Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿದ ಪಾಕಿಸ್ತಾನ ವೇಗಿ ಶಾಹಿನ್‌ ಆಫ್ರಿದಿ; ಕಾರಣವೇನು?

ಜುಲೈ 12 ಶುಕ್ರವಾರ, ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಇತ್ತೀಚಿನ ದಿನಗಳಲ್ಲಿ ಆರೋಪಗಳ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ತಂಡದ ಮ್ಯಾನೇಜ್‌ಮೆಂಟ್, ಕೋಚ್ ಮತ್ತು ನಾಯಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಶಾಹೀನ್ ಆಫ್ರಿದಿ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ.

ಪಾಕಿಸ್ತಾನ ತಂಡದ ಕೋಚ್‌ ಗ್ಯಾರಿ ಕರ್ಸ್ಟನ್‌ ಮತ್ತ ಅಜರ್‌ ಮಹಮೂದ್‌ ಅವರು ಪಿಸಿಬಿಗೆ ದೂರು ನೀಡಿದ್ದು, ಈ ದೂರಿನಲ್ಲಿಆಟಗಾರರು ನಾಯಕತ್ವಕ್ಕಾಗಿ ಪರಸ್ಪರ ಲಾಬಿ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ವರದಿಯಾಗಿದೆ.

Shaheen Afridi ruled out of Bangladesh tour

ಮತ್ತೊಂದೆಡೆ ನಾಯಕ ಬಾಬರ್ ಆಜಮ್‌ನೊಂದಿಗಿನ ಶಾಹೀನ್‌ ಆಫ್ರಿದಿ ಭಿನ್ನಾಭಿಪ್ರಾಯ ವೇಗವನ್ನು ಪಡೆಯುತ್ತಿರುವಂತೆ ತೋರುತ್ತಿದೆ. 2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದ ನಂತರ, ಪಿಸಿಬಿ ಕೆಲವು ಆಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಯೋಜಿಸುತ್ತಿದೆ.

ಇದರಲ್ಲಿ ಶಾಹೀನ್ ಹೆಸರು ಕೂಡ ಬರುತ್ತಿದೆ. ಆದರೆ ಸದ್ಯ ಆಡಳಿತ ಮಂಡಳಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದರ ಬೆನ್ನಲ್ಲೇ ಆಫ್ರಿದಿ ಅವರು ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಜೇಸನ್ ಗಿಲ್ಲೆಸ್ಪಿ ಮಾಹಿತಿ ನೀಡಿದ್ದಾರೆ.

ಬಾಂಗ್ಲಾದೇಶ ಪ್ರವಾಸ ಯಾವಾಗ?

ಮುಂದಿನ ತಿಂಗಳು ಆಗಸ್ಟ್‌ನಲ್ಲ ಪಾಕಿಸ್ತಾನ ತಂಡವು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಈ ಸಮಯದಲ್ಲಿ, ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ದೃಷ್ಟಿಯಿಂದ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.

ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 21 ರಿಂದ 25 ರವರೆಗೆ ನಡೆಯಲಿದ್ದು, ಎರಡನೇ ಟೆಸ್ಟ್ ಆಗಸ್ಟ್ 30 ರಿಂದ ಸೆಪ್ಟೆಂಬರ್‌ 3 ರವರೆಗೆ ನಡೆಯಲಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಂದಿನ ಕೆಲವು ದಿನಗಳಲ್ಲಿ ಈ ಪ್ರವಾಸಕ್ಕಾಗಿ ತಂಡವನ್ನು ಪ್ರಕಟಿಸುತ್ತದೆ. ಆದರೆ ಇದಕ್ಕೂ ಮುನ್ನ ಶಾಹೀನ್ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿಯುವುದಾಗಿ ಜೇಸನ್ ಗಿಲ್ಲೆಸ್ಪಿ ಹೇಳಿದ್ದು, ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

ಗಿಲ್ಲೆಸ್ಪಿ ನೀಡಿದ ಕಾರಣವೇನು?

ಜೇಸನ್ ಗಿಲ್ಲೆಸ್ಪಿ ಈ ಬಗ್ಗೆ ಮಾಹಿತಿ ನೀಡಿದ್ದು, 'ಮಗುವಿನ ಜನನದಿಂದಾಗಿ ಶಾಹೀನ್ ಅಫ್ರಿದಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಅಲ್ಲಿಯವರೆಗೆ ಅವರು ತಮ್ಮ ಹೆಂಡತಿಯೊಂದಿಗೆ ಸಮಯ ಕಳೆಯಲು ಬಯಸಿದರೆ, ನಾವು ಅವರಿಗೆ ವಿಶ್ರಾಂತಿ ನೀಡುತ್ತೇವೆ ಎಂದಿದ್ದಾರೆ. ಶಾಹೀನ್ ಅಫ್ರಿದಿ ಕಳೆದ ವರ್ಷ ಅನ್ಶಾ ಅವರನ್ನು ವಿವಾಹವಾಗಿದ್ದರು.

ಬಾಬರ್‌-ಶಾಹೀನ್ ನಡುವೆ ಅಸಮಾಧಾನ?

ಶಾಹೀನ್ ಮತ್ತು ಬಾಬರ್ ಆಜಮ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ವಿಚಾರ ಕ್ರಿಕೆಟ್‌ ಗಲ್ಲಿಯಲ್ಲಿ ವೇಗವನ್ನು ಪಡೆಯುತ್ತಿದೆ. ಈ ನಡುವೆ ಶಾಹೀನ್ ಅಫ್ರಿದಿ, ಬಾಬರ್ ಅಜಮ್ ಅವರನ್ನು ತಳ್ಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಾಬರ್‌ ಮತ್ತು ಶಾಹೀನ್ ನಡುವೆ ಅಸಮಾಧಾನ ಬೂದಿ ಮುಚ್ಚಿದ ಕೆಂಡಂತಿದೆ ಎಂದು ಕ್ರಿಕೆಟ್‌ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.ಈ ಹಿಂದೆ ಮೊಹಮ್ಮದ್ ಯೂಸುಫ್ ಜೊತೆ ಶಾಹೀನ್ ಭಿನ್ನಾಭಿಪ್ರಾಯದ ವಿಡಿಯೋ ಕೂಡ ವೈರಲ್ ಆಗಿತ್ತು.

Story first published: Friday, July 12, 2024, 17:48 [IST]
Other articles published on Jul 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+