Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನದ 7ನೇ ಆಟಗಾರನಿಗೆ ಕೊರೊನಾವೈರಸ್ ಪಾಸಿಟಿವ್

Seventh Pakistan Cricketer Tests Positive for Coronavirus in New Zealand

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ 7ನೇ ಆಟಗಾರನಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಈ ಹಿಂದೆ ಒಟ್ಟು 6 ಮಂದಿ ಪಾಕ್ ಆಟಗಾರರಿಗೆ ಸೋಂಕಿರುವುದು ಪತ್ತೆಯಾಗಿತ್ತು. ಕೋವಿಡ್-19 ಪಾಸಿಟಿವ್ ಬಂದಿರುವುದರಿಂದಾಗಿ ಪಾಕ್ ಆಟಗಾರರಿಗೆ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ.

ನಾಲ್ಕು ದಿನಗಳ ಹಿಂದಷ್ಟೇ ಪಾಕ್ ಆಟಗಾರರು ನ್ಯೂಜಿಲೆಂಡ್‌ಗೆ ಬಂದಿದ್ದರು. ಕೊರೊನಾ ಪರೀಕ್ಷೆಯ ವೇಳೆ ಆರಂಭದಲ್ಲಿ 6 ಮಂದಿಗೆ ಸೋಂಕು ತಗುಲಿತ್ತು. ನ್ಯೂಜಿಲೆಂಡ್‌ನ ಬಿಗಿ ಕ್ವಾರಂಟೈನ್ ನಿಯಮಗಳ ಬಗ್ಗೆ ಪಾಕ್ ತಂಡಕ್ಕೆ ಅಂತಿಮ ಎಚ್ಚರಿಕೆ ನೀಡಲಾಗಿತ್ತು. ಅದಾಗಿ ಈಗ ಮತ್ತೊಂದು ಪ್ರಕರಣ ಪತ್ತೆಯಾಗಿದೆ.

ನ್ಯೂಜಿಲೆಂಡ್‌ಗೆ ಹಾರುವ ಮುನ್ನ ಪಾಕಿಸ್ತಾನದ ಎಲ್ಲಾ ಆಟಗಾರರರಿಗೆ ನೆಗೆಟಿವ್ ಬಂದಿತ್ತು. ನ್ಯೂಜಿಲೆಂಡ್‌ಗೆ ಬಂದು ಒಂದು ದಿನದಲ್ಲಿ 6 ಕ್ರಿಕೆಟಿಗರಿಗೆ ಸೋಂಕು ತಗುಲಿದ್ದು ಪತ್ತೆಯಾಗಿತ್ತು. 'ಪಾಕಿಸ್ತಾನ ತಂಡದ ಒಬ್ಬ ಹೆಚ್ಚುವರಿ ಆಟಗಾರನಿಗೆ ಸೋಂಕು ತಗುಲಿದೆ' ಎಂದು ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ನ್ಯೂಜಿಲೆಂಡ್ vs ಪಾಕಿಸ್ತಾನ ತಂಡಗಳು ಡಿಸೆಂಬರ್ 18ರಿಂದ ಮೂರು ಪಂದ್ಯಗಳ ಟಿ20ಐ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿವೆ. ಟೆಸ್ಟ್ ಸರಣಿ ಡಿಸೆಂಬರ್ 26ರಿಂದ ಆರಂಭಗೊಳ್ಳಲಿವೆ.

Story first published: Saturday, November 28, 2020, 12:00 [IST]
Other articles published on Nov 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+