For Quick Alerts
ALLOW NOTIFICATIONS  
For Daily Alerts
 

2024ರಲ್ಲಿ ಸಂಜು ಸ್ಯಾಮ್ಸನ್ ಅಬ್ಬರ: ರನ್‌ ಹಾಗೂ ಸಿಕ್ಸರ್‌ ಲೆಕ್ಕಾಚಾರದಲ್ಲೂ ನಂಬರ್‌ 1

ಭಾರತ ತಂಡ ಇನ್ನೇನು ಕೆಲವೇ ದಿನಗಳಲ್ಲಿ ಬಾರ್ಡರ್ ಗಾವಸ್ಕರ್‌ ಸರಣಿಯನ್ನು ಆಡಲಿದೆ. ಈ ವರ್ಷ ಟೀಮ್ ಇಂಡಿಯಾ ಇನ್ನು ಬರೀ ಟೆಸ್ಟ್‌ ಪಂದ್ಯವನ್ನು ಮಾತ್ರ ಆಡಲಿದೆ. ಇನ್ಯಾವ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಭಾರತ ತಂಡ ಭಾಗವಹಿಸುತ್ತಿಲ್ಲ. ಈ ವರ್ಷವನ್ನು ಟೀಮ್ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದೆ. ಈ ವರ್ಷ ನಡೆದ ಟಿ20 ವಿಶ್ವಕಪ್‌ ಚಾಂಪಿಯನ್‌ ಪಟ್ಟವನ್ನು ಭಾರತ ಅಲಂಕರಿಸಿದೆ.

ಇತ್ತೀಚಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದೆ. ಈ ಸರಣಿಯನ್ನು ಟೀಮ್ ಇಂಡಿಯಾ 3-1 ರಿಂದ ತನ್ನದಾಗಿಸಿಕೊಂಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಭರವಸೆಯ ಆಟಗಾರ ಸಂಜು ಸ್ಯಾಮ್ಸನ್ ಹಾಗೂ ತಿಲಕ್‌ ವರ್ಮಾ ಭರ್ಜರಿ ಪ್ರದರ್ಶನ ನೀಡಿ ಸರಣಿಯಲ್ಲಿ ಎರಡು ಶತಕ ಬಾರಿಸಿದ್ದಾರೆ.

Sanju Samson Ends 2024 as India s Top T20I Run-Scorer and Six-Hitter

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಬಳಿಕ ಟಿ20 ಫಾರ್ಮೆಟ್‌ಗೆ ವಿದಾಯ ಹೇಳಿದರು. ಈ ಸ್ಥಾನವನ್ನು ತುಂಬಲು ಸಂಜು ಹಾಗೂ ತಿಲಕ್‌ ರೆಡಿ ಇರುವುದಾಗಿ ಸಾರಿ ಹೇಳಿದ್ದಾರೆ. ಈ ಮೂಲಕ ಸಂಜು ಸ್ಯಾಮ್ಸನ್‌ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೆ.

ಸಿಕ್ಸರ್‌ ಲೆಕ್ಕಾಚಾರದಲ್ಲೂ ಸಂಜು ನಂಬರ್‌ 1

ಟೀಮ್ ಇಂಡಿಯಾದ ಪರ 2024ರಲ್ಲಿ ಆಡುವ ಅವಕಾಶವನ್ನು ಸಜು ಸ್ಯಾಮ್ಸನ್‌ ಹೆಚ್ಚಾಗಿ ಪಡೆದರು. ಈ ವೇಳೆ ಅವರು 13 ಪಂದ್ಯಗಳ 12 ಇನಿಂಗ್ಸ್‌ಗಳಲ್ಲಿ 436 ರನ್‌ ಸಿಡಿಸಿದ್ದು 43.60 ಸರಾಸರಿಯನ್ನು ಹೊಂದಿದ್ದಾರೆ. ಇದೇ ವರ್ಷ ಇವರು ಐದು ಬಾರಿ ಡಕೌಟ್ ಸಹ ಆಗಿದ್ದಾರೆ. ಅಲ್ಲದೆ ಸಂಜು ಈ ವರ್ಷ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಂಬರ್‌ ಒನ್ ಸ್ಥಾನದಲ್ಲಿದ್ದಾರೆ. ಈ ವೇಳೆ ಇವರು 31 ಸಿಕ್ಸರ್‌ ಸಿಡಿಸಿದ್ದಾರೆ. ಪ್ರಸಕ್ತ ವರ್ಷ ಚುಟುಕು ಫಾರ್ಮೆಟ್‌ನಲ್ಲಿ ಸಂಜು 3 ಶತಕ ಹಾಗೂ 5 ಅರ್ಧಶತಕ ಬಾರಿಸಿದ್ದಾರೆ.

Sanju Samson Ends 2024 as India s Top T20I Run-Scorer and Six-Hitter

ಸಂಜು ಸ್ಯಾಮ್ಸನ್‌ ಅಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಂಬರ್‌ 1 ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಹಾಲಿ ನಾಯಕ ಸೂರ್ಯಕುಮಾರ್‌ ಇದ್ದು, ಇವರು 17 ಇನಿಂಗ್ಸ್‌ಗಳಲ್ಲಿ 429 ರನ್‌ ಸಿಡಿಸಿದ್ದಾರೆ. ಈ ವೇಳೆ 4 ಅರ್ಧಶತಕ ಸಹ ಬಾರಿಸಿದ್ದಾರೆ. ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಇವರು 11 ಇನಿಂಗ್ಸ್‌ಗಳಲ್ಲಿ 3 ಅರ್ಧಶತಕ ಒಳಗೊಂಡಂತೆ 378 ರನ್ ಸಿಡಿಸಿದ್ದಾರೆ.

ಸಂಜು ಸ್ಯಾಮ್ಸನ್‌ ಅವರ ಫಾರ್ಮ್‌ ಮುಂದಿನ ವರ್ಷವೂ ಹಿಗೇ ಮುಂದುವರೆಯಲಿ ಎಂಬುದೇ ಅಭಿಮಾನಿಗಳ ಆಶಯ.

Story first published: Monday, November 18, 2024, 21:23 [IST]
Other articles published on Nov 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+