Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ರಾಹುಲ್, ನಾಮ್ ತೋ ಸುನಾ ಹೋಗಾ': ಕೆಕೆಆರ್‌ ಗೆಲುವಿಗೆ ಶಾರುಖ್ ಪ್ರತಿಕ್ರಿಯೆ

Shah Rukh Khan shouts his famouse dialogue Rahul, naam toh suna hoga on Rahul Tripathi

ಅಬುಧಾಬಿ: ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪಕ್ಕಾ ಗೆಲ್ಲುವ ಪಂದ್ಯವದು. ಆದರೆ ಬುಧವಾರ (ಅಕ್ಟೋಬರ್ 7) ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 21ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸಿಎಸ್‌ಕೆ ವಿರುದ್ಧ ರೋಚಕ 10 ರನ್‌ಗಳ ಗೆಲುವು ದಾಖಲಿಸಿತ್ತು.

ದಿನೇಶ್ ಕಾರ್ತಿಕ್ ಕ್ಯಾಪ್ಟನ್ಸಿಯ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ ಪ್ರಮುಖ ಕಾರಣರಾಗಿದ್ದು ರಾಹುಲ್ ತ್ರಿಪಾಠಿ. ಆರಂಭಿಕರಾಗಿ ಆಡಿದ್ದ ರಾಹುಲ್ 51 ಎಸೆತಗಳಿಗೆ 81 ರನ್ ಬಾರಿಸಿದ್ದರು. ಇನ್ನು ಶುಬ್‌ಮನ್ ಗಿಲ್ 11, ನಿತೀಶ್ ರಾಣಾ 9, ಸುನಿಲ್ ನರೈನ್ 17, ದಿನೇಶ್ ಕಾರ್ತಿಕ್ 12, ಪ್ಯಾಟ್ ಕಮಿನ್ಸ್ 17 ರನ್‌ ಸೇರ್ಪಡೆಯೊಂದಿಗೆ ಕೆಕೆಆರ್ 10 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು.

ಕೆಕೆಆರ್ ಪಂದ್ಯ ಗೆದ್ದ ಬಳಿಕ ರಾಹುಲ್ ತ್ರಿಪಾಠಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲು ಹೋಗುವಾಗ ಕೆಕೆಆರ್ ಮಾಲೀಕ ಶಾರುಖ್ ಖಾನ್, 'ರಾಹುಲ್, ನಾಮ್ ತೋ ಸುನಾ ಹೋಗಾ,' ಎಂದು ಕೂಗಿ ಹೇಳಿದ್ದರು. ಪಂದ್ಯ ಗೆಲ್ಲಿಸಿದ್ದ ತ್ರಿಪಾಠಿಯನ್ನು ಶಾರುಖ್ ಮೆಚ್ಚಿಕೊಂಡ ಬಗೆಗೆ ಕಾಮೆಂಟೇಟರ್, ನಿರೂಪಕ ಹರ್ಷ ಭೋಗ್ಲೆ ಕೂಡ ನಗು ಚೆಲ್ಲಿದ್ದರು.

ರಾಹುಲ್ ಹೆಸರಿಗೂ ಸಾರೂಖ್‌ಗೂ ವಿಶೇಷತೆಯಿದೆ. ಅದೇನೆಂದರೆ ಶಾರುಖ್ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಅವರ ಹೆಸರು ರಾಹುಲ್ ಎಂದಿರುತ್ತಿತ್ತು. ಅಂದ್ಹಾಗೆ ಶಾರುಖ್ ಈ ಬಾರಿ ಕಿರುಚಿದ್ದು ಅವರು 1997ರಲ್ಲಿ ನಟಿಸಿದ್ದ 'ದಿಲ್ ತೊ ಪಾಗಲ್‌ ಹೈ' ಸಿನಿಮಾದ್ದು. ಆ ಸಿನಿಮಾದಲ್ಲಿ ರಾಹುಲ್, ನಾಮ್ ತೋ ಸುನಾ ಹೋಗಾ ಡೈಲಾಗ್ ತುಂಬಾ ಫೇಮಸ್ ಆಗಿತ್ತು.

Story first published: Thursday, October 8, 2020, 12:46 [IST]
Other articles published on Oct 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+