ಲಂಕಾ ಕ್ರಿಕೆಟ್ : ಮಂಚವೇರಿದರೆ ಟೀಂಗೆ ಆಯ್ಕೆ?

ತಂಡಕ್ಕೆ ಆಯ್ಕೆ ಮಾಡಬೇಕಾದರೆ ಅಡ್ಜೆಸ್ಟ್ ಮೆಂಟ್ ಮಾಡಿಕೊಳ್ಳಬೇಕಾಗುತ್ತದೆ. ಮಂಚವೇರಿ ಆಯ್ಕೆದಾರರಿಗೆ ಸುಖ ನೀಡಿದವರು ಆಯ್ಕೆಯಾಗುವುದು ಖಚಿತವಾಗಿದೆ. ಈ ರೀತಿ ಆಫರ್ ಗಳು ಟೀಂ ಮ್ಯಾನೇಜ್ಮೆಂಟ್ ಕಡೆಯಿಂದ ಕಾಮನ್ ಆಗಿವೆ ಎಂದು ಮಹಿಳಾ ಕ್ರಿಕೆಟರ್ ಗಳು ಆರೋಪ ಮಾಡಿದ್ದಾರೆ ಎಂದು ಶ್ರೀಲಂಕಾದ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ ಎಲ್ ಸಿ) ಕ್ರಮ ಕೈಗೊಂಡಿದ್ದು, ಮಾಜಿ ನಾಯಕ ಹಾಲಿ ಪುರುಷರ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಸನತ್ ಜಯಸೂರ್ಯ ಅವರ ನೇತೃತ್ವದ ತನಿಖಾ ತಂಡವನ್ನು ನೇಮಿಸಿದೆ. ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಮೋಹನ್ ಡಿಸಿಲ್ವ, ಕಾಯದರ್ಶಿ ನಿಶಾಂತಾ ರಣತುಂಗ, ಉಪಕಾರ್ಯದರ್ಶಿ ಹಿರಾಂತ ಪೆರೆರಾ ಅವರು ಸಮಿತಿಯ ಇನ್ನಿತರ ಸದಸ್ಯರಾಗಿದ್ದಾರೆ.
ಈ ಸಮಿತಿ ಅಕ್ಟೋಬರ್ 30ರಿಂದ ತನ್ನ ತನಿಖೆ ಆರಂಭಿಸಲಿದ್ದು, ಮಹಿಳಾ ಕ್ರಿಕೆಟರ್ ಗಳ ಹೇಳಿಕೆ ಪಡೆಯಲಿದೆ. ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಿಗೆ ಸಮನ್ಸ್ ಜಾರಿಗೊಳಿಸಲಿದ್ದು, ಕೋಚ್ ಸೇರಿದಂತೆ ಟೀಂ ಮ್ಯಾನೇಜ್ಮೆಂಟ್ ನ ಇತರೆ ಸದಸ್ಯರು ವಿಚಾರಣೆಗೊಳಪಡಲಿದ್ದಾರೆ ಎಂದು ಶ್ರೀಲಂಕಾದಡೈಲಿ ಮಿರರ್ ವರದಿ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications