Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಲಿವುಡ್ ಅಂಗಳದಲ್ಲಿ ಶಾರುಖ್ ಖಾನ್ ಕ್ರಿಕೆಟ್ ಮ್ಯಾಜಿಕ್

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಮುಗಿದು ದಿನಗಳೇ ಕಳೆದಿವೆ. ಈ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಈ ಬಾರಿ ಪ್ಲೇ ಆಫ್‌ ಹಂತವನ್ನು ತಲುಪುವಲ್ಲಿ ವಿಫಲವಾಗಿದೆ. ಆದರೂ ಸಹ ಈ ತಂಡ ಸದ್ಯ ಭಾರೀ ಸುದ್ದಿಯಲ್ಲಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಹಾಗೂ ನೈಟ್ ರೈಡರ್ಸ್ ಸಹ-ಮಾಲೀಕ ಶಾರುಖ್ ಖಾನ್, ನೂತನ 'ನೈಟ್ ರೈಡರ್ಸ್ ಕ್ರಿಕೆಟ್ ಮೈದಾನ'ವನ್ನು ಉದ್ಘಾಟಿಸಿದ್ದಾರೆ.

ಈ ಸುಸಜ್ಜಿತ ಕ್ರಿಕೆಟ್‌ ಮೈದಾನ ಮೇಜರ್ ಲೀಗ್‌ ಕ್ರಿಕೆಟ್‌ ಟೂರ್ನಿಯ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಮೂಲಕ ಈ ಮೈದಾನ ಅಧಿಕೃತವಾಗಿ ಪಂದ್ಯಗಳಿಗೆ ಆತಿಥ್ಯ ನೀಡಲಿದೆ. ಮೈದಾನ ಉದ್ಘಾಟನಾ ಪಂದ್ಯದಲ್ಲಿ ಲಾಸ್ ಏಂಜಲೀಸ್ ನೈಟ್‌ ರೈಡರ್ಸ್‌ ಹಾಗೂ ವಾಷಿಂಗ್ಟನ್‌ ಫ್ರೀಡಂ ತಂಡಗಳು ಕಾದಾಟ ನಡೆಸಿದವು.

Shah Rukh Khan

ಈ ಸ್ಮರಣೀಯ ಕಾರ್ಯಕ್ರಮದ ಬಳಿಕ ಶಾರುಖ್ ಖಾನ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂತಸವನ್ನು ಹಂಚಿಕೊಡಿದ್ದಾರೆ. ನಾನು ಬಹುದಿನಗಳಿಂದ ಕಂಡ ಒಂದು ಕನಸು ನನಸಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನರು ನೋಡುವ ಕ್ರೀಡೆಯಾದ ಕ್ರಿಕೆಟ್‌ಗೆ ಲಾಸ್‌ ಏಂಜಲೀಸ್‌ನಲ್ಲಿ ಮೈದಾನ ಕಟ್ಟುವುದು ದೊಡ್ಡ ಕನಸು. ಇದು ನನಸಾಗಿದೆ ಎಂದು ಶಾರುಖ್‌ ಬರೆದುಕೊಂಡಿದ್ದಾರೆ.

ಈ ಕ್ರೀಡಾಂಗಣವನ್ನು ಬರೀ ಕ್ರೀಡೆಯ ದೃಷ್ಟಿಯಿಂದ ಮಾತ್ರ ಕಟ್ಟಿಲ್ಲ. ಬದಲಿಗೆ ಮನೋರಂಜನೆಯ ದೃಷ್ಟಿಯಿಂದಲೂ ನಿರ್ಮಿಸಲಾಗಿದೆ. ಈ ಮೈದಾನ ಲಾಸ್‌ ಏಂಜಿಲೀಸ್‌ನ ಕ್ರಿಕೆಟ್‌ ಅಂಗಳವಾಗಲಿದೆ. ಅಲ್ಲದೆ ನೈಟ್‌ ರೈಡರ್ಸ್‌ ತಂಡದ ತವರು ಸಹ ಆಗಿರಲಿದೆ ಎಂದು ಶಾರುಖ್‌ ಖಾನ್ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

ಏನಿದರ ವೈಶಿಷ್ಟ್ಯತೆ

ನೈಟ್ ರೈಡರ್ಸ್ ಕ್ರಿಕೆಟ್ ಮೈದಾನವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ನಿರ್ಮಿಸಲಾಗಿದೆ. ಐಸಿಸಿ ನಿಯಮಾವಳಿಗಳ ಅಳತೆಯ ಪಿಚ್‌ಗಳನ್ನು ನಿರ್ಮಿಸಲಾಗಿದೆ. ಈ ಮೈದಾನದಲ್ಲಿ ಒಟ್ಟು 8 ಪಿಚ್‌ಗಳು ಇವೆ. ರಾತ್ರಿ ಪಂದ್ಯಗಳನ್ನು ಆಡಲ ಅನುಕೂಲವಾಗಲು 120 ಅಡಿ ಎತ್ತರದ 6 ಬೃಹತ್ ಫ್ಲಡ್‌ಲೈಟ್ ನಿರ್ಮಿಸಲಾಗಿದೆ. ಈ ಮೈದಾನ ನಿರ್ಮಾಣಕ್ಕಾಗಿ ಸುಮಾರು 32,000 ಮೆಟ್ರಿಕ್ ಟನ್‌ಗೂ ಹೆಚ್ಚು ಮಣ್ಣ ಬಳಸಲಾಗಿದೆ. ಈ ಮೈದಾನ ಆಟಗಾರರು ಹಾಗೂ ಅಭಿಮಾನಿಗಳಿಗೆ ಉತ್ತಮ ಅನುಭವ ನೀಡಲಿದೆ.

ಈ ಮೈದಾನವು ಸ್ಥಳೀಯ ಪಂದ್ಯಗಳಿಗೆ ಮಾತ್ರ ಆತಿಥ್ಯ ನೀಡದೆ, 2028ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದ ಕ್ರಿಕೆಟ್‌ ಪಂದ್ಯಗಳಿಗೆ ಈ ಮೈದಾನ ಆತಿಥ್ಯ ನೀಡಲಿದೆ.

Story first published: Friday, July 3, 2026, 19:45 [IST]
Other articles published on Jul 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+