For Quick Alerts
ALLOW NOTIFICATIONS  
For Daily Alerts
 

ಹಿರಿಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌: 10ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ರೈಲ್ವೇಸ್‌

Senior t20 championship

ಹಿರಿಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಮಹಾರಾಷ್ಟ್ರ ವಿರುದ್ಧ ಗೆಲುವು ಸಾಧಿಸಿದ ರೈಲ್ವೇಸ್ ವನಿತೆಯರು ಮತ್ತೊಮ್ಮೆ ಟೈಟಲ್‌ ಗೆಲ್ಲುವ ಮೂಲಕ ಅಬ್ಬರಿಸಿದ್ದಾರೆ. ಮಹಾರಾಷ್ಟ್ರ ನಾಯಕಿ ಸ್ಮೃತಿ ಮಂದಾನ ಸಿಡಿಸಿದ 84ರನ್‌ಗಳು ವ್ಯರ್ಥವಾಗಿದ್ದು, ರೈಲ್ವೇಸ್ ವನಿತೆಯರು ಏಳು ವಿಕೆಟ್‌ಗಳಿಂದ ಟೂರ್ನಿ ಜಯಿಸಿದ್ದಾರೆ.

ಮಹಾರಾಷ್ಟ್ರ ಮಹಿಳಾ ತಂಡದ ನಾಯಕಿ ಸೃತಿ ಮಂದಾನ 56 ಎಸೆತಗಳಲ್ಲಿ 84 ರನ್‌ ಕಲೆಹಾಕುವ ಮೂಲಕ ತಂಡವು 4 ವಿಕೆಟ್ ನಷ್ಟಕ್ಕೆ 160ರನ್ ಗಡಿ ಮುಟ್ಟಲು ಕೊಡುಗೆಯನ್ನ ನೀಡಿದ್ರು. ಇದಕ್ಕೆ ಉತ್ತರವಾಗಿ ರೈಲ್ವೇಸ್ ಪರ ಎಸ್‌. ಮೇಘನಾ 52, ಡಿ. ಹೇಮಲತಾ 65 ರನ್ ಸಿಡಿಸುವ ಮೂಲಕ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ರೈಲ್ವೇಸ್ ಟೈಟಲ್ ಗೆದ್ದಿತು.

ರೈಲ್ವೇಸ್ ಭರ್ಜರಿ ಬ್ಯಾಟಿಂಗ್‌ಗೂ ಮುನ್ನ ಸ್ಮೃತಿ ಮಂದಾನ ಎದುರಾಳಿ ಬೌಲರ್‌ಗಳ ವಿರುದ್ಧ 11 ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ 84ರನ್ ಕಲೆಹಾಕಿದ್ದಷ್ಟೇ ಅಲ್ಲದೆ, ಶಿವಾಲಿ ಶಿಂದೆ ಜೊತೆ 74ರನ್ ಜೊತೆಯಾಟ ಕಲೆಹಾಕಿದ್ದರು.

ರೈಲ್ವೇಸ್ ಪರ ಆಫ್ ಸ್ಪಿನ್ನರ್ ಸ್ವಾಗತಿಕಾ ರಾತ್ ಅವರು 33 ರನ್‌ಗಳಿಗೆ 3 ವಿಕೆಟ್‌ಗಳೊಂದಿಗೆ ಮರಳಿದರು, ಆದರೆ ನಾಯಕಿ ಸ್ನೇಹ್ ರಾಣಾ ಒಂದು ವಿಕೆಟ್ ಮಾತ್ರ ಪಡೆದರು.

David Warner ಶತಕ ಗಳಿಸಲು ಬಹಳ ಹತ್ತಿರದಲ್ಲಿದ್ದರು | Oneindia Kannada

161 ರನ್‌ಗಳನ್ನು ಬೆನ್ನಟ್ಟಿದ ರೈಲ್ವೇಸ್‌ನ ಆರಂಭಿಕ ಆಟಗಾರ್ತಿ ಎಸ್‌ ಮೇಘನಾ 32 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳ ನೆರವಿನಿಂದ 52 ರನ್‌ಗಳೊಂದಿಗೆ ಮಹಾರಾಷ್ಟ್ರ ದಾಳಿಯನ್ನು ಎದುರಿಸಿದರು. ಈಕೆಗೆ ಉತ್ತಮ ಸಾಥ್ ನೀಡಿದ ಡಿ. ಹೇಮಲತಾ ಒಂಬತ್ತು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳೊಂದಿಗೆ 65 ರನ್ ಕಲೆಹಾಕಿದ್ರು.

Story first published: Friday, May 6, 2022, 16:38 [IST]
Other articles published on May 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+