Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಿಲ್ಡ್ರನ್ಸ್‌ಡೇಗೆ ಸೆಹ್ವಾಗ್ ಸ್ಮರಿಸಿಕೊಂಡ ಹುತಾತ್ಮ ಬಾಲಕ ಯಾರು?

sehwag-insta-story-about-shakhid-baji-rout

ವೀರೇಂದ್ರ ಸೆಹ್ವಾಗ್ ಟ್ವೀಟರ್ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಸಾಕಷ್ಟು ಸುದ್ದಿ ಮಾಡುತ್ತಿರುತ್ತಾರೆ. ಸಮಯೋಚಿತ ಟ್ವೀಟ್‌ಗಳು ಹಾಗೂ ಇನ್ಸ್ಟಾಗ್ರಾಂ ಪೋಸ್ಟ್‌ಗಳಿಂದ ಅಭಿಮಾನಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.

ಆದರೆ ಯಾವಾಗಲೂ ಹಾಸ್ಯವಾಗಿಯೇ ಪೋಸ್ಟ್‌ಗಳನ್ನು ಮಾಡುವ ಸೆಹ್ವಾಗ್ ಇವತ್ತು ಮಾತ್ರ ಗಂಭೀರ ವಿಚಾರದ ಮಾಹಿತಿಯೊಂದನ್ನು ಶೇರ್ ಮಾಡಿದ್ದಾರೆ. ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ಸಮಯೋಚಿತ ಪೋಸ್ಟ್‌ವೊಂದನ್ನು ಫೋಟೋ ಸಹಿತ ಸೆಹ್ವಾಗ್ ಹಂಚಿಕೊಂಡಿದ್ದಾರೆ.

ಐಪಿಎಲ್ 2020: ಟ್ರೆಂಟ್‌ ಬೌಲ್ಟ್ ಮುಂಬೈಗೆ, ಕೆ ಗೌತಮ್ ಪಂಜಾಬ್ ಪಾಲು

ಬ್ರಿಟಿಷರ ವಿರುದ್ಧ ಧ್ವನಿಯೆತ್ತಿ ಹುತಾತ್ಮನಾದ ಅತಿ ಸಣ್ಣ ಬಾಲಕನ ಬಗ್ಗೆ ಸೆಹ್ವಾಗ್ ಚಿತ್ರ ಸಹಿತ ಪೋಸ್ಟ್‌ ಮಾಡಿದ್ದಾರೆ. ಮಾತ್ರವಲ್ಲ ಮೃತಪಟ್ಟ ಬಾಲಕನ ಚಿತ್ರ ಅದಾಗಿದ್ದು ಯಾವ ರೀತಿಯಾಗಿ ಆತ ಬ್ರಿಟಿಷರ ವಿರುದ್ಧ ಸೆಟೆದು ನಿಂತು ತನ್ನೂರಿನ ಜನರ ಪ್ರಾಣರಕ್ಷಣೆಗಾಗಿ ತಾನು ಪ್ರಾಣ ಕಳೆದುಕೊಂಡ ಎಂಬುದನ್ನು ವಿವರವಾಗಿ ಬರೆದುಕೊಂಡಿದ್ದಾರೆ. ಶಹೀದ್ ಬಾಜಿ ರೌತ್ ಎಂಬ ಈ ಬಾಲಕನ ಫೋಟೋ ಇದಾಗಿದೆ.

ಒರಿಸ್ಸಾದ ನೀಲಕಂಠಪುರ ಎಂಬಲ್ಲಿ ಬ್ರಿಟೀಷರ ಟ್ರೂಪ್ ಒಂದು ನದಿ ದಾಟಿ ಬಾಲಕ ಬಾಜಿ ರೌತ್ ಊರಿಗೆ ತೆರಳುವ ಪ್ರಯತ್ನದಲ್ಲಿತ್ತು. ಬಾಲಕ ಬಾಜಿ ರೌತ್‌ಗೆ ಆ ಬ್ರಿಟಿಷ್ ಟ್ರೂಪ್‌ನ ಕ್ರೌರ್ಯದ ಕುರಿತಾಗಿ ಅದಾಗಲೇ ಮಾಹಿತಿಯಿತ್ತು. ಹೀಗಾಗಿ ಅವರನ್ನು ಹೇಗಾದರು ಮಾಡಿ ತನ್ನೂರಿಗೆ ತೆರಳದಂತೆ ಮಾಡಬೇಕೆಂದು ಪಣ ತೊಟ್ಟಿದ್ದ. ಬಾಜಿ ಗೆ ಆತನ ಸ್ನೇಹಿತರು ಕೂಡ ಸಾಥ್ ನೀಡಿದ್ದರು. ಆದರೆ ಬ್ರಿಟಿಷರ್ ಬಾಲಕ ಬಾಜಿಯನ್ನು ಮಾತ್ರವಲ್ಲ ಆತನ ಗೆಳೆಯರಾದ ಲಕ್ಷ್ಮಣ್ ಮಲಿಕ್, ಫಗು ಸಾಹೋ, ಹೃಷಿ ಪ್ರಧಾನ್ ಮತ್ತು ನಾತಾ ಮಲಿಕ್ ಈ ಐವರನ್ನೂ ನಿಷ್ಕರುಣೆಯಿಂದ ಕೊಂದು ಬಿಟ್ಟಿದ್ದರು.

ಬಾಲಕ ಬಾಜಿ ರೌತ್‌ನ ಸಾಹಸವನ್ನು ಸ್ಮರಿಸಿಕೊಂಡು ಸೆಹ್ವಾಗ್ ಈ ಸಾಹಸಿ ಹುತಾತ್ಮ ಬಾಲಕನ ಮಾಹಿತಿ ಎಲ್ಲರಿಗೂ ಆಗಲಿ, ಆತನಿಗೊಂದು ಸೆಲ್ಯೂಟ್ ಎಂದಿದ್ದಾರೆ.

Story first published: Thursday, November 14, 2019, 16:42 [IST]
Other articles published on Nov 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+