
ಡರ್ಬನ್, ಜನವರಿ 27: ಜನಾಂಗೀಯ ನಿಂದನೆ ಆರೋಪಕ್ಕೆ ತುತ್ತಾಗಿರುವ ಪಾಕಿಸ್ತಾನದ ನಾಯಕ ಸರ್ಫರಾಜ್ಅಹ್ಮದ್ಅವರಿಗೆ ನಾಲ್ಕು ಪಂದ್ಯಗಳ ನಿಷೇಧ ಹೇರಿ, ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ಅಮಾನತು ಆದೇಶ ಹೊರಡಿಸಿದೆ.
ಐಸಿಸಿ ಆದೇಶದ ಪ್ರಕಾರ ಸರ್ಫರಾಜ್ ಅವರು ಜನವರಿ 27ರ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರದಂದು ಹೇಳಿದೆ. ಶೋಯೆಬ್ ಮಲ್ಲಿಕ್ ಅವರು ಹಂಗಾಮಿ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎರಡನೇ ಏಕದಿನ ಪಂದ್ಯದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ಆಟಗಾರ ಆಂಡಿಲೆ ಫೆಹ್ಲುಕ್ವೇವೊ ವಿರುದ್ಧ ಸರ್ಫರಾಜ್ ಅಹ್ಮದ್ಜನಾಂಗೀಯ ನಿಂದನೆ ಮಾಡಿದ್ದರು. ಇದು ಐಸಿಸಿಯ ವರ್ಣಭೇದ ವಿರೋಧ ನೀತಿಯ ಉಲ್ಲಂಘನೆಯಾಗಿದ್ದರಿಂದ ಅಮಾನತು ಆದೇಶ ಹೊರಡಿಸಲಾಗಿದೆ.
ವರ್ಣಭೇದ ವಿರೋಧ ನೀತಿಯ ನಿಯಮದ ಪ್ರಕಾರ ಯಾವುದೇ ಆಟಗಾರ, ಆಟಗಾರನಿಗೆ ಬೆಂಬಲ ನೀಡುವ ಸಿಬ್ಬಂದಿ, ಅಂಪೈರ್, ಅಂಪೈರ್ಗೆ ಬೆಂಬಲ ನೀಡುವ ಸಿಬ್ಬಂದಿ, ಮ್ಯಾಚ್ ರೆಫ್ರಿ ಹಾಗೂ ಇತರೆ ಯಾವುದೇ ವ್ಯಕ್ತಿಯು (ಪ್ರೇಕ್ಷಕರನ್ನು ಒಳಗೊಂಡಂತೆ) ಜನಾಂಗ, ಧರ್ಮ, ಸಂಸ್ಕೃತಿ, ಬಣ್ಣ, ರಾಷ್ಟ್ರೀಯ ಅಥವಾ ಜನಾಂಗೀಯ ಮೂಲದ ಆಧಾರದ ಮೇಲೆ ಮತ್ತೊಬ್ಬ ವ್ಯಕ್ತಿಯನ್ನು ಅವಮಾನ ಮಾಡುವುದು, ಭಯಪಡಿಸುವುದು, ಬೆದರಿಸುವುದು, ಅಸಮಾಧಾನಗೊಳಿಸುವುದು ಅಥವಾ ದುರ್ಬಲಗೊಳಿಸುವ ಯಾವುದೇ ನಡವಳಿಕೆಯು (ಭಾಷೆ, ಸನ್ನೆ ಅಥವಾ ಇನ್ನಿತರ ಬಳಕೆಯ ಮೂಲಕ) ಅಪರಾಧೆಂದು ವರ್ಣಭೇದ ವಿರೋಧ ನೀತಿ(Article 7.3 Anti Racism Code)ಯಲ್ಲಿ ಪರಿಗಣಿಸಲಾಗುತ್ತದೆ.
ಎರಡನೇ ಏಕದಿನ ಪಂದ್ಯದ ವೇಳೆ 37ನೇ ಓವರ್ದಲ್ಲಿ ಸರ್ಫರಾಜ್ ಮಾಡಿದ ನಿಂದನೆ ಮಾತುಗಳು ಸ್ಟಂಪ್ಮೈಕ್ನಲ್ಲಿ ದಾಖಲಾಗಿತ್ತು. ಉರ್ದು ಭಾಷೆಯಲ್ಲಿ ಮಾಡಿದ ನಿಂದನೆಯನ್ನು ಅನುವಾದಿಸಿದಾಗ ಹೇ ಕಪ್ಪು ಹುಡುಗನೇ, ಇಂದು ನಿಮ್ಮ ತಾಯಿ ಯಾವ ಜಾಗದಲ್ಲಿ ಕುಳಿತಿದ್ದಾರೆ? ನಿನಗಾಗಿ ಏನನ್ನು ಪಾರ್ಥಿಸಲು ಅವರಿಗೆ ಹೇಳಿದ್ದೀಯ? ಎಂದಿದ್ದರು.
ಇದನ್ನು ಗಮನಿಸಿದ ಮ್ಯಾಚ್ ರೆಫ್ರಿ ರಂಜನ್ ಮದುಗಲೆ ಅವರು ಪಾಕ್ ನಾಯಕನನ್ನು ಕರೆದು ಈ ವಿಚಾರಿಸಿದಾಗ ನಿಂದನೆ ಮಾಡಿರುವುದು ಸಾಬೀತಾಗಿತ್ತು. ಆಂಡಿಲೆ ಬಳಿ ಸರ್ಫರಜ್ ಕ್ಷಮೆಯಾಚಿಸಿದ್ದರು.