Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಂಜು ಸ್ಯಾಮ್ಸನ್‌ಗೆ ಟೀಮ್ ಇಂಡಿಯಾದ ಟಿ20 ನಾಯಕತ್ವ ಸಿಗುತ್ತದಾ? ಬಿಸಿಸಿಐ ಪ್ಲಾನ್ ಏನು?

ಮುಂಬೈ: 2026ರ ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್, ಭಾರತ ಟಿ20 ತಂಡದ ನಾಯಕ ಸ್ಥಾನಕ್ಕೆ ಪರಿಗಣಿಸಲ್ಪಡುವ ಸಾಧ್ಯತೆಗಳು ಕಡಿಮೆ ಎಂದು ವರದಿಯಾಗಿದೆ. ಕಳಪೆ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಅವರ ಸ್ಥಾನದ ಮೇಲೆ ಅಪಾಯ ತೂಗುಗತ್ತಿ ನೇತಾಡುತ್ತಿದೆ. ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ ವಿಜೇತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಮುಂದಿನ ನಾಯಕತ್ವದ ಆಯ್ಕೆ ಕುರಿತು ಭಾರತೀಯ ಕ್ರಿಕೆಟ್ ವಲಯದಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.

2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿದ್ದರು. ಆರಂಭಿಕ ಕೆಲವು ಪಂದ್ಯಗಳಲ್ಲಿ ಅವಕಾಶ ಸಿಗದೇ ಹೋದರೂ, ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 321 ರನ್ ಗಳಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 97 ರನ್, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 89 ರನ್, ಹಾಗೂ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ 89 ರನ್ ಗಳಿಸುವ ಮೂಲಕ ಸತತ ಮೂರು ನಾಕೌಟ್‌ ಪಂದ್ಯಗಳಲ್ಲಿ ಪಂದ್ಯ ಗೆಲ್ಲುವಲ್ಲಿ ಮಹತ್ವದ ಕಾಣಿಕೆ ನೀಡಿದರು.

Sanju Samson

ಸಂಜು ಟಿ20 ವಿಶ್ವಕಪ್‌ನಲ್ಲಿ 80.25ರ ಪ್ರಭಾವಿ ಸರಾಸರಿ ಮತ್ತು 199.37ರ ಸ್ಟ್ರೈಕ್‌ರೇಟ್‌ನೊಂದಿಗೆ ರನ್ ಕಲೆ ಹಾಕಿ, ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇವರ ಶ್ರೇಷ್ಠ ಪ್ರದರ್ಶನದ ಫಲವಾಗಿ ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಹ ಸಂದಿತು. 2026ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಾ ತಮ್ಮ ಅದ್ಭುತ ಫಾರ್ಮ್‌ ಅನ್ನು ಮುಂದುವರಿಸಿದ್ದರು.

ಐಪಿಎಲ್‌ನಲ್ಲಿ ಸಂಜು ಸಾಧನೆ

ಸಿಎಸ್‌ಕೆ ಪರ ಸಂಜು, 13 ಇನ್ನಿಂಗ್ಸ್‌ಗಳಲ್ಲಿ 47.7ರ ಸರಾಸರಿಯೊಂದಿಗೆ 477 ರನ್ ಗಳಿಸಿದ್ದರು. ಈ ಸೀಸನ್‌ನಲ್ಲಿ, ಐಪಿಎಲ್ ಇತಿಹಾಸದಲ್ಲಿ 5,000 ರನ್‌ಗಳ ಮೈಲಿಗಲ್ಲು ತಲುಪಿದರು. ಅಷ್ಟೇ ಅಲ್ಲದೆ, ಒಂದು ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆಯ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಅತಿ ಹೆಚ್ಚು ರನ್ ಗಳಿಸಿದ್ದ ಎಂ.ಎಸ್. ಧೋನಿಯ (2013ರಲ್ಲಿ 461 ರನ್) ದಾಖಲೆಯನ್ನು ಮುರಿದರು.

ನಾಯಕತ್ವ ಸಿಗುವುದು ಅನುಮಾನ?

ಮುಂಬರುವ ನಾಯಕತ್ವ ಸ್ಥಾನಕ್ಕೆ ಶುಭಮನ್ ಗಿಲ್, ತಿಲಕ್ ವರ್ಮ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಅಕ್ಷರ್ ಪಟೇಲ್ ಸೇರಿದಂತೆ ಹಲವು ಯುವ ಆಟಗಾರರ ಹೆಸರುಗಳು ಕೇಳಿಬರುತ್ತಿವೆ. ಸೂರ್ಯಕುಮಾರ್ ಫಾರ್ಮ್ ಕಳೆದುಕೊಂಡಿದ್ದಾಗ, ಸಂಜು ಸ್ಯಾಮ್ಸನ್ ಅವರನ್ನು ಪರ್ಯಾಯ ನಾಯಕ ಎಂದು ಪರಿಗಣಿಸಲಾಗಿತ್ತು. ಆದರೆ, ಈಗ ಅವರ ಹೆಸರು ಆ ಪಟ್ಟಿಯಿಂದ ಅಚ್ಚರಿಯೆಂಬಂತೆ ಮಾಯವಾಗಿದೆ. ಸ್ಯಾಮ್ಸನ್ ಪ್ರತಿಭಾವಂತ ಆಟಗಾರನಾಗಿದ್ದರೂ, ಅವರ ಟಿ20 ಪ್ರದರ್ಶನದ ಸ್ಥಿರತೆಯ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಿಗೆ ಪೂರ್ಣ ವಿಶ್ವಾಸವಿಲ್ಲ ಎಂಬುದು ಅವರ ಹೆಸರನ್ನು ಕೈಬಿಡಲು ಮುಖ್ಯ ಕಾರಣ ಎಂದು ಮೂಲಗಳು ತಿಳಿಸಿವೆ.

Story first published: Wednesday, June 3, 2026, 18:07 [IST]
Other articles published on Jun 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+