ಅಂತಿಮ ಟೆಸ್ಟ್‌ನಲ್ಲಿ ಭಾರತದ ಈ ಇಬ್ಬರು ಆಟಗಾರರು ತಂಡದಿಂದ ಹೊರಗುಳಿಯಬೇಕು: ಸಂಜಯ್ ಮಂಜ್ರೇಕರ್

ಕೇಪ್‌ಟೌನ್‌ನಲ್ಲಿ ಇಂದಿನಿಂದ ಆರಂಭಗೊಳ್ಳಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕಬ್ಬಿಣದ ಕಡಲೆಯಾಗಿರುವ ದಕ್ಷಿಣ ಆಫ್ರಿಕಾ ನೆಲದಲ್ಲಿನ ಸರಣಿ ಗೆಲುವು ದಕ್ಕಿಸಲು, ಟೀಂ ಇಂಡಿಯಾಗೆ ಸುವರ್ಣಾವಕಾಶ ಮುಂದಿದೆ. ಪ್ರಸ್ತುತ ಟೆಸ್ಟ್ ಸರಣಿಯು 1-1 ರಿಂ ಸಮಬಲ ಸಾಧಿಸಿದ್ದು, ಅಂತಿಮ ಟೆಸ್ಟ್ ಗೆದ್ದ ತಂಡವು ಸರಣಿ ಜಯಿಸಲಿದೆ. ಹೀಗಾಗಿ ಜನವರಿ 11ರಂದು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನ ಟೆಸ್ಟ್ ಪಂದ್ಯ ಜಿದ್ದಾಜಿದ್ದಿನ ಸ್ಪರ್ಧೆಗೆ ಎಡೆಮಾಡಿಕೊಟ್ಟಿದೆ.
ನಾಯಕ ವಿರಾಟ್ ಕೊಹ್ಲಿ ಬೆನ್ನು ಮೂಳೆಯ ಸೆಳೆತದಿಂದಾಗಿ ಎರಡನೇ ಟೆಸ್ಟ್‌ಗೆ ಅಲಭ್ಯರಾಗಿದ್ದರು, ಕೆ.ಎಲ್ ರಾಹುಲ್ ತಂಡವನ್ನ ಮುನ್ನಡೆಸಿದ್ರು. ಆದ್ರೆ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದ್ದು, ಕೊಹ್ಲಿ ಯಾರಿಗೆ ಸ್ಥಾನ ನೀಡುವುದು ಎಂಬ ಪ್ರಶ್ನೆಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಉತ್ತರಿಸಿದ್ದಾರೆ. ಜೊತೆಗೆ ಗಾಯಾಳು ಮೊಹಮ್ಮದ್ ಸಿರಾಜ್ ಜಾಗದಲ್ಲಿ ಯಾರಿಗೆ ಸ್ಥಾನ ಎಂಬುದನ್ನ ಕೂಡ ತಿಳಿಸಿದ್ದಾರೆ.
ಕೊಹ್ಲಿ ಬಂದರೆ ಹನುಮ ವಿಹಾರಿ ತಂಡದಿಂದ ಔಟ್!
ಇದೇ ವೇಳೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಹನುಮ ವಿಹಾರಿ ಕೊಹ್ಲಿಗೆ ದಾರಿ ಮಾಡಿಕೊಡುತ್ತಾರೆ ಮತ್ತು ಅನುಭವಿ ವೇಗಿ ಇಶಾಂತ್ ಶರ್ಮಾ ಸಿರಾಜ್ ಅವರ ಬದಲು ಆಡಲಿದ್ದಾರೆ ಎಂದಿದ್ದಾರೆ.
"ಅರ್ಧಶತಕದ ಹೊರತಾಗಿಯೂ ರಹಾನೆ ಅವರನ್ನು ಕೈಬಿಡಬೇಕೇ ಎಂಬ ದೊಡ್ಡ ಗೊಂದಲದೊಂದಿಗೆ ವಿರಾಟ್ ಕೊಹ್ಲಿಗೆ ಅವಕಾಶ ಕಲ್ಪಿಸಲು, ನಾನು ಹನುಮ ವಿಹಾರಿಯನ್ನು ಹೊರಗಿಡಬೇಕು ಎಂದು ಭಾರವಾದ ಹೃದಯದಿಂದ ಹೇಳಬೇಕಾಗಿದೆ. ಏಕೆಂದರೆ ಲೀನ್ ಪ್ಯಾಚ್ ಬಹಳ ಕಾಲ ಉಳಿಯುತ್ತದೆ ಎಂದು ನೀವು ನೋಡಬೇಕು. ಆ ಅರ್ಧಶತಕದ ಆಟಗಾರರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಉಳಿಯಲು ಆ 50 ಅರ್ಹವೇ ಎಂದು ಮನಸ್ಸಿನಲ್ಲಿ ಚರ್ಚಿಸಿದ ಬಳಿಕ ಈ ನಿರ್ಧಾರ ''ಎಂದು ESPN ಕ್ರಿಕ್‌ಇನ್‌ಫೋ ಜೊತೆಗಿನ ಸಂವಾದದಲ್ಲಿ ಮಂಜ್ರೇಕರ್ ಹೇಳಿದರು.
ತನ್ನ ಫಾರ್ಮ್ ಕುರಿತು ಮಾತನಾಡಿರುವ ಕೊಹ್ಲಿ, ''ಇದೇನು ಮೊದಲೇನಲ್ಲ, ಇಂಗ್ಲೆಂಡ್‌ನಲ್ಲಿ 2014ರಲ್ಲೂ ಆ ಹಂತಗಳನ್ನ ಎದುರಿಸಿದೆ. ಹೊರಜಗತ್ತು ನನ್ನತ್ತ ನೋಡುವ ಲೆನ್ಸ್‌ನಿಂದ ನಾನು ನನ್ನನ್ನು ನೋಡುವುದಿಲ್ಲ'' ಎಂದು ಕೊಹ್ಲಿ ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೊತೆಗೆ "ಕ್ರೀಡೆಯಲ್ಲಿ ಕೆಲವೊಮ್ಮೆ ನೀವು ಬಯಸಿದಂತೆ ನಡೆಯುವುದಿಲ್ಲ, ಆದರೆ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ಅಗತ್ಯವಿರುವಾಗ ಪ್ರಮುಖ ಜೊತೆಯಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಜನರು ನನ್ನನ್ನು ನಿರ್ಣಯಿಸುವ ಸ್ಥಿತಿಯಲ್ಲಿ ಇದ್ದಾರೆ, ಆದರೆ ನಾನು ನನ್ನನ್ನು ಹಾಗೆ ನೋಡುವುದಿಲ್ಲ, "ಎಂದು ಅವರು ಹೇಳಿದರು.
70 ಅಂತರಾಷ್ಟ್ರೀಯ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಬಿಗ್ ಇನ್ನಿಂಗ್ಸ್ ಕಲೆ ಹಾಕಲು ವಿಫಲಗೊಂಡಿದ್ದು, ವಿರಾಟ್ ಬ್ಯಾಟ್‌ನಿಂದ ಶತಕ ಸಿಡಿದು 2 ವರ್ಷವೇ ಕಳೆದು ಹೋಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications