Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ ಅವರ 13 ವರ್ಷಗಳ ಹಳೆಯ ದಾಖಲೆ ಅಳಿಸಿದ ಸಂಜು ಸ್ಯಾಮ್ಸನ್‌

ಸೋಮವಾರ ಚೆನ್ನೈನ ಚೆಪಾಕ್ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ಚೆನ್ನೈ ತಂಡ 180 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಚೆನ್ನೈ ತಂಡದ ವಿಕೆಟ್‌ ಕೀಪರ್ ಬ್ಯಾಟರ್‌ ಸಂಜು ಸ್ಯಾಮ್ಸನ್‌ ಚಿಕ್ಕ ಇನಿಂಗ್ಸ್‌ ಕಟ್ಟುವ ಮೂಲಕ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.

ಚೆಪಾಕ್ ಅಂಗಳದಲ್ಲಿ ಸಂಜು ಸ್ಯಾಮ್ಸನ್‌ 13 ಎಸೆತಗಳನ್ನು ಎದುರಿಸಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 27 ರನ್‌ ಬಾರಿಸಿದರು. ಇವರ ಈ ಚಿಕ್ಕ ಇನಿಂಗ್ಸ್‌ ಮೂಲಕ ಸಂಜು ಸ್ಯಾಮ್ಸನ್‌ 13 ವರ್ಷಗಳ ಹಳೆಯ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಅಳಿಸಿ ಹಾಕಿದರು.

Sanju Samson

ಮಹೇಂದ್ರ ಸಿಂಗ್ ಧೋನಿ 2013ರ ಐಪಿಎಲ್‌ನಲ್ಲಿ ಆಡಿದ 16 ಇನಿಂಗ್ಸ್‌ಗಳಲ್ಲಿ 461 ರನ್‌ ಗಳಿಸಿದ್ದರು. ಈ ದಾಖಲೆಯನ್ನು ಸಂಜು ಅವರಿಗೆ ಮುರಿಯಲು ಸಂಜು ಅವರಿಗೆ ಸೋಮವಾರದ ಪಂದ್ಯದಲ್ಲಿ 12 ರನ್‌ ಅಗತ್ಯವಿತ್ತು. ಸಂಜು ತಮ್ಮ ನೈಜ ಆಟವನ್ನು ಆಡುವ ಮೂಲಕ ಈ ಸಾಧನೆಯನ್ನು ಮಾಡಿ ಬೀಗಿದರು. ನಿತೀಶ್ ಕುಮಾರ್ ರೆಡ್ಡಿ ಅವರ ಮೊದಲ ಓವರ್‌ನಲ್ಲಿ 15 ರನ್‌ಗಳನ್ನು ಗಳಿಸುವ ಮೂಲಕ ಸ್ಯಾಮ್ಸನ್ ಧೋನಿಯ ದಾಖಲೆಯನ್ನು ಮೀರಿಸಿದರು.

ಸಿಎಸ್‌ಕೆ ತಂಡದ ಐಕಾನಿಕ್ ಪ್ಲೇಯರ್ ಧೋನಿ ಅವರ ದಾಖಲೆಯನ್ನು ಅಳಿಸಿ ಬೀಗಿದರು. ಚೆನ್ನೈ ತಂಡದ ಪರ ಒಂದೇ ಋತುವಿನಲ್ಲಿ ಕೇವಲ ಮೂವರು ವಿಕೆಟ್ ಕೀಪರ್‌ಗಳು 100 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇವರಲ್ಲಿ ಧೋನಿ, ಪಾರ್ಥಿವ್ ಪಟೇಲ್ ಮತ್ತು ಈಗ ಸಂಜು ಸ್ಯಾಮ್ಸನ್ ಸೇರಿದ್ದಾರೆ.

ಒಂದೇ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ CSK ವಿಕೆಟ್ ಕೀಪರ್-ಬ್ಯಾಟರ್‌

ಸಂಜು ಸ್ಯಾಮ್ಸನ್, 477 (2026)
ಎಂಎಸ್ ಧೋನಿ, 461 (2013)

ಸಂಜು ಸ್ಯಾಮ್ಸನ್‌ ಮಹತ್ವದ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ಕನಸಿನಲ್ಲಿದ್ದರು. ಇವರು ಪ್ರಫುಲ್ ಹಿಂಗೆ ಅವರ ಓವರ್‌ನಲ್ಲಿ ಅವರು ಸತತ ಮೂರು ಬೌಂಡರಿಗಳನ್ನು ಬಾರಿಸಿ, ಅಪಾಯಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದರು, ಕೇವಲ 11 ಎಸೆತಗಳಲ್ಲಿ 27 ರನ್ ಗಳಿಸಿ ಅಬ್ಬರಿಸಿದರು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಎಸ್‌ಆರ್‌ಎಚ್ ಕ್ಯಾಪ್ಟನ್‌ ಪ್ಯಾಟ್ ಕಮಿನ್ಸ್ ಯಶಸ್ವಿಯಾದರು. ಪ್ಯಾಟ್‌ ಕಮಿನ್ಸ್‌ ಅವರ ಚೆಂಡನ್ನು ಕೆಣಕಿ ಇಶಾನ್‌ ಕಿಶನ್‌ಗೆ ಕ್ಯಾಚ್ ನೀಡಿದರು. ಈ ಋತುವಿನಲ್ಲಿ ಸಂಜು ಸ್ಯಾಮ್ಸನ್ 500 ರನ್ ಗಳಿಸುವ ಸನಿಹದಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ಸಾಧಿಸಬಹುದು.

ಚೆನ್ನೈ 180 ರನ್‌

ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡದ ಪರ ಮಧ್ಯಮ ಕ್ರಮಾಕಂಕದ ಆಟಗಾರರಾದ ಕಾರ್ತಿಕ್ ಶರ್ಮಾ (32), ಡೆವಾಲ್ಡ್‌ ಬ್ರೆವಿಸ್‌ (44), ಶಿವಂ ದುಬೆ (26) ರನ್‌ ಕಲೆ ಹಾಕಿ ತಂಡಕ್ಕೆ ಆಧಾರವಾದರು. ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 180 ರನ್ ಸೇರಿಸಿತು.

Story first published: Monday, May 18, 2026, 22:35 [IST]
Other articles published on May 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+