
ಮಾಜಿ ಆಸ್ಟ್ರೇಲಿಯಾ ವಿಶ್ವಕಪ್ ವಿಜೇತ ತಂಡದ ನಾಯಕ ರಿಕಿ ಪಾಂಟಿಂಗ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಮುನ್ನ ದೊಡ್ಡ ಹೇಳಿಕೆ ನೀಡಿದ್ದಾರೆ. ಪಾಂಟಿಂಗ್ ಹೇಳಿರುವ ಪ್ರಕಾರ ವೇಗಿ ಶಾಹೀನ್ ಅಫ್ರಿದಿ ಪಾಕಿಸ್ತಾನಕ್ಕೆ ವಿರಾಟ್ ಕೊಹ್ಲಿ ಇದ್ದಂತೆ, ಅಫ್ರಿದಿ ಸಿಡಿದರೆ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಲು ನ್ಯೂಜಿಲೆಂಡ್‌ಗೆ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
"ಶಾಹೀನ್ ಅಫ್ರಿದಿ ಇಲ್ಲಿಯವರೆಗೆ ನಿಜವಾಗಿಯೂ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ ಮತ್ತು ಅವರು ಇನ್ನೂ ಎರಡು ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಭಾವಿಸುತ್ತೇವೆ." ಎಂದು ಹೇಳಿರುವ ರಿಕಿಪಾಂಟಿಂಗ್ ಪಾಕಿಸ್ತಾನ ಫೈನಲ್ ಪ್ರವೇಶಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಅಫ್ರಿದಿಯ ಫಾರ್ಮ್‌ಗೆ ಮರಳುವುದನ್ನು ಪಾಂಟಿಂಗ್, ಭಾರತದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮ ಅದ್ಭುತ ಫಾರ್ಮ್‌ಗೆ ಮರಳಿದ ರೀತಿಗೆ ಹೋಲಿಸಿದ್ದಾರೆ ಮತ್ತು ಕೆಲವೊಮ್ಮೆ ದೊಡ್ಡ ವೇದಿಕೆಯಲ್ಲಿ ಆಡಲು ನೀವು ಚಾಂಪಿಯನ್ ಆಟಗಾರರ ಮೇಲೆ ನಿಮ್ಮ ನಂಬಿಕೆಯನ್ನು ಇರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
"ಇದು ವಿರಾಟ್ ಕೊಹ್ಲಿ ಈ ಪಂದ್ಯಾವಳಿಗೆ ಬರುತ್ತಿರುವ ಭಾರತದ ಸನ್ನಿವೇಶದಂತೆಯೇ ಇದೆ" ಎಂದು ಪಾಂಟಿಂಗ್ ಹೇಳಿದ್ದಾರೆ. ಬುಧವಾರ ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಸೆಣೆಸಲಿದೆ.

ಶಾಹೀನ್ ಅಫ್ರಿದಿ ಫಿಟ್ ಆಗಿದ್ದಾರೆ ಎಂದ ಪಾಂಟಿಂಗ್
"ಶಾಹೀನ್ ಅಫ್ರಿದಿ ಇನ್ನೂ 100 ಪ್ರತಿಶತ ಫಿಟ್ ಆಗಿಲ್ಲ ಎಂದು ಅವರು ಹೇಳಬಹುದು, ಆದರೆ ನಾನು ನೋಡಿದ ಪ್ರಕಾರ ಅವರು ಉತ್ತಮವಾಗಿ ಆಡುತ್ತಿರುವಂತೆ ತೋರುತ್ತಿದೆ ಮತ್ತು ಅವರು ಈಗ ಪಾಕಿಸ್ತಾನವು ಪಂದ್ಯಾವಳಿಯಲ್ಲಿ ಮುನ್ನಡೆಯಲು ಪ್ರಮುಖ ಆಟಗಾರ ಆಗಿದ್ದಾರೆ" ಎಂದು ಪಾಂಟಿಂಗ್ ಹೇಳಿದರು.
ಜುಲೈನಲ್ಲಿ ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಅಫ್ರಿದಿ ಬಲ ಮೊಣಕಾಲು ನೋವಿಗೆ ತುತ್ತಾದರು. ಗಾಯಗೊಂಡ ನಂತರ ಅವರು ನಡೆಯಲು ಸಾಧ್ಯವಾಗದ ಕಾರಣ ತಾವು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಹೇಳಿದ್ದಾರೆ.
ಭಾರತ ಮತ್ತು ಜಿಂಬಾಬ್ವೆ ವಿರುದ್ಧದ ಟೂರ್ನಮೆಂಟ್‌ನ ಪಾಕಿಸ್ತಾನದ ಆರಂಭಿಕ ಎರಡು ಪಂದ್ಯಗಳಲ್ಲಿ ಶಾಹೀನ್ ಅಫ್ರಿದಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಅವರು ಫಿಟ್ ಆಗಿರುವ ಬಗ್ಗೆ ಅನೇಕ ಅನುಮಾನಗಳು ಮೂಡಿದ್ದವು. ಆದರೆ, ಆತ ಉತ್ತಮ ಪ್ರದರ್ಶನ ನೀಡುವ ಬಗ್ಗೆ ರಿಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದರು.
"ನನಗೆ ಯಾವುದೇ ಸಂದೇಹವಿರಲಿಲ್ಲ ಅವನು ಮೈದಾನದಲ್ಲಿ ಇರುವಾಗ ಅವನ ಸಾಮರ್ಥ್ಯ ಏನು ಎಂದು ನಿಮಗೆ ತಿಳಿದಿರುತ್ತದೆ" ಎಂದು ಪಾಂಟಿಂಗ್ ಹೇಳಿದರು. ಆತ 100 ಪ್ರತಿಶತ ಫಿಟ್ ಆಗಿಲ್ಲದೆ ಶೇಕಡ 90ರಷ್ಟು ಫಿಟ್ನೆಸ್ ಇದ್ದರೂ, ಆತ ಮೈದಾನದಲ್ಲಿ ಎದುರಾಳಿಗಳನ್ನು ಕಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಪಾಂಟಿಂಗ್ ಭರವಸೆ ವ್ಯಕ್ತಪಡಿಸಿದ್ದರು.