮಾಡಿರುವ ಪಾಕ್‌ ತಂಡದ ಆಟಗಾರ ಶೊಯೇಬ್‌ ಮಲಿಕ್‌ ಅವರ ಪತ್ನಿ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜ, "ಕ್ರೀಡೆ ಅದ್ಭುತವಾಗಿ ಸಮತೋಲನ ತಂದುಕೊಡುತ್ತದೆ,'' ಎಂದಿದ್ದಾರೆ.

ಭಾರತ ವಿರುದ್ಧ ಪಾಕಿಸ್ತಾನ ತಂಡ ಸೋತ ಬಳಿಕ ಪಾಕ್‌ ಆಟಗಾರರು ಸಾನಿಯಾ ಮತ್ತು ಶೊಯೇಬ್‌ ಜೊತೆಗೂಡಿ ಇಂಡೊ-ಪಾಕ್‌ ಪಂದ್ಯಕ್ಕೂ ಹಿಂದಿನ ದಿನ ತಡ ರಾತ್ರಿಯ ವರೆಗೆ ಪಾರ್ಟಿ ಮಾಡಿದ್ದಾರೆ ಎಂಬ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಬಳಿಕ ಸಾನಿಯಾ ಮತ್ತು ಶೊಯೇಬ್‌ ವಿರುದ್ಧ ವ್ಯಾಪಕ ಟೀಕೆಗಳು ಮೂಡಿಬಂದಿದ್ದವು.

ಇದೀಗ ಪಾಕ್‌ ತಂಡದ ಸತತ ಗೆಲುವು ತನ್ನ ವಿರುದ್ಧದ ಟೀಕೆಗಳನ್ನು ಮೆಚ್ಚುಗೆಯ ಸುರಿಮಳೆಯಾಗುವಂತೆ ಮಾಡಿದೆ ಎಂಬ ಅರ್ಥದಲ್ಲಿ ಸಾನಿಯಾ ಮಿರ್ಜಾ ಟ್ವೀಟ್‌ ಮಾಡಿದ್ದಾರೆ.

ಮತ್ತೊಂದೆಡೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಝ್‌ ಅಹ್ಮದ್‌ ಅವರನ್ನು ಪಾಕಿಸ್ತಾನದ ಅಭಿಮಾನಿಯೊಬ್ಬ ಹಂದಿ ಎಂದು ಕರೆದ ವಿಡಿಯೊ ಕೂಡ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿತ್ತು. ಬಳಿಕ ತನ್ನ ತಪ್ಪಿನ ಅರಿವಾಗಿ ಅದೇ ಅಭಿಮಾನಿ ಮತ್ತೊಂದು ವಿಡಿಯೊ ಬಿಡುಗಡೆ ಮಾಡುವ ಮೂಲಕ ಪಾಕ್‌ ನಾಯಕನ ಬಳಿ ಕ್ಷಮೆಯಾಚಿಸಿದ್ದರು.

Story first published: Friday, June 28, 2019, 9:26 [IST]
Other articles published on Jun 28, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+