For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋತ ಬೆನ್ನಲ್ಲೆ ಪಾಕ್‌ ಕೋಚ್‌ ಬದಲಾವಣೆ: ಮಾಜಿ ಆಟಗಾರನಿಗೆ ಅವಕಾಶ?

ಸುಮಾರು 29 ವರ್ಷಗಳ ಬಳಿಕ ಐಸಿಸಿ ಟೂರ್ನಿಯನ್ನು ಆಯೋಜಿಸುವ ಅವಕಾಶವನ್ನು ಪಡೆದ ಪಾಕ್‌, ನಿರಾಸೆ ಅನುಭವಿಸಿದೆ. ಗುಂಪು ಹಂತದಲ್ಲೇ ಪಾಕಿಸ್ತಾನ ಟೂರ್ನಿಯಿಂದ ಹೊರ ನಡೆಸಿದೆ. ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಿರಾಸೆ ಅನುಭವಿಸಿದ್ದ ಪಾಕ್‌, ಫೆ.23 ರಂದು ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಂಡಿದೆ. ಬಾಂಗ್ಲಾ ವಿರುದ್ಧದ ಪಂದ್ಯ ರದ್ದಾಗಿದೆ. ಹೀಗಾಗಿ ಪಾಕ್‌ ಟೂರ್ನಿಯಲ್ಲಿ ಗೆಲುವಿಲ್ಲದೇ ಅಭಿಯಾನ ಮುಗಿಸಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡ ನೀಡಿದ ಪ್ರದರ್ಶನದ ಫಲವಾಗಿ ಪಾಕ್‌ ಈಗ ಹೊಸ ಕೋಚ್‌ ಹುಡುಕಾಟ ನಡೆಸಿದೆ. ಕಳೆದ ವರ್ಷ ಆಕಿಬ್ ಜಾವೇದ್ ಅವರನ್ನು ಮಧ್ಯಂತರ ಕೋಚ್ ಆಗಿ ನೇಮಿಸಲಾಗಿತ್ತು. ಆದರೆ ಕೆಲವು ವರದಿಗಳ ಪ್ರಕಾರ ಅವರನ್ನು ಈ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಈಗ ಈ ಸ್ಥಾನವನ್ನು ಮತ್ತೊಬ್ಬ ಪಾಕ್‌ ದಿಗ್ಗಜ ಸ್ಪಿನ್ ಬೌಲರ್‌ ತುಂಬಲಿದ್ದಾರೆ ಎಂದು ವರದಿಗಳು ಬರುತ್ತಿವೆ.

Saqlain Mushtaq Likely to Be Pakistan s New Head Coach After Champions Trophy Exit

ಹೊಸ ಕೋಚ್ ಯಾರು?

ಪತ್ರಕರ್ತ ಖಾದಿರ್ ಖ್ವಾಜಾ, ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಪಾಕಿಸ್ತಾನದ ಹೊಸ ಮುಖ್ಯ ಕೋಚ್ ಆಗಬಹುದು ಎಂದು ವರದಿ ಮಾಡಿದ್ದಾರೆ. ಈ ವರದಿಯನ್ನು ನಂಬುವುವದಾದರೆ ಸಕ್ಲೇನ್‌ ಮುಷ್ತಾಕ್‌ ಅವರ ಈ ಹೊಸ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕ್‌ನ ಮಾಜಿ ಸ್ಪಿನ್ ಬೌಲರ್‌ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ರಜಾ ನಖ್ವಿ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ. ಮುಂದಿನ ನ್ಯೂಜಿಲೆಂಡ್ ವಿರುದ್ಧದ ಸರಣಿಯ ವೇಳೆ ಮುಷ್ತಾಕ್‌ ಮುಖ್ಯ ಕೋಚ್‌ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ.

ತವರಿನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸಕ್ಲೇನ್ ಮುಷ್ತಾಕ್‌ ಅವರಿಗೆ ತಂಡದ ಮುಖ್ಯ ಕೋಚ್‌ ಆಗಲು ಪ್ರಸ್ತಾವನೆ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ಬಳಸಿಕೊಂಡಿರಲಿಲ್ಲ ಎಂದು ವರದಿಗಳು ಬಹಿರಂಗ ಪಡಿಸಿವೆ. ತವರಿನಲ್ಲಿ ನಡೆಯುತ್ತಿರುವ ಐಸಿಸಿ ಟೂರ್ನಿಗಳಲ್ಲಿ ಪಾಕ್‌ ತಂಡ ಕಳಪೆ ಪ್ರದರ್ಶನ ನೀಡಿದ್ದರಿಂದ ತಂಡಕ್ಕೆ ಈಗ ಹೊಸ ಆಯಾಮ ನೀಡುವ ಕೆಲಸ ನಡೆಯಬೇಕಿದೆ.

Saqlain Mushtaq Likely to Be Pakistan s New Head Coach After Champions Trophy Exit

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಬೇಸರಗೊಂಡು ಬಬಾರ್ ಅಜಮ್‌ ತಮ್ಮ ನಾಯಕತ್ವದ ಸ್ಥಾನದಿಂದ ಕಳೆಗೆ ಇಳಿದಿದ್ದರು. ಆ ಬಳಿಕ ಹಲವು ಆಟಗಾರರನ್ನು ಪ್ರಯೋಗಿಸಲಾಯಿತು. ಕೊನೆಗೆ ಚಾಂಪಿಯನ್ಸ್ ಟ್ರೋಫಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮೊಹಮ್ಮದ್ ರಿಜ್ವಾನ್‌ ಅವರಿಗೆ ಪಟ್ಟ ಕಟ್ಟಲಾಯಿತು. ಈ ವೇಳೆ ರಿಜ್ವಾನ್‌ ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ತವರಿನಲ್ಲಿ ಆಯೋಜಿಸಲಾಗಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಇವರ ಮುಂದಾಳತ್ವದ ತಂಡ ಒಂದೇ ಒಂದು ಗೆಲುವು ದಾಖಲಿಸಲು ಸಾಧ್ಯವೆ ಆಗಲಿಲ್ಲ.

ನಾಯಕನಾಗಿ ರಿಜ್ವಾನ್ ಸಾಧನೆ

ಮೊಹಮ್ಮದ್‌ ರಿಜ್ವಾನ್‌ ಅವರು ಪಾಕ್‌ ತಂಡವನ್ನು 20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ತಂಡ 8ರಲ್ಲಿ ಜಯ, 12 ರಲ್ಲಿ ಸೋಲು ಕಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ನೀಡಿದ ಕಳಪೆ ಪ್ರದರ್ಶನದಿಂದ ಇವರ ನಾಯಕತ್ವಕ್ಕೆ ಕುತ್ತು ಬರುವ ಸಾಧ್ಯತೆ ಇದೆ.

Story first published: Sunday, March 2, 2025, 10:55 [IST]
Other articles published on Mar 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+