Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶಾಹೀನ್ ಆಫ್ರಿದಿ: ಟೆಸ್ಟ್ ತಂಡದಿಂದ ಹೊರಬಿದ್ದ ಬಳಿಕ ಮೌನ ಮುರಿದ ಸ್ಟಾರ್ ವೇಗಿ

ಮುಲ್ತಾನ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯ ಸೋಲು ಕಂಡಿದೆ. ಇದಾದ ಬಳಿಕ ನೂತನ ಪಾಕಿಸ್ತಾನ ಆಯ್ಕೆ ಸಮಿತಿ ತಂಡದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇಂಗ್ಲೆಂಡ್ ವಿರುದ್ದದ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯಗಳಿಗೆ ಪಾಕಿಸ್ತಾನ ತಂಡದಿಂದ ನಾಲ್ವರು ಸ್ಟಾರ್ ಆಟಗಾರರನ್ನು ಕೈಬಿಡಲಾಗಿದೆ.

ಪಾಕಿಸ್ತಾನ ತಂಡದಿಂದ ಕೈ ಬಿಟ್ಟಿರುವ ನಾಲ್ವರ ಪೈಕಿ ಒಂದು ಹೆಸರು ವೇಗದ ಬೌಲರ್ ಶಾಹೀನ್ ಆಫ್ರಿದಿ. ಟೆಸ್ಟ್ ತಂಡದಿಂದ ಕೈಬಿಟ್ಟ ನಂತರ ಶಾಹೀನ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮುಲ್ತಾನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶಾನ್ ಮಸೂದ್ ನೇತೃತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಶಾಹೀನ್ ಭರವಸೆ ವ್ಯಕ್ತಪಡಿಸಿದ್ದಾರೆ.

Shaheen Afridi first reaction after being dropped from team

ತಂಡಕ್ಕೆ ಶುಭ ಹಾರೈಕೆ

ಸಾಮಾಜಿಕ ಜಾಲತಾಣ ಟ್ವೀಟರ್ (ಎಕ್ಸ್)ನಲ್ಲಿ ಪೋಸ್ಟ್ ಮಾಡುವ ಮೂಲಕ ಶಾಹೀನ್ ಆಫ್ರಿದಿ ತಂಡಕ್ಕೆ ಶುಭ ಹಾರೈಸಿದ್ದಾರೆ.'ಪಾಕಿಸ್ತಾನ ತಂಡಕ್ಕೆ ಆಲ್ ದಿ ಬೆಸ್ಟ್, ನಾನು ತಂಡಕ್ಕೆ ಮರಳಲು ಪ್ರಯತ್ನಿಸುತ್ತೇನೆ. ನಾವೆಲ್ಲರೂ ನಿಮ್ಮನ್ನು (ತಂಡ) ಪ್ರೋತ್ಸಾಹಿಸುತ್ತಲೇ ಇರುತ್ತೇವೆ ಎಂದು ಬರೆದಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಶಾಹೀನ್ ಆಫ್ರಿದಿ, ಬಾಬರ್ ಅಜಮ್, ನಸೀಮ್ ಶಾ ಮತ್ತು ಸರ್ಫರಾಜ್ ಅಹ್ಮದ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಮೊದಲ ಟೆಸ್ಟ್‌ನಲ್ಲಿ ಅವಮಾನಕರ ಸೋಲಿನ ಬಳಿಕ ರಚಿಸಲಾದ ಹೊಸ ಪಾಕಿಸ್ತಾನ ಆಯ್ಕೆ ಸಮಿತಿಯು ತಂಡದಲ್ಲಿ ಈ ಪ್ರಮುಖ ಬದಲಾವಣೆಯನ್ನು ಮಾಡಿರುವುದು ವಿಶ್ವ ಕ್ರಿಕೆಟ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ಬಲಿಷ್ಠ ಪಾಕಿಸ್ತಾನ ತಂಡ ಕಟ್ಟಲು ನೂತನ ಆಯ್ಕೆ ಸಮಿತಿ ಮಹತ್ವದ ಹೆಜ್ಜೆ ಇಟ್ಟಿದೆ.

ಮೂಲಗಳ ಪ್ರಕಾರ, ಬಾಬರ್, ಶಾಹೀನ್, ನಸೀಮ್ ಮತ್ತು ಸರ್ಫರಾಜ್ ಅವರ ಪ್ರಸ್ತುತ ಫಾರ್ಮ್ ಮತ್ತು ಫಿಟ್‌ನೆಸ್ ಮತ್ತು 2024-25ರ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಪರಿಗಣಿಸಿ ಅವರಿಗೆ ವಿಶ್ರಾಂತಿ ನೀಡಲು ಪಿಸಿಬಿ ಆಯ್ಕೆದಾರರು ನಿರ್ಧರಿಸಿದ್ದಾರೆ. ಹಲವು ಮಾಜಿ ಆಟಗಾರರು ಕೂಡ ಪಿಸಿಬಿಯ ಈ ನಿರ್ಧಾರವನ್ನು ಟೀಕಿಸುತ್ತಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ತಂಡ ಪ್ರಸ್ತುತ ಕೊನೆಯ ಸ್ಥಾನದಲ್ಲಿದೆ. ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಪಾಕಿಸ್ತಾನ ಕಳೆದುಕೊಂಡಿತ್ತು. ಈಗ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್‌ಗಿಂತ 0-1 ಹಿನ್ನಡೆಯಲ್ಲಿದೆ. ಮಂಗಳವಾರದಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಲ್ತಾನ್‌ನಲ್ಲಿದ್ದು, ಮೊದಲ ಪಂದ್ಯ ನಡೆದ ಪಿಚ್‌ನಲ್ಲಿಯೇ ನಡೆಯಲಿದೆ. ಇನ್ನುಳಿದ ಎಲ್ಲಾ ಟೆಸ್ಟ್ ಸರಣಿಗಳನ್ನು ಪಾಕಿಸ್ತಾನ ಗೆದ್ದರೂ ವಿಶ್ವಚಾಂಪಿಯನ್‌ಶಿಪ್ ಫೈನಲ್‌ಗೆ ಆರ್ಹತೆ ಪಡೆಯುವುದು ಕನಸಿನ ಮಾತು. ಏಕೆಂದರೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಗ್ರ ಎರಡು ಸ್ಥಾನಗಳಲ್ಲಿ ಭದ್ರವಾಗಿವೆ.

Story first published: Monday, October 14, 2024, 18:38 [IST]
Other articles published on Oct 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+