ICC Ranking: ಏಕದಿನ ಕ್ರಿಕೆಟ್‌ನಲ್ಲಿ ಶಾಹೀನ್ ಅಫ್ರಿದಿ ಈಗ ನಂಬರ್ 1 ಬೌಲರ್
ಪಾಕಿಸ್ತಾನದ ಪ್ರಮುಖ ವೇಗಿ ಶಾಹೀನ್ ಶಾ ಆಫ್ರಿದಿ ಬುಧವಾರ ಏಕದಿನ ಕ್ರಿಕೆಟ್‌ನಲ್ಲಿ ಹೊಸ ನಂಬರ್ ಒನ್ ಬೌಲರ್ ಆದರು, ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಸಾಧನೆಯನ್ನು ಮಾಡಿದರು.
ಅವರು ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಅವರನ್ನು ಹಿಂದಿಕ್ಕಿದರು. ಬರೋಬ್ಬರಿ ಏಳು ಸ್ಥಾನಗಳನ್ನು ಜಿಗಿಯುವ ಮೂಲಕ ಶಾಹಿನ್ ಅಫ್ರಿದಿ ಮೊದಲ ಸ್ಥಾನಕ್ಕೆ ಬಂದರು.

ಶಾಹೀನ್ ಅಫ್ರಿದಿ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 23 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಪಾಕಿಸ್ತಾನ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರು, ಅದಾದ ಒಂದು ದಿನದ ಬಳಿಕ ಮೊದಲ ಸ್ಥಾನಕ್ಕೆ ಏರಿದ್ದಾರೆ.
100 ವಿಕೆಟ್ ಪಡೆದ ಅಫ್ರಿದಿ
ಶಾಹೀನ್ ಅಫ್ರಿದಿ ಏಕದಿನ ಕ್ರಿಕೆಟ್‌ನಲ್ಲಿ 100ನೇ ವಿಕೆಟ್ ಪಡೆದ ಸಾಧನೆ ಮಾಡಿದರು. 51ನೇ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಅತಿ ವೇಗವಾಗಿ 100 ವಿಕೆಟ್ ಪಡೆದ ಪಟ್ಟಿಯಲ್ಲಿ ಶಾಹಿನ್ ಶಾ ಅಫ್ರಿದಿ ಈಗ ಮೂರನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ಆಡಮ್ ಝಂಪಾ ಅವರೊಂದಿಗೆ 19 ರ ಸರಾಸರಿಯಲ್ಲಿ ಏಳು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸುವ ಮೂಲಕ ವಿಶ್ವಕಪ್‌ನಲ್ಲಿ ಜಂಟಿ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ.
3ನೇ ಸ್ಥಾನಕ್ಕೆ ಕುಸಿದ ಸಿರಾಜ್
ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲ್ದೀಪ್ ಯಾದವ್ ಕ್ರಮವಾಗಿ ಮೂರು ಮತ್ತು ಏಳನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಶ್ವಕಪ್‌ನಲ್ಲಿ ಹೆಚ್ಚಿನ ವಿಕೆಟ್ ಪಡೆಯುವಲ್ಲಿ ವಿಫಲವಾದ ಸಿರಾಜ್ ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ.
ಅಗ್ರಸ್ಥಾನದಲ್ಲಿ ಬಾಬರ್, ಸನಿಹದಲ್ಲಿ ಗಿಲ್
ಏಕದಿನ ಮಾದರಿಯಲ್ಲಿ ಬ್ಯಾಟಿಂಗ್ ರ್‍ಯಾಂಕಿಂಗ್‌ಗೆ ಸಂಬಂಧಪಟ್ಟಂತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ಯುವ ಬ್ಯಾಟರ್ ಶುಭಮನ್ ಗಿಲ್ ಸದ್ಯ 2ನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನದ ಸನಿಹದಲ್ಲಿದ್ದಾರೆ, ನಾಳಿನ ಪಂದ್ಯದಲ್ಲಿ ಗಿಲ್ ದೊಡ್ಡ ಮೊತ್ತ ಕಲೆಹಾಕಿದರೆ ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ಐದು ಮತ್ತು ಏಳನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪೈಕಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿದ್ದಾರೆ.
ಭಾರತದ ಹಾರ್ದಿಕ್ ಪಾಂಡ್ಯ 11ನೇ ಸ್ಥಾನಕ್ಕೆ ಕುಸಿದರೆ, ರವೀಂದ್ರ ಜಡೇಜಾ 13ನೇ ಸ್ಥಾನದಲ್ಲಿ ಮುಂದುವರಿದದ್ದಾರೆ, ಪಾಕಿಸ್ತಾನದ ಶಾದಾಬ್ ಖಾನ್ 20ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications