ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಟ್ರೆಂಟ್‌ ಬೌಲ್ಟ್ ಮುಂಬೈಗೆ, ಕೆ ಗೌತಮ್ ಪಂಜಾಬ್ ಪಾಲು!

IPL 2020: NZ pacer Trent Boult traded by Delhi Capitals

ಮುಂಬೈ, ನವೆಂಬರ್ 13: ನ್ಯೂಜಿಲೆಂಡ್‌ ತಂಡದ ವೇಗಿ ಟ್ರೆಂಟ್‌ ಬೌಲ್ಟ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ಗೆ ಮಾರಾಟ ನಡೆಸಿದೆ. ಕರ್ನಾಟಕದ ಆರ್ ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ ರಾಜಸ್ಥಾನ್ ರಾಯಲ್ಸ್‌ನಿಂದ ಕಿಂಗ್ಸ್ XI ಪಂಜಾಬ್‌ ಸೇರಿಕೊಂಡಿದ್ದಾರೆ.

ಅಂಪೈರನ್ನೇ ಒಮ್ಮೆ ಯಾಮಾರಿಸಿದ ಕೀರನ್ ಪೊಲಾರ್ಡ್: ವೈರಲ್ ವಿಡಿಯೋಅಂಪೈರನ್ನೇ ಒಮ್ಮೆ ಯಾಮಾರಿಸಿದ ಕೀರನ್ ಪೊಲಾರ್ಡ್: ವೈರಲ್ ವಿಡಿಯೋ

ವೇಗದ ಬೌಲರ್ ಅಂಕಿತ್ ರಜಪೂತ್ ಅವರು ರಾಜಸ್ಥಾನ್ ರಾಯಲ್ಸ್ ಸೇರಿಕೊಂಡಿದ್ದಾರೆ. ಕಳೆದೆರಡು ಐಪಿಎಲ್ ಸೀಸನ್‌ಗಳಲ್ಲಿ ಅಜಪೂತ್, ಕಿಂಗ್ಸ್ ಇಲೆವೆನ್ ಪಂಜಾಬ್‌ ಪರ ಗಮನ ಸೆಳೆದಿದ್ದರು. 2018ರಲ್ಲಿ ಪಂಜಾಬ್ ತಂಡ ಸೇರಿಕೊಂಡಿದ್ದ ಅಂಕಿತ್, 23 ಪಂದ್ಯಗಳಲ್ಲಿ 22 ವಿಕೆಟ್ ಸಾಧನೆ ಹೊಂದಿದ್ದಾರೆ.

ಗೆಳೆಯನ ಹುಟ್ಟುಹಬ್ಬವನ್ನು 'ಕೈಲಾಸಪತಿ'ಯಲ್ಲಿ ಸಂಭ್ರಮಿಸಿದ ಧೋನಿಗೆಳೆಯನ ಹುಟ್ಟುಹಬ್ಬವನ್ನು 'ಕೈಲಾಸಪತಿ'ಯಲ್ಲಿ ಸಂಭ್ರಮಿಸಿದ ಧೋನಿ

2014ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಬೌಲ್ಟ್, ಡೆಲ್ಲಿ ಪರ ಆಡಿದ್ದು ಮಾತ್ರ 2018 ಮತ್ತು 2019ರ ಸೀಸನ್‌ಗಳಲ್ಲಿ.

ಐದರಲ್ಲಿ 5 ವಿಕೆಟ್‌ಗಳು

ಐದರಲ್ಲಿ 5 ವಿಕೆಟ್‌ಗಳು

ಕಳೆದ ಸೀಸನ್‌ನಲ್ಲಿ ಕೇವಲ 5 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಬೌಲ್ಟ್ ಐದು ವಿಕೆಟ್‌ಗಳನ್ನು ಪಡೆದಿದ್ದರು. ಡೆಲ್ಲಿಯಲ್ಲಿ ದಕ್ಷಿಣ ಆಫ್ರಿಕಾ ಮಾರಕ ವೇಗಿ ಕಾಗಿಸೋ ರಬಾಡಾ ಮಿಂಚುತ್ತಿದ್ದರಿಂದ ಬೌಲ್ಟ್, ಪ್ಲೇಯಿಂಗ್ 11ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.

ಅವಿಸ್ಮರಣೀಯ ಬೌಲಿಂಗ್ ಸಾಧನೆ

ಅವಿಸ್ಮರಣೀಯ ಬೌಲಿಂಗ್ ಸಾಧನೆ

ಅಂಕಿತ್ ರಜಪೂತ್‌ 2018ರ ಐಪಿಎಲ್‌ ಸೀಸನ್‌ನಲ್ಲಿ ಪಂಜಾಬ್‌ ಪರ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 14 ರನ್ನಿಗೆ 5 ವಿಕೆಟ್ ಪಡೆದಿದ್ದರು. ಇದು ಅಂಕಿತ್ ಅವರ ಐಪಿಎಲ್‌ನ ಗಣನೀಯ ಸಾಧನೆಯಾಗಿ ಗುರುತಿಸಿಕೊಂಡಿತ್ತು. ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರರಲ್ಲಿ ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಫಿಗರ್‌ ಆಗಿ ರಜಪೂತ್‌ ಈ ಸಾಧನೆ ಗಮನ ಸೆಳೆದಿತ್ತು.

ಗೌತಮ್ ಪಂಜಾಬ್ ಪಾಲು

ಗೌತಮ್ ಪಂಜಾಬ್ ಪಾಲು

ಕೆ ಗೌತಮ್ ಅವರನ್ನು 2018ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ 6.2 ಕೋಟಿ ರೂ.ಗೆ ಖರೀದಿಸಿತ್ತು. ಈ ಬಾರಿ ಕಿಂಗ್ಸ್ ಇಲೆವೆನ್‌ ತಂಡ ಗೌತಮ್ ಅವರನ್ನು 3 ಕೋಟಿ ರೂ.ಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಎವಿನ್ ಲೆವಿಸ್ ರಿಲೀಸ್

ಎವಿನ್ ಲೆವಿಸ್ ರಿಲೀಸ್

ಮುಂಬೈ ಇಂಡಿಯನ್ಸ್ ತಂಡ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಎವಿನ್ ಲೆವಿಸ್ ಅವರನ್ನು ಹೊರಬಿಟ್ಟು ಧವಲ್ ಕುಲಕರ್ಣೀ ಅವರನ್ನು ತಂಡಕ್ಕೆ ತಂದಿದೆ. 2018ರ ಹರಾಜಿನಲ್ಲಿ ಮುಂಬೈ ತಂಡ ಲೆವಿಸ್ ಅವರನ್ನು 3.8 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಕಳೆದ ಐಪಿಎಲ್ ಟೂರ್ನಿ ವೇಳೆ ಲೆವಿಸ್ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೀಡಾಗಿದ್ದರು. ಅನಂತರ ಲೆವಿಸ್ ಚೇತರಿಸಿಕೊಂಡರಾದರೂ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಕ್ವಿಂಟನ್‌ ಡಿ ಕಾಕ್, ರೋಹಿತ್ ಶರ್ಮಾ ಜೊತೆ ಯಶಸ್ವಿ ಆರಂಭಿಕರಾಗಿ ಕಾಣಿಸಿಕೊಂಡಿದ್ದರಿಂದ ಲೆವಿಸ್ ಬಹುತೇಕ ಬೆಂಚ್‌ ಪ್ಲೇಯರ್ ಆಗಿ ಉಳಿದಿದ್ದರು.

Story first published: Wednesday, November 13, 2019, 23:36 [IST]
Other articles published on Nov 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X