ಚೆನ್ನೈ ಗೆಲುವಿಗೆ ಕಾರಣವಾಗಿದ್ದು ಭರವಸೆ ಬ್ಯಾಟರ್
ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಉಭಯ ತಂಡಗಳಿಗೆ ಮುಖ್ಯವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿಕೊಂಡಿತು.
ಡೆಲ್ಲಿ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಪತುಮ್ ನಿಸ್ಸಂಕಾ (19) ಹಾಗೂ ಕೆಎಲ್ ರಾಹುಲ್ (12) ಜೋಡಿ 29 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮೂರನೇ ಕ್ರಮಾಂಕದಲ್ಲಿ ನಿತೀಶ್ ರಾಣಾ (15), ಕರುಣ್ ನಾಯರ್ (13), ಅಕ್ಷರ್ ಪಟೇಲ್ (2) ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಡೆಲ್ಲಿ 69 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

6ನೇ ವಿಕೆಟ್‌ಗೆ ಸಮೀರ್ ರಿಜ್ವಿ (ಅಜೇಯ 40) ಹಾಗೂ ಟ್ರಿಸ್ಟನ್ ಸ್ಟಬ್ಸ್ (38 ರನ್) ಜೋಡಿ ಸ್ಥಿರ ಜೊತೆಯಾಟದ ಕಾಣಿಕೆ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿತು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್ ಸೇರಿಸಿತು.
ಗೆಲುವಿಗೆ ಇವರ ಆಟವೇ ಕಾರಣ
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡದ ಆರಂಭ ಸಹ ಕಳಪೆಯಾಗಿತ್ತು. ರುತುರಾಜ್ ಗಾಯಕ್ವಾಡ್ (6) ಹಾಗೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಉರ್ವಿಲ್ ಪಟೇಲ್ (17) ರನ್ ಕಲೆ ಹಾಕುವಲ್ಲಿ ವಿಫಲರಾದರು. ಒತ್ತಡದಲ್ಲಿದ್ದಾಗ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ಚೆನ್ನಾಗಿ ಅರಿತಿರುವ ಸಂಜು ಸ್ಯಾಮ್ಸನ್ ತಮ್ಮ ಅನುಭವ ಬಳಿಸಿಕೊಂಡು ಬ್ಯಾಟ್ ಮಾಡಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ಸಂಜು, ಬಳಿಕ ತಮ್ಮ ಆಟದ ಧಾಟಿಯನ್ನು ಅಪ್‌ಗ್ರೇಡ್ ಮಾಡಿದರು. ಈ ಹಂತದಲ್ಲಿ ಮತ್ತೊಂದು ವಿಕೆಟ್ ಬಿದ್ದಿದ್ದರೂ ಸಿಎಸ್‌ಕೆ ಮತ್ತೆ ಸಂಕಷ್ಟಕ್ಕೆ ಸಿಲುಕುತಿತ್ತು. ಆದರೆ ಸಂಜು ಇದಕ್ಕೆ ಅವಕಾಶವನ್ನೇ ಕೊಡದೆ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ರನ್ ಹಿಗ್ಗಿಸುತಾ ಸಾಗಿದರು. ಸಂಜು 6 ಸಿಕ್ಸರ್, 7 ಬೌಂಡರಿ ಸಹಿತ ಅಜೇಯ 87 ರನ್ ಬಾರಿಸಿ ಪಂದ್ಯವನ್ನು ಸಿಎಸ್‌ಕೆ ತೆಕ್ಕಿಗೆ ಹಾಕಿದರು.
ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155: ಸಮೀರ್ ರಿಜ್ವಿ ಅಜೇಯ 40, ಟ್ರಿಸ್ಟನ್ ಸ್ಟಬ್ಸ್ 38, ಪತುಮ್ ನಿಸ್ಸಂಕಾ 19, ನೂರ್ ಅಹ್ಮದ್ 22ಕ್ಕೆ 2
ಚೆನ್ನೈ ಸೂಪರ್ ಕಿಂಗ್ಸ್ 17.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 159: ಸಂಜು ಸ್ಯಾಮ್ಸನ್ ಅಜೇಯ 87, ಕಾರ್ತಿಕ್ ಶರ್ಮಾ ಅಜೇಯ 41, ಅಕ್ಷರ್ ಪಟೇಲ್ 25ಕ್ಕೆ 1
ಪಂದ್ಯದ ಫಲಿತಾಂಶ: ಸಿಎಸ್‌ಕೆಗೆ 8 ವಿಕೆಟ್ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications