Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿಗಳ ಜೊತೆ ಬೀಚ್ ಕ್ರಿಕೆಟ್ ಆಡಿ ಸಂಜು ಸ್ಯಾಮ್ಸನ್‌: ಎಡಗೈನಲ್ಲಿ ಸಿಕ್ಸರ್ ಬಾರಿಸಿದ ವಿಡಿಯೋ ವೈರಲ್

ಸಂಜು ಸ್ಯಾಮ್ಸನ್‌ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಬ್ಯುಸಿ ಆಗಿದ್ದಾರೆ. ಇವರು ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಪರ ಆಡುತ್ತಿದ್ದಾರೆ. ವಿಕೆಟ್‌ ಕೀಪರ್‌ ಬ್ಯಾಟರ್‌ ಸಂಜು ಸಿಎಸ್‌ಕೆ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಇವರು ಇತ್ತೀಚಿಗೆ ಚೆನ್ನೈ ಅಭಿಮಾನಿಗಳೊಂದಿಗೆ ಬೀಚ್‌ ಕ್ರಿಕೆಟ್‌ ಆಡಿ ಗಮನ ಸೆಳೆದರು.

ಸಂಜು ಸ್ಯಾಮ್ಸನ್‌ ಯಾವುದೇ ಸೆಕ್ಯೂರಿಟಿ ಇಲ್ಲದೆ ಬೀಚ್‌ನಲ್ಲಿ ಕ್ರಿಕೆಟ್‌ ಆಡುತ್ತಿದ್ದ ಯುವಕರ ತಂಡದೊಂದಿಗೆ ಸೇರಿಕೊಂಡು ಮಜಾ ಮಾಡಿದ್ದಾರೆ. ಇವರು ಈ ವೇಳೆ ಸ್ಟಾರ್‌ ಗಿರಿಯನ್ನು ಪಕ್ಕಕ್ಕೆ ಇಟ್ಟು ಸಿಂಪಲ್ ಆಗಿ ಅಭಿಮಾನಿಗಳೊಂದಿಗೆ ಬೆರೆತರು. ಇದೇ ವೇಳೆ ಸಂಜು ಬೀಚ್‌ನಲ್ಲಿ ಕ್ರಿಕೆಟ್‌ ಆಡಿ ಗಮನ ಸೆಳೆದರು. ಸಂಜು ಸ್ಯಾಮ್ಸನ್‌ ಈ ವೇಳೆ ಎಡಗೈನಲ್ಲಿ ಬ್ಯಾಟಿಂಗ್ ಮಾಡಿ ಬಿಗ್ ಸಿಕ್ಸರ್ ಬಾರಿಸಿದರು.

Sanju Samson

ಸಂಜು ಸ್ಯಾಮ್ಸನ್‌ ಇದೇ ವೇಳೆ ಈ ವಿಡಿಯೋಗಳನ್ನು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದಂತೆ ಸಖತ್ ವೈರಲ್‌ ಆಗಿದೆ.

ಸಂಜು ಸ್ಯಾಮ್ಸನ್‌ ಒಂದೇ ಒಂದು ಪಂದ್ಯವನ್ನು ಆಡಲು ಅಂಗಳಕ್ಕೆ ಇಳಿಯುವ ಮುನ್ನವೇ ಅವರು ಹೇಗೆ ಸಿಎಸ್‌ಕೆ ಅಭಿಮಾನಿಗಳಿಂದ ಪ್ರೀತಿ ಪಡೆದರು ಎಂಬುದನ್ನು ಸಿಎಸ್‌ಕೆ ಪಾಡಕಾಸ್ಟ್‌ನಲ್ಲಿ ವಿವರಿಸಿದ್ದಾರೆ. ಟ್ರೇಡ್ ವ್ಯಾಪಾರಗಳು ನಡೆಯುತ್ತಿರುವಾಗಲೇ ಈ ಬಗ್ಗೆ ಸುದ್ದಿಗಳು ಸಹ ಹೆಚ್ಚಾಗಿ ಪ್ರಕಟವಾಗುತ್ತಿದವು. ಅಲ್ಲದೆ ನಾನು ಚೆನ್ನೈಗೆ ಯಾವುದೇ ಕೆಲಸಕ್ಕೆ ಬಂದಾಗ ಅಭಿಮಾನಿಗಳನ್ನು ಭೇಟಿ ಆಗುತ್ತಿದ್ದೆ. ಆಗಲೂ ಅವರು ಸಿಎಸ್‌ಕೆ ತಂಡವನ್ನು ಸೇರಿಬಿಡಿ ಎಂದು ಹೇಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಸಂಜು ಸಾಧನೆ

ಪ್ರಸಕ್ತ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್‌ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದಿರುವ ಸಂಜು ಈಗಾಗಲೇ ಲೀಗ್‌ನಲ್ಲಿ 2 ಶತಕಗಳನ್ನು ಬಾರಿಸಿದ್ದಾರೆ. ಇವರು ಈ ಬಾರಿ ಆಡಿದ 11 ಪಂದ್ಯಗಳಲ್ಲಿ 430 ರನ್‌ ಸಿಡಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 1 ಅರ್ಧಶತಕ ಬಾರಿಸಿದ್ದಾರೆ. ಇದರಲ್ಲಿ 45 ಬೌಂಡರಿ, 23 ಸಿಕ್ಸರ್‌ಗಳು ಸೇರಿವೆ. ಒಟ್ಟಾರೆ ಐಪಿಎಲ್‌ನಲ್ಲಿ 188 ಪಂದ್ಯಗಳ 183 ಇನಿಂಗ್ಸ್‌ಗಳಲ್ಲಿ ಸಂಜು 32ರ ಸರಾಸರಿಯಲ್ಲಿ 5134 ರನ್‌ ಸಿಡಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 27 ಅರ್ಧಶತಕಗಳು ಸೇರಿವೆ.

Story first published: Wednesday, May 13, 2026, 16:47 [IST]
Other articles published on May 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+