NZ vs PAK T20: ನ್ಯೂಜಿಲೆಂಡ್ ಭರ್ಜರಿ ಜಯ: ಸರಣಿ ವಶ
ಭರವಸೆಯ ಆಟಗಾರರಾದ ಟಿಮ್ ಸೀಫರ್ಟ್ (ಅಜೇಯ 97), ಜೇಮ್ಸ್ ನೀಶಮ್ (22 ರನ್‌ಗೆ 5 ವಿಕೆಟ್) ಇವರುಗಳ ಭರ್ಜರಿ ಆಟದ ನೆರವಿನಿಂದ ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಪಾಕ್ ವಿರುದ್ಧ ಜಯ ಸಾಧಿಸಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಐದನೇ ಟಿ20 ಪಂದ್ಯವನ್ನು ಗೆದ್ದ ಕಿವೀಸ್ 4-1ರಿಂದ ಸರಣಿಯನ್ನು ವಶಕ್ಕೆ ಪಡೆದಿದೆ. ಟೂರ್ನಿಯುದ್ದಕ್ಕೂ ಸೊಗಸಾದ ಆಟವನ್ನು ಆಡಿದ ನ್ಯೂಜಿಲೆಂಡ್ ತಂಡ ಅಬ್ಬರಿಸಿದೆ.
ಬುಧವಾರ ನಡೆದ ಐದನೇ ಪಂದ್ಯದಲ್ಲಿ ಟಾಸ್ ಕಿವೀಸ್ ತಂಡದ ಪಾಲಾಗಿದೆ. ಈ ವೇಳೆ ಮೊದಲ ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ಆತಿಥೇಯರು ಕೈಗೊಂಡರು. ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 128 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ನ್ಯೂಜಿಲೆಂಡ್ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 131 ರನ್ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಆತಿಥೇಯ ತಂಡದ ಆಡಿದ ಐದು ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿ ಸರಣಿಯನ್ನು ವಶಕ್ಕೆ ಪಡೆದಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡದ ಆರಂಭಿಕರಾದ ಮೊಹಮ್ಮದ್ ಹ್ಯಾರಿಸ್, ಹಸನ್ ನವಾಜ್, ಒಮೈರ್ ಯೂಸುಫ್, ಉಸ್ಮಾನ್ ಖಾನ್, ಅಬ್ದುಲ್ ಸಮದ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಕಿವೀಸ್ ತಂಡದ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ಎಡವಿದರು. ಆರನೇ ವಿಕೆಟ್‌ಗೆ ಸಲ್ಮಾನ್ ಅಘಾ ಹಾಗೂ ಶಹಬಾದ್ ಖಾನ್ ತಂಡದ ಮೊತ್ತವನ್ನು ಹಿಗ್ಗಿಸುವ ಕೆಲಸವನ್ನು ಮಾಡಿದರು. ಈ ಜೋಡಿ 35 ಎಸೆತಗಳಲ್ಲಿ 54 ರನ್ ಸಿಡಿಸಿತು. ಶಹಬಾದ್ ಖಾನ್ 28 ರನ್ ಬಾರಿಸಿದ್ದಾಗ ಜೇಮ್ಸ್ ನೀಶಾಮ್ ತೋಡಿದ ಖೆಡ್ಡಾಗೆ ಬಲಿಯಾದ್ರು.
ಮಧ್ಯಮ ಕ್ರಮಾಂಕದ ಆಟಗಾರ ಹಾಗೂ ನಾಯಕ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಇವರು 39 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿದರು. ಇವರ ಬ್ಯಾಟಿಂಗ್ ಪರಿಣಾಮವೇ ಪಾಕ್ ತಂಡ ಸಾಧಾರಣ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು.

ನೀಶಾಮ್ ಐದು ವಿಕೆಟ್
ಜೇಮ್ಸ್ ನೀಶಾಮ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಇವರು 4 ಓವರ್ ಬೌಲ್ ಮಾಡಿ 22 ರನ್ ನೀಡಿ 5 ವಿಕೆಟ್ ಕಬಳಿಸಿದರು. ಜಾಕೋಬ್ ಡಫ್ಫಿ 2 ವಿಕೆಟ್ ಪಡೆದರು.
ಪಾಕ್ ವಿರುದ್ಧ 5 ವಿಕೆಟ್ ಪಡೆದ ಕಿವೀಸ್ ಬೌಲರ್ಸ್
ಟಿಮ್ ಸೌಥಿ - 18 ರನ್ 5 ವಿಕೆಟ್
ಜೇಮ್ಸ್ ಫಾಕ್ನರ್ - 27 ರನ್ 5 ವಿಕೆಟ್
ಡ್ವೈನ್ ಪ್ರಿಟೋರಿಯಸ್ - 17 ರನ್ 5 ವಿಕೆಟ್
ಸ್ಪೆನ್ಸರ್ ಜಾನ್ಸನ್ - 26 ರನ್ 5 ವಿಕೆಟ್
ಜೇಮ್ಸ್ ನೀಶಮ್ - 22 ರನ್ 5 ವಿಕೆಟ್
ಸಾಧಾರಣ ಮೊತ್ತವನ್ನು ಹಿಂಬಾಲಿಸಿದ ಕಿವೀಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಟಿಮ್ ಸೀಫರ್ಟ್ ಹಾಗೂ ಫಿನ್ ಅಲೇನ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 6.2 ಓವರ್‌ಗಳಲ್ಲಿ 93 ರನ್ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿತು. ಈ ವೇಳೆ ಫಿನ್ ಅಲೇನ್ 27 ರನ್ ಬಾರಿಸಿ ಔಟ್ ಆದರು. ಟಿಮ್ ಸೀಫರ್ಟ್ 38 ಎಸೆತಗಳಲ್ಲಿ 6 ಬೌಂಡರಿ, 10 ಸಿಕ್ಸರ್ ಸಹಾಯದಿಂದ 97 ರನ್ ಬಾರಿಸಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications