ಶಾಹೀನ್ ಅಫ್ರಿದಿ ವಿರುದ್ಧ ವಿಡಿಯೋ ಕಾಲ್‌ನಲ್ಲಿ ಹಸ್ತಮೈಥುನ ಮಾಡಿದ ಆರೋಪ!

ಇಸ್ಲಮಾಬಾದ್, ನವೆಂಬರ್ 4: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದಿದ್ದ 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ 6 ವಿಕೆಟ್ ಪಡೆದು ಗಮನ ಸೆಳೆದಿದ್ದ ಪಾಕಿಸ್ತಾನ ತಂಡದ ಎಡಗೈ ವೇಗಿ ಶಾಹೀನ್ ಅಫ್ರಿದಿ, ಸದ್ಯ ಬೇಡದ ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ.
ಪಾಕಿಸ್ತಾನದ ಟಿಕ್‌ಟಾಕ್ ಮಾಡೆಲ್ ಹರೀಮ್ ಷಾ, 19ರ ಹರೆಯದ ಪಾಕ್ ಬೌಲರ್ ಶಾಹೀನ್ ಅಫ್ರಿದಿ ವಿರುದ್ಧ ವಿಡಿಯೋ ಕಾಲ್ ವೇಳೆ ಹಸ್ತಮೈಥುನ ನಡೆಸಿ ಅಸಭ್ಯವಾಗಿ ವರ್ತಿಸಿದ ಆರೋಪ ಹೊರೆಸಿದ್ದಾರೆ.
ಶಾಹೀನ್ ಹುಚ್ಚಾಟಿಕೆ ಮಾಡಿದ್ದಾಗಿ ಆರೋಪಿಸಿ, ಹರೀಮ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಯಬಿಟ್ಟಿದ್ದರು.

ಗುಪ್ತಾಂಗ ಪ್ರದರ್ಶನ
ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದಾಗ ಶಾಹೀನ್ ಅಫ್ರಿದಿ ತನ್ನ ಗುಪ್ತಾಂಗ ತೋರಿಸಿದ್ದಲ್ಲದೆ ಹಸ್ತಮೈಥುನವೂ ಮಾಡಿದ್ದಾಗಿ ಹರೀಮ್ ಷಾ ಆರೋಪಿಸಿದ್ದರು. ಶಾಹೀನ್ ಹುಚ್ಚಾಟಿಕೆ ಸಾಬೀತುಪಡಿಸಲು ಹರೀಮ್ ಷಾ, ಟ್ವಿಟರ್‌ನಲ್ಲಿ ವಿಡಿಯೋ ಕೂಡ ಹಾಕಿಕೊಂಡಿದ್ದರು.

ನಾಳೆ ನೀವೇ ಇಲ್ಲಿರುತ್ತೀರಿ
ಶಾಹೀನ್ ಮೇಲೆ ಆರೋಪಿಸಿ ಟ್ವೀಟ್ ಮಾಡಿದ್ದ ಷಾ, 'ಹುಡುಗರೆ, ಯಾವತ್ತಿಗೂ ನಿಮ್ಮ ಗುಪ್ತಾಂಗವನ್ನು ವಿಡಿಯೋದಲ್ಲಿ ತೋರಿಸಿಕೊಳ್ಳಬೇಡಿ. ಇವತ್ತು ಶಾಹೀನ್ ಅಫ್ರಿದಿ ಕತೆ ಹೀಗಾಗಿದೆ, ನಾಳೆ ನಿಮ್ಮದೇ ಕತೆ ಹೀಗಾಗಬಹುದು,' ಎಂದು ಬರೆದುಕೊಂಡಿದ್ದರು.
ವಿಡಿಯೋ ಲೀಕ್ ಮಾಡಿಲ್ಲ
ಹರೀಮ್ ಷಾ ಹಾಕಿಕೊಂಡಿದ್ದ ವಿಡಿಯೋವನ್ನು ಟ್ವಿಟರ್‌ನಿಂದ ಡಿಲೀಟ್ ಮಾಡಲಾಗಿದೆ. ಅಲ್ಲದೆ ತಾನು ಆ ವೈಯಕ್ತಿಕ ವಿಡಿಯೋವನ್ನು ಹರಿಯಬಿಟ್ಟಿಲ್ಲ. ಅದು ತನ್ನ ಅಕೌಂಟ್ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಶಾಹೀನ್ ಅಫ್ರಿದಿ ಮೇಲಿನ ಆರೋಪದಿಂದ ಅವರ ಅಭಿಮಾನಿಗಳ ಬಳಗಕ್ಕಂತೂ ಮುಖಭಂಗವಾಗಿದೆ.

ಹಕ್ ಮಾನ ಹರಾಜು
ಪಾಕಿಸ್ತಾನ ಕ್ರಿಕೆಟ್ ಆಟಗಾರರು ಇಂಥದ್ದೇ ಸಂಗತಿಗಳಿಗೆ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಹಿಂದೆ, ಇಮಾಮ್ ಉಲ್ ಹಕ್ ಅನೇಕ ಹೆಂಗಸರ ಜೊತೆ ಸಂಪರ್ಕ ಇಟ್ಟುಕೊಂಡಿರುವುದಾಗಿ ಆರೋಪ ಕೇಳಿ ಬಂದಿತ್ತು. ಮಹಿಳೆಯರ ಜೊತೆ ಹಕ್ ಮಾಡಿದ್ದ ಪೋಲಿ ವಾಟ್ಸ್‌ಆ್ಯಪ್ ಚಾಟ್ ಲೀಕ್ ಆಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications