Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್ ನಾಯಕ ಬಾಬರ್ ಅಝಮ್‌ಗೆ ಸಾನಿಯಾ ಮಿರ್ಜಾ ಬೆದರಿಕೆ ಹಾಕಿದ್ದೇಕೆ?

Sania Mirza Responds To Babar Azams Choice Of Favourite Bhabi During Chat With Shoaib Malik

ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಝಮ್‌ ಕ್ರಿಕೆಟ್ ಲೋಕದಲ್ಲಿ ಭರವಸೆಯನ್ನು ಮೂಡಿಸಿದ ಆಟಗಾರ. ತನ್ನ ಅದ್ಭುತ ಬ್ಯಾಟಿಂಗ್ ಕೌಶಲ್ಯದಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಆಶಾಕಿರಣವಾಗಿದ್ದಾರೆ. ಕ್ರಿಕೆಟ್ ಮಾತ್ರವಲ್ಲ ನಡತೆಯಲ್ಲೂ ಮೆಚ್ಚುಗೆಗೆ ಮಾತ್ರವಾಗುತ್ತಿರುವ ಬಾಬರ್ ಅಝಮ್‌ಗೆ ಭಾರತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಎಚ್ಚರಿಕೆ ನೀಡಿದ್ದಾರೆ.

ಶೋಯೆಬ್ ಮಲಿಕ್ ಜೊತೆಗೆ ಬಾಬರ್ ಅಜಮ್ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಬಾಬರ್ ಅಝಮ್ ಹೇಳಿದ ಮಾತೊಂದು ಸಾನಿಯಾ ಮಿರ್ಜಾಗೆ ಇಷ್ಟವಾಗಲಿಲ್ಲ. ಆದ ಕಾರಣ ಸಾನಿಯಾ ಮಿರ್ಜಾ ಲೈವ್‌ನಲ್ಲಿ ಕಾಮೆಂಟ್ ಮೂಲಕ ಬೆದರಿಕೆಯನ್ನು ಹಾಕಿದ್ದಾರೆ. ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಸಾನಿಯಾ ಹೇಳಿರುವುದು ವೈರಲ್ ಆಗಿದೆ.

ಬಾಬರ್ ಉತ್ತರಕ್ಕೆ ಸಾನಿಯಾ ಮುನಿಸು

ಬಾಬರ್ ಉತ್ತರಕ್ಕೆ ಸಾನಿಯಾ ಮುನಿಸು

ಮಲಿಕ್ ಕೇಳಿದ ಪ್ರಶ್ನೆಗಳಿಗೆ ಬಾಬರ್ ಅಝಮ್ ಉತ್ತರ ನೀಡುತ್ತಿದ್ದರು. ಪಾಕ್ ಕ್ರಿಕೆಟ್ ಆಟಗಾರರ ಕುಟುಂಬಗಳೊಂದಿಗೆ ನಿನಗೆ ಉತ್ತಮ ಸಂಬಂಧ ಇದೆ.. ಅವರಲ್ಲಿ ನಿನಗೆ ತುಂಬಾ ಇಷ್ಟವಾದ ಅತ್ತಿಗೆ ಯಾರು..? ಎಂದು ಬಾಬರ್‌ಗೆ ಮಲಿಕ್ ಪ್ರಶ್ನಿಸಿದರು. ಇದಕ್ಕೆ ಬಾಬರ್ ನೀಡಿದ ಉತ್ತರ ಸಾನಿಯಾಗೆ ಮಿರ್ಜಾ ಮುನಿಸಿದೆ ಕಾರಣವಾಗಿದೆ.

ಸಾನಿಯಾ ಹೆಸರು ಹೇಳದ ಬಾಬರ್

ಸಾನಿಯಾ ಹೆಸರು ಹೇಳದ ಬಾಬರ್

ಬಾಬರ್ ಅಝಮ್ ಸಾನಿಯಾ ಮಿರ್ಜಾ ಪತಿ ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ಶೋಯೆಬ್ ಮಲಿಕ್ ಕೇಳಿದ ಪ್ರಶ್ನೆಗೆ ಮಾಜಿ ನಾಯಕ ಸರ್ಫರಾಜ್ ಪತ್ನಿ ಸೈದಾ ಖುಸ್ಬತ್ ಎಂದು ಬಾಬರ್ ನೇರವಾಗಿ ಉತ್ತರಿಸಿದರು. ಈ ವೇಳೆ ತನ್ನ ಹೆಸರನ್ನು ನಿರೀಕ್ಷಿಸಿದ್ದ ಸಾನಿಯಾ ತನ್ನ ಕೋಪವನ್ನು ಕಾಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ.

ಸಾನಿಯಾ ಹುಸಿ ಮುನಿಸು

ಸಾನಿಯಾ ಹುಸಿ ಮುನಿಸು

ಇನ್ನು ಸಾನಿಯಾ ಮಿರ್ಜಾ ಕೊಂದು ಬಿಡುತ್ತೇನೆ ಎಂದು ಬಾಬರ್ ಅಝಮ್‌ಗೆ ಎಚ್ಚರಿಕೆ ನೀಡಿದ್ದು ಗಂಭೀರವಾಗಿ ಅಲ್ಲ ಎಂದು ಬಿಡಿಸಿ ಹೇಳಬೇಕಿಲ್ಲ. ತನ್ನ ಹೆಸರನ್ನು ಹೇಳದ ಬಾಬರ್ ಮೇಲೆ ಸಾನಿಯಾ ಹುಸಿ ಮುನಿಸನ್ನು ವ್ಯಕ್ತಡಿಸಿದ್ದರು ಸಾನಿಯಾ ಮಿರ್ಜಾ. ಅದನ್ನು ಕಮೆಂಟ್ ಮೂಲಕ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. ಇದು ವೈರಲ್ ಆಗಿದೆ.

ಉತ್ತಮ ಸ್ನೇಹಿತರು

ಉತ್ತಮ ಸ್ನೇಹಿತರು

ಬಾಬರ್ ಅಝಮ್ ಸಾನಿಯಾ ಮಿರ್ಜಾ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ತನ್ನ ಪತಿ ಶೋಯೆಬ್ ಮಲಿಕ್ ಈ ಪ್ರಶ್ನೆ ಕೇಳಿದಾಗ ಬಾಬರ್ ಅಜಮ್ ತನ್ನ ಹೆಸರನ್ನು ಹೇಳಬಹುದು ಎಂದು ಸಾನಿಯಾ ಮಿರ್ಜಾ ನಿರೀಕ್ಷಿಸಿದ್ದರು. ಆದರೆ ಬಾಬರ್ ಸಾನಿಯಾ ಹೆಸರನ್ನು ತೆಗೆದುಕೊಂಡಿರಲಿಲ್ಲ. ಇನ್ನು ಮುಂದೆ ಮನೆಗೆ ಬಂದಾಗ ಕುಳಿತುಕೊಳ್ಳುವಂತೆಯೂ ನಿನಗೆ ಹೇಳುವುದಿಲ್ಲ ಎಂದು ಮತ್ತೊಂದು ಮುನಿಸಿನ ಪ್ರತಿಕ್ರಿಯೆಯನ್ನೂ ಮಾಡಿದ್ದಾರೆ ಸಾನಿಯಾ.

Story first published: Monday, June 29, 2020, 10:30 [IST]
Other articles published on Jun 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+