ಪಾಕಿಸ್ತಾನ ಪ್ರವಾಸ ಕೈಗೊಳ್ಳಲು 10 ಶ್ರೀಲಂಕಾ ಕ್ರಿಕೆಟರ್ಸ್ ಹಿಂದೇಟು

ಕೊಲಂಬೋ, ಸೆ. 10: ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಶ್ರೀಲಂಕಾದ 10 ಮಂದಿ ಆಟಗಾರರು ಹಿಂದೇಟು ಹಾಕಿದ್ದಾರೆ. ಪಾಕಿಸ್ತಾನದಲ್ಲಿ ಆಟಗಾರರಿಗೆ ಸುರಕ್ಷತೆ ಇರುವುದಿಲ್ಲ, ಈ ಹಿಂದೆ ಆದಂತೆ ಭದ್ರತಾ ಲೋಪವಾದರೆ ಏನು ಮಾಡುವುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಿರಿಯ ಆಟಗಾರರ ಈ ವಾದದಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ ಸಿ) ಕೂಡಾ ಚಿಂತೆ ಮಾಡುವಂತಾಗಿದೆ. ಸೆಪ್ಟೆಂಬರ್ 27 ರಿಂದ ಶ್ರೀಲಂಕಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳುಲಿದೆ. ಪಾಕ್ ಪ್ರವಾಸದ ವೇಳೆ ಉಭಯ ತಂಡಗಳು ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿವೆ.
ನಿರೋಶನ್ ಡಿಕ್ವೆಲ್ಲಾ, ಕುಸಲ್ ಪೆರೇರಾ, ಧನಂಜಯ ಡಿ ಸಿಲ್ವಾ, ಥಿಸ್ಸರ ಪೆರೇರಾ, ಅಕಿಲ ಧನಂಜಯ, ಲಸಿತ್ ಮಾಲಿಂಗ, ಏಂಜೆಲೋ ಮ್ಯಾಥ್ಯೂಸ್, ಸುರಂಗ ಲಕ್ಮಲ್, ದಿನೇಶ್ ಚಾಂಡಿಮಲ್ ಹಾಗೂ ದಿಮುತ್ ಕರುಣರತ್ನೆ ಪಾಕಿಸ್ತಾನ ಪ್ರವಾಸ ಕೈಗೊಳ್ಳದಿರಲು ನಿರ್ಧರಿಸಿದ್ದಾರೆ.
2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್ ಮೇಲೆ ಲಾಹೋರ್ ನಲ್ಲಿ ಶಸ್ತ್ರಧಾರಿಗಳು ಗುಂಡಿನ ಮಳೆಗೆರೆದಿದ್ದರು. ಹೀಗಾಗಿ ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಅವಲೋಕಿಸಿದ ಶ್ರೀಲಂಕಾದ ಏರ್ ಫೋರ್ಸ್ ಕಮ್ಯಾಂಡರ್ ಮಾರ್ಷಲ್ ಏರ್ ರೋಷನ್ ಗುಣತಿಲಕೆ, ಈ ಬಗ್ಗೆ ಆಟಗಾರರಿಗೆ ತಿಳಿ ಹೇಳಿದ್ದಾರೆ. ಜೊತೆಗೆ ಪ್ರವಾಸ ಕೈಗೊಳ್ಳುವುದು ವೈಯಕ್ತಿಕ ಆಯ್ಕೆಗೆ ಬಿಡುವುದು ಉತ್ತಮ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications