For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್‌ ಮೈದಾನದಲ್ಲಿ RCB ಪ್ಲೇಯರ್‌ ಜಿತೇಶ್‌ ಶರ್ಮಾಗೆ ಒಳಗೆ ಬಿಡದ ಭದ್ರತಾ ಸಿಬ್ಬಂದಿ

ಆರ್‌ಸಿಬಿ ಈ ಬಾರಿ ಐಪಿಎಲ್‌ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ವೇಳೆ ತಂಡದ ಪರ ಹಲವು ಆಟಗಾರರು ಸ್ಥಿರ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಿದರು. ಕಳೆದ ಲೀಗ್‌ನಲ್ಲಿ ಆರ್‌ಸಿಬಿ ಪರ ಅಮೋಘ ಪ್ರದರ್ಶನ ನೀಡಿದ ಆಟಗಾರರಲ್ಲಿ ವಿಕೆಟ್‌ ಕೀಪರ್ ಬ್ಯಾಟರ್‌ ಜಿತೇಶ್‌ ಶರ್ಮಾ ಸಹ ಒಬ್ಬರು. ಇವರು ಈಗ ವಿಶ್ರಾಂತಿಯಲ್ಲಿದ್ದಾರೆ. ಈ ವೇಳೆ ಇವರು ವಿದೇಶಿ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಇವರು ಇಂಗ್ಲೆಂಡ್ ತಲುಪಿದ್ದಾರೆ. ಈ ಸಮಯದಲ್ಲಿ ಲಾರ್ಡ್ಸ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಪಂದ್ಯ ನಡೆದಿತ್ತು.

ಮೂರನೇ ಟೆಸ್ಟ್‌ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಜಿತೇಶ್‌ ಶರ್ಮಾ ಲಾರ್ಡ್ಸ್‌ ಅಂಗಳಕ್ಕೆ ಬಂದಿದ್ದರು. ಆದರೆ ಅಲ್ಲಿ ಅವರು ಯೋಚಿಸಿರದ ಒಂದು ಘಟನೆ ನಡೆದಿತ್ತು. ಕ್ರೀಡಾಂಗಣದ ಹೊರಗೆ ಇದ್ದ ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬರದಂತೆ ತಡೆದರು.ಜಿತೇಶ್ ಶರ್ಮಾ ಲಾರ್ಡ್ಸ್‌ನ ಹೊರಗೆ ತಲುಪಿದಾಗ, ಭದ್ರತಾ ಸಿಬ್ಬಂದಿ ಅವರನ್ನು ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ತಡೆದರು.

Security Denies RCB s Jitesh Sharma Entry to Lord s Dinesh Karthik Steps In

ಲಾರ್ಡ್ಸ್‌ ಭದ್ರತಾ ಸಿಬ್ಬಂಧಿಗಳಿಗೆ ಜಿತೇಶ್ ಶರ್ಮಾ ತಾನು ಟೀಮ್ ಇಂಡಿಯಾ ಪರ ಆಡಿದ್ದಾಗಿ ಅವರು ಅಲ್ಲಿದ್ದ ಗಾರ್ಡ್ಸ್‌ಗೆ ಹೇಳಿದ್ರೂ ಅವರು ಕೇಳಲಿಲ್ಲ. ಪದೇ ಪದೇ ಜಿತೇಶ್‌ ಶರ್ಮಾ ಇದನ್ನೇ ಪುನರಾವರ್ತಿಸಿದರು. ಆಗ ಅಲ್ಲಿ ಫೋನ್‌ನಲ್ಲಿ ಮಾತನಾಡುತ್ತಾ ಬಂದ ದಿನೇಶ್‌ ಕಾರ್ತಿಕ್‌ರನ್ನು ಅವರನ್ನು ನೋಡಿದರು. ಆದರೆ ಅಷ್ಟು ಜನರ ಮಧ್ಯೆ ಜಿತೇಶ್‌ ಕರೆದ ಕೂಗ ಅವರಿಗೆ ಕೇಳಲಿಲ್ಲ. ಜಿತೇಶ್‌ ಪಕ್ಕದಲ್ಲಿ ಇಂತಿದ್ದ ವ್ಯಕ್ತಿಯೊಬ್ಬ ಈ ವಿಡಿಯೋ ಮಾಡುತ್ತಿದ್ದ.

ಜಿತೇಶ್‌ ಶರ್ಮಾ ಬಳಿಕ ತಮ್ಮ ಫೋನಿನಿಂದ ದಿನೇಶ್‌ ಕಾರ್ತಿಕ್‌ ಅವರಿಗೆ ಕಾಲ್‌ ಮಾಡಿದರು. ದಿನೇಶ್‌ ಮಾತನಾಡಿದರು. ಆಗ ಜಿತೇಶ್ ಶರ್ಮಾ ಲಾರ್ಡ್ಸ್‌ ಮೈದಾನದಲ್ಲಿ ಬಂದಿದನ್ನು ತಿಳಿದ ಡಿಕೆ ಅವರನ್ನು ಕರೆದುಕೊಂಡು ಹೋಗಲು ಗೇಟ್‌ ಬಳಿ ಬಂದರು. ಬಳಿಕ ದಿನೇಶ್‌ ಕಾರ್ತಿಕ್, ಜಿತೇಶ್ ಶರ್ಮಾ ಅವರನ್ನು ಕರೆದುಕೊಂಡು ಮೈದಾನದ ಒಳಗೆ ಹೋದರು. ದಿನೇಶ್ ಕಾರ್ತಿಕ್‌ ಸದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಆಂಡರ್ಸನ್‌, ತೆಂಡೂಲ್ಕರ್ ಟೆಸ್ಟ್‌ ಸರಣಿಯ ವೇಳೆ ವೀಕ್ಷಕ ವಿವರಣೆ ಮಾಡಲು ಇಂಗ್ಲೆಂಡ್‌ಗೆ ಆಗಮಿಸಿದ್ದರು.

Security Denies RCB s Jitesh Sharma Entry to Lord s Dinesh Karthik Steps In

ಜಿತೇಶ್‌ ಶರ್ಮಾ ಲಾರ್ಡ್ಸ್ ಮೈದಾನದಲ್ಲಿ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಜಿತೇಶ್‌ ಶರ್ಮಾ ಸಾಧನೆ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಜಿತೇಶ್‌ ಶರ್ಮಾ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಫಲವಾಗಿ ರಾಷ್ಟ್ರೀಯ ತಂಡದ ಪರ ಆಡುವ ಅವಕಾಶ ಸಿಕ್ಕಿತು. ಇವರು ಕಳೆದ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ನೀಡಿದ್ದು 15 ಪಂದ್ಯಗಳಲ್ಲಿ 176.35 ಸ್ಟ್ರೈಕ್ ರೇಟ್‌ನಲ್ಲಿ 261 ರನ್‌ ಕಲೆ ಹಾಕಿದ್ದಾರೆ. ಜಿತೇಶ್ ಇಲ್ಲಿಯವರೆಗೆ 9 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಅಲ್ಲಿ ಅವರು 100 ರನ್ ಗಳಿಸಿದ್ದಾರೆ.

Story first published: Wednesday, July 16, 2025, 22:19 [IST]
Other articles published on Jul 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+