ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿ ಅಭಿಯಾನ ಶುರು
ಚೆನ್ನೈ, ಜುಲೈ 29: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ತಂಡ ಚೆನ್ನೈ ಸೂಪರ್ ಕಿಂಗ್ಸ್ ಭವಿಷ್ಯ ಆಗಸ್ಟ್ 1 ರಂದು ನಿರ್ಧಾರವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಎಸ್ ಕೆ ಅಭಿಮಾನಿಗಳು ತಂಡವನ್ನು ಉಳಿಸಿ ಎಂದು ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ #SaveCSK ಟ್ರೆಂಡಿಂಗ್ ಆರಂಭವಾಗಿದೆ. ಐಪಿಎಲ್ 6 ರಲ್ಲಿ ನಡೆದಿದೆ ಎನ್ನಲಾದ ಫಿಕ್ಸಿಂಗ್, ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ಆರ್ ಎಂ ಲೋಧಾ ಸಮಿತಿ ನೀಡಿದ ತೀರ್ಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಎರಡು ವರ್ಷಗಳ ನಿಷೇಧ ಹೇರಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು. [ಅಮಾನತುಗೊಂಡ್ರು ಚೆನ್ನೈ, ರಾಜಸ್ಥಾನ ಐಪಿಎಲ್ ನಲ್ಲಿ ಆಡ್ಬಹುದು!]
ಎಂಎಸ್ ಧೋನಿ ನೇತೃತ್ವದ 2 ಬಾರಿ ಚಾಂಪಿಯನ್ ಸಿಎಸ್ ಕೆ ತಂಡ ಜುಲೈ 14ರಿಂದಲೇ ನಿಷೇಧಕ್ಕೆ ಒಳಗಾಗಿದೆ. ಸಿಎಸ್ ಕೆ ತಂಡದ ಪ್ರವರ್ತಕರಾದ ಗುರುನಾಥ್ ಮೇಯಪ್ಪನ್ ಅವರು 2013ರ ಐಪಿಎಲ್ ನಲ್ಲಿ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ.[ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]
ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಆಗಸ್ಟ್ 1ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಒಟ್ಟಿಗೆ ಸೇರಿ ಪಿಟೀಷನ್ ಗೆ ಸಹಿ ಹಾಕಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಚೆನ್ನೈನ ಚೆಪಾಕ್ ಸ್ಟೇಡಿಯಂಗೆ ಬನ್ನಿ
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವೆ ನಾಲ್ಕು ದಿನಗಳ ಪಂದ್ಯ ಆರಂಭವಾಗಿದೆ. ಆಗಸ್ಟ್ 1 ಹಾಗೂ 2 ರಂದು ಪಂದ್ಯಕ್ಕೆ ಬರುವಾಗ ಎಲ್ಲರೂ ಹಳದಿ ಟೀಶರ್ಟ್ (ಸಿಎಸ್ ಕೆ ಜರ್ಸಿ) ಧರಿಸಿ ಬನ್ನಿ ಎಂದು ಬುಧವಾರ ಸೇವ್ ಸಿಎಸ್ ಕೆ ಪುಟದಲ್ಲಿ ಬರೆಯಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಿಮ್ಮ ಬೆಂಬಲ ಸೂಚಿಸಿ
ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಿಮ್ಮ ಬೆಂಬಲ ಸೂಚಿಸಿ, ಸಿಎಸ್ ಕೆ ತಂಡ ಉಳಿಸಿ.
ಬನ್ನಿ ಎಲ್ಲರೂ ಒಂದಾಗಿ ಅಭಿಯಾನಕ್ಕೆ ಕೈ ಜೋಡಿಸಿ
ಬನ್ನಿ ಎಲ್ಲರೂ ಒಂದಾಗಿ ಅಭಿಯಾನಕ್ಕೆ ಕೈ ಜೋಡಿಸಿ, ಆಗಸ್ಟ್ 1 ರಂದು ಇಡೀ ವಿಶ್ವದ ಅಭಿಮಾನಿಗಳು ನಮ್ಮ ಜೊತೆಗಿರುತ್ತಾರೆ.
ಆರೂವರೆ ಸಾವಿರ ಜನ ಬರುವುದಾಗಿ ಹೇಳಿದ್ದಾರೆ
ಆರೂವರೆ ಸಾವಿರ ಜನ ಬರುವುದಾಗಿ ಹೇಳಿದ್ದಾರೆ. ಇನ್ನಷ್ಟು ಜನ ಸೇರುವ ನಿರೀಕ್ಷೆಯಿದೆ.
ಟೀಂ ಇಂಡಿಯಾ ಕ್ಕಿಂತ ಸಿಎಸ್ ಕೆ ಇಷ್ಟ
ಟೀಂ ಇಂಡಿಯಾ ಕ್ಕಿಂತ ಸಿಎಸ್ ಕೆ ಇಷ್ಟ ಎಂದ ಅಭಿಮಾನಿ ಬಳಗ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications