* ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹೀಗೆ ಐಪಿಎಲ್‌ನ ಮುಂದಿನ ಆವೃತ್ತಿಯಲ್ಲಿ ಆಡುವ ಘೋಷಣೆ ಮಾಡಿದ ಆಟಗಾರ. ಮುಂದಿನ ವರ್ಷ ನಡೆಯಲಿರುವ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಾನು ಆಡಲಿದ್ದೇನೆ ಎಂದು ಮಿಚೆಲ್ ಸ್ಟಾರ್ಕ್ ಪ್ರಕಟಿಸಿದ್ದಾರೆ. ಅದೇ ವರ್ಷ ಟಿ20 ವಿಶ್ವಕಪ್ ಟೂರ್ನಿ ನಡೆಯಲಿರುವ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ ಸ್ಟಾರ್ಕ್.
* ಭಾರತದಲ್ಲಿ ನಡೆಯಲಿರುವ ಏಕದಿನ ವಿರ್ಶವಕಪ್‌ನಲ್ಲಿ ಮಿಚೆಲ್ ಮಾರ್ಶ್ ಆರಂಬಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದು ಡೇವಿಡ್ ವಾರ್ನರ್ ನಾಲ್ಕನೇ ಕ್ರಮಾಂಕದಲ್ಲಿ ಅಡಲಿದ್ದಾರೆ ಎನ್ನಲಾಗಿತ್ತು. ಸ್ವತಃ ಆಸ್ಟ್ರೇಲಿಯಾದ ಮಾಧ್ಯಮಗಳು ಕೂಡ ಈ ವಿಚಾರವಾಗಿ ಸಾಕಷ್ಟು ವರದಿಗಳನ್ನು ಮಾಡಿತ್ತು. ಆದರೆ ಇದನ್ನು ಮಿಚೆಲ್ ಮಾರ್ಶ್ ಅಲ್ಲಗಳೆದಿದ್ದು ತಾನು ಆರಂಭಿಕನಾಗಿ ಕಣಕ್ಕಿಳಿಯುವುದಿಲ್ಲ ಎಂದಿದ್ದಾರೆ. "ನಾನು ಮಧ್ಯಮಕ್ರಮಾಂಕದಲ್ಲಿ ಆಡುವುದನ್ನು ನಿರೀಕ್ಷಿಸುತ್ತಿದ್ದೇನೆ. ಬದಲಾವಣೆಗಳು ಆಗಬಹುದು, ಆದರೆ ವಾರ್ನರ್ ಏಕದಿನ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ನಮ್ಮಲ್ಲಿ ಡ್ರೆವಿಸ್ ಹೆಡ್ ಹಾಗೂ ಸಾರ್ವಕಾಲಿಕ ಶ್ರೇಷ್ಠ ಮೂರು ಮಾದರಿಯ ಆಟಗಾರ ಇದ್ದಾರೆ. ಹಾಗಾಗಿ ನಾನು ಧೈರ್ಯವಾಗಿ ಹೇಳಬಹುದು ನಾನು ಆರಂಭಿಕನಾಗಿ ಆಡುವುದಿಲ್ಲ ಎಂದು" ಎಂದಿದ್ದಾರೆ ಮಾರ್ಶ್.

* ಸೂಪರ್ 4 ಮೊದಲ ಪಂದ್ಯವನ್ನು ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಪಾಕಿಸ್ತಾನ ತಂಡದ ನಾಯಕ ಮುಂದಿನ ಭಾರತ ವಿರುದ್ಧ ಪಂದ್ಯದ ಕುರಿತು ಮಾತನಾಡಿದ್ದಾರೆ. ದೊಡ್ಡ ಗೆಲುವು ಯಾವಾಗಲೂ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಭಾರತ ವಿರುದ್ಧದ 2023ರ ಏಷ್ಯಾ ಕಪ್ ಸೂಪರ್ 4 ಪಂದ್ಯಕ್ಕೂ ಮುನ್ನ ತಾವು ಒತ್ತಡದಲ್ಲಿಲ್ಲ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೇಳಿದ್ದಾರೆ. "ನಿಜವಾಗಿಯೂ ನಾವು ಒತ್ತಡದಲ್ಲಿ ಇಲ್ಲ. ಈ ಗೆಲುವು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ನಾವು ಯಾವಾಗಲೂ ದೊಡ್ಡ ಪಂದ್ಯಕ್ಕೆ ಸಿದ್ಧರಿದ್ದೇವೆ. ಭಾರತ ವಿರುದ್ಧದ ಮುಂದಿನ ಪಂದ್ಯದಲ್ಲಿ ನಾವು ನಮ್ಮ 100 ಪ್ರತಿಶತವನ್ನು ನೀಡುತ್ತೇವೆ," ಎಂದು ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡದ ಗೆಲುವಿನ ನಂತರ ಬಾಬರ್ ಅಜಂ ತಿಳಿಸಿದರು.
* ಮುಂದಿನ ತಿಂಗಳು ಭಾರತದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ ನೆದರ್ಲೆಂಡ್ಸ್ 15 ಆಟಗಾರರ ಪಡೆಯನ್ನು ಘೋಷಣೆ ಮಾಡಿದೆ. ತಂಡದ ಅನುಭವಿ ಜೋಡಿಯಾದ ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಕಾಲಿನ್ ಅಕರ್‌ಮನ್ ಈ ತಂಡದ ಮೂಲಕ ಮತ್ತೆ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ನೆದರ್ಲೆಂಡ್ಸ ತಂಡದಲ್ಲಿ ಈ ಇಬ್ಬರು ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ನೆದರ್ಲೆಂಡ್ಸ್ ತಂಡ ಹೀಗಿದೆ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ'ಡೌಡ್, ಬಾಸ್ ಡಿ ಲೀಡ್, ವಿಕ್ರಮ್ ಸಿಂಗ್, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವ್, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್.