ಇಷ್ಟದ ಬಿರಿಯಾನಿ ಬಿಟ್ಟು ಫಿಟ್ನೆಸ್‌ನತ್ತ ಗಮನ ಹರಿಸಿದ Sarfaraz Khan
ನವದೆಹಲಿ: ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯುವ ಆಟಗಾರರು ಕಷ್ಟ ಪಡುತ್ತಿದ್ದಾರೆ. ಈ ಆಟಗಾರರ ಹಾವಳಿಯ ನಡುವೆ ಈಗಾಗಲೇ ತಂಡದಲ್ಲಿ ಸ್ಥಾನವನ್ನು ಪಡೆದ ಆಟಗಾರರು, ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಆಟಗಾರರ ಸ್ಥಿರ ಪ್ರದರ್ಶನ ಎಷ್ಟು ಕ್ರಿಕೆಟ್ ಆಟಕ್ಕೆ ಮುಖ್ಯವೋ, ಅಷ್ಟೇ ಆಟಗಾರರ ಫಿಟ್ನೆಸ್ ಸಹ ಮುಖ್ಯ. ಇದನ್ನು ಅರಿತುಕೊಂಡಿರುವ ಟೀಮ್ ಇಂಡಿಯಾದ ಆಟಗಾರ ಸರ್ಫರಾಜ್ ಖಾನ್ ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಅವಕಾಶಗಳು ಸಿಕ್ಕರೆ ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ಸಂಪೂರ್ಣ ಸಜ್ಜಾಗಿದ್ದಾರೆ.
ಸರ್ಫರಾಜ್ ಖಾನ್ ಫಿಟ್ ಆಗಿದ್ದರು. ಆದರೆ ಬೇರೆ ಆಟಗಾರರಿಗೆ ಹೋಲಿಸಿದರೆ ಇವರ ಫಿಟ್ನೆಸ್ ಸಮಸ್ಯೆ ಎದುರಿಸಬಹುದಾ ಎಂಬ ಪ್ರಶ್ನೆಗಳು ಇದ್ದವು. ಇದನ್ನೇ ಗಮನದಲ್ಲಿಟ್ಟುಕೊಂಡ ಸರ್ಫರಾಜ್ ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ. ಇವರು ಜಿಮ್‌ನಲ್ಲಿ ಬೆವರು ಹರಿಸುತ್ತಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸರ್ಫರಾಜ್ ಖಾನ್ ಅವರ ಈ ಒಂದು ಫೋಟೋ ಸಖತ್ ವೈರಲ್ ಆಗುತ್ತಿದೆ. ಸರ್ಫರಾಜ್ ಅವರ ಫಿಟ್ನೆಸ್ ನೋಡಿದರೆ, ಸಖತ್ ಫಿಟ್ ಆಗಿ ಕಾಣುತ್ತಿದ್ದಾರೆ. ಅವರು ಎಂದಿಗಿಂತಲೂ ಹೆಚ್ಚು ತೆಳ್ಳಗೆ ಕಾಣುತ್ತಿದ್ದಾರೆ. ಫೋಟೋದಲ್ಲಿ ಸರ್ಫರಾಜ್ ತಮ್ಮ ಸಿಕ್ಸ್-ಪ್ಯಾಕ್ ತೋರಿಸುತ್ತಿರುವುದನ್ನು ನೋಡಬಹುದಾಗಿದೆ.
ಬಿರಿಯಾನಿಗೆ ಬ್ರೇಕ್
ಕಳೆದ ವರ್ಷದ ಅಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಟೀಮ್ ಇಂಡಿಯಾ ಕೈ ಗೊಂಡಿತು. ಇದರಿಂದ ಸರ್ಫರಾಜ್ ಹತಾಶರಾಗದೆ, ತಮ್ಮ ಫಿಟ್ನೆಸ್ ಪ್ರಯಾಣ ಆರಂಭಿಸಿದರು. ಅಲ್ಲದೆ ಕಟ್ಟುನಿಟ್ಟಿನ ಆಹಾರ ಪದ್ಧತಿಯ ಮೊರೆ ಹೋದರು. ಇವರಿಗೆ ಅವರ ತಂದೆ ಮತ್ತು ತರಬೇತುದಾರ ನೌಶಾದ್ ಖಾನ್, ಸರ್ಫರಾಜ್ ಅವರ ಆಹಾರದಿಂದ ಬ್ರೆಡ್, ಅಕ್ಕಿ, ಸಕ್ಕರೆ ಮತ್ತು ಬೇಕರಿ ವಸ್ತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದರು. ಬದಲಾಗಿ, ಅವರು ಬೇಯಿಸಿದ ಮೀನು, ಕೋಳಿ, ಬೇಯಿಸಿದ ಮೊಟ್ಟೆ, ಬ್ರೊಕೊಲಿ ಮತ್ತು ಗ್ರೀನ್ ಟೀ ಕುಡಿಯಲು ಆರಂಭಿಸಿದರು. ಅಲ್ಲದೆ ಬಿರಿಯಾನಿ ಊಟಕ್ಕೂ ಬ್ರೇಕ್ ಬಿದ್ದಿತು.
ಈ ಕಠಿಣ ದಿನಚರಿಯ ಪರಿಣಾಮವಾಗಿ, ಸರ್ಫರಾಜ್ ಆರು ವಾರಗಳಲ್ಲಿ 10 ಕೆಜಿ ಮತ್ತು ಕೇವಲ ಎರಡು ತಿಂಗಳಲ್ಲಿ ಒಟ್ಟು 17 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಇದರ ಪರಿಣಾಮ ಅವರ ಬ್ಯಾಟಿಂಗ್‌ನಲ್ಲಿ ಕಾಣಿಸಿಕೊಂಡಿತು. ಇವರು ಕಳೆದ ವರ್ಷದ ಸೈಯದ್ ಮುಷ್ತಾಕ್ ಅಲಿಯಲ್ಲಿ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಈ ವೇಳೆ ಮೂರು ಅರ್ಧಶತಕಗಳು ಸೇರಿವೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇವಲ 15 ಎಸೆತಗಳಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಭಾರತೀಯ ಅರ್ಧಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.
ಅವರ ಕಳಪೆ ಫಿಟ್‌ನೆಸ್ ಮತ್ತು ತೂಕದಿಂದಾಗಿ, ಕಳೆದ ಎರಡು ಐಪಿಎಲ್ ಹರಾಜಿನಲ್ಲಿ ಸರ್ಫರಾಜ್ ಖಾನ್ ಅವರನ್ನು ಯಾವುದೇ ತಂಡವು ಖರೀದಿಸಲಿಲ್ಲ. ಆದರೆ ಕಳೆದ ಆವೃತ್ತಿಯಲ್ಲಿ ಇವರಿಗೆ ಚೆನ್ನೈ 75 ಲಕ್ಷ ನೀಡಿ ಮಣೆ ಹಾಕಿತು. ಐಪಿಎಲ್ 2026 ರ ಋತುವಿನ ಉದ್ದಕ್ಕೂ ಸರ್ಫರಾಜ್ ಸ್ಥಿರ ಪ್ರದರ್ಶನ ನೀಡಲಿಲ್ಲ. ಇವರು ಆಡಿದ 8 ಪಂದ್ಯಗಳಲ್ಲಿ 160 ರನ್ ಸಿಡಿಸಿದ್ದಾರೆ. ಈಗ ಇವರು ಟೀಮ್ ಇಂಡಿಯಾ ಪ್ರವೇಶಿಸಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications