Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶದಾಬ್ ಖಾನ್ ವಿರುದ್ಧ ಬ್ಲಾಕ್‌ಮೇಲ್ ಆರೋಪ, ವಾಟ್ಸಾಪ್ ಮೆಸೇಜ್ ಲೀಕ್!

Shadab Khan accused of blackmail by Dubai-based woman

ಇಸ್ಲಮಾಬಾದ್, ಫೆಬ್ರವರಿ 12: ಪಾಕಿಸ್ತಾನ ಆಲ್ ರೌಂಡರ್ ಶದಾಬ್ ಖಾನ್ ವಿರುದ್ಧ ದುಬೈ ಮಹಿಳೆಯೊಬ್ಬರು ಬ್ಲಾಕ್‌ಮೇಲ್ ಆರೋಪ ಮಾಡಿದ್ದಾರೆ. ಖಾನ್ ತನಗೆ ಬೆದರಿಕೆಯೊಡ್ಡಿರುವುದಾಗಿ ಮಹಿಳೆ ಹೇಳಿಕೊಂಡಿರುವ ವಾಟ್ಸಾಪ್ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘವಾಗಿ ಬರೆದುಕೊಂಡು ಪೋಸ್ಟ್ ಹಾಕಿರುವ ಮಹಿಳೆ, ಆ ಪೋಸ್ಟ್‌ನಲ್ಲಿ ಶದಾಬ್ ಮತ್ತು ತನ್ನ ನಡುವಿನ ಸಂಬಂಧ, ತಮ್ಮಿಬ್ಬರ ಸುತ್ತಾಟ, ಶದಾಬ್ ಬೆದರಿಕೆ ಬಗ್ಗೆ ವಿವರಿಸಿದ್ದಾರೆ. ವೈರಲ್ ಆಗಿರುವ ವಾಟ್ಸಾಪ್ ಸ್ಕ್ರೀನ್ ಶಾಟ್‌ನಲ್ಲಿ ಮಹಿಳೆ ಆರೋಪಕ್ಕೆ ಸಂಬಂಧಿಸಿ ಮೆಸೇಜ್‌ಗಳು ಕಾಣಿಸುತ್ತಿವೆ.

ಶದಾಬ್ ಮೇಲೆ ಆರೋಪಿಸಿರುವ ಮಹಿಳೆ ಹೆಸರು ಅಶ್ರೀನಾ ಸಾಫಿಯಾ. ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗುವಂತೆ ನಡೆದುಕೊಂಡರೆ ಅಶ್ರೀನಾ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಶದಾಬ್, ಅಶ್ರೀನಾಗೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್‌ ಆಟಗಾರರು ಇಂಥದ್ದೇ ಸಂಗತಿಗಳಿಗೆ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಹಿಂದೆ, ಇಮಾಮ್ ಉಲ್ ಹಕ್ ಅನೇಕ ಹೆಂಗಸರ ಜೊತೆ ಸಂಪರ್ಕ ಇಟ್ಟುಕೊಂಡಿರುವುದಾಗಿ ಆರೋಪ ಕೇಳಿ ಬಂದಿತ್ತು. ಆ ಬಳಿಕ ಪಾಕ್ ಯುವ ಆಟಗಾರ, ಶಾಹೀನ್ ಅಫ್ರಿದಿ ವೀಡಿಯೋ ಕಾಲ್‌ನಲ್ಲಿ ಹಸ್ತಮೈಥುನ ಮಾಡಿರುವುದಾಗಿ ಮಹಿಳೆಯೊಬ್ಬರು ದೂರಿದ್ದ ಸಂಗತಿಯೂ ಈ ಹಿಂದೆ ನಡೆದಿತ್ತು.

Story first published: Sunday, May 3, 2020, 10:58 [IST]
Other articles published on May 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+