ಕಿಚ್ಚಿನ ಪಂದ್ಯದ ಮಧ್ಯೆ ಹೃದಯಸ್ಪರ್ಶಿ ಕ್ಷಣ: ಬೂಮ್ರಾ ಮಗುವಿಗೆ ಶಾಹೀನ್ ಅಫ್ರಿದಿ ಉಡುಗೊರೆ: ವಿಡಿಯೋ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೈದಾನದಲ್ಲಿ ಸ್ವಾತಂತ್ರ್ಯಾನಂತರ ಬದ್ಧವೈರಿಗಳಾಗಿ ಸೆಣೆಸಾಡುತ್ತಲೇ ಬಂದಿದೆ. ಪ್ರತಿ ಬಾರಿ ಈ ಎರಡು ಪರಸ್ಪರ ಮುಖಾಮುಖಿಯಾಗಿ ಕಣಕ್ಕಿಳಿದಾಗಲೂ ಎರಡು ತಂಡಗಳು ಜಿದ್ದಿಗೆ ಬಿದ್ದವರಂತೆ ಸೆಣೆಸಾಡುವುದು ಸಹಜ. ಅದಕ್ಕಾಗಿಯೇ ಅಭಿಮಾನಿಗಳಿ ಈ ಎರಡು ತಂಡಗಳ ಮುಖಾಮುಖಿಗಾಗಿ ಹಾತೊರೆಯುತ್ತಿರುತ್ತಾರೆ. ಆದರೆ ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗ ವಿಶೇಷ ಕ್ಷಣವೊಂದಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಇತ್ತೀಚೆಗಷ್ಟೇ ತಮ್ಮ ಮೊದಲ ಮಗುವಿಗೆ ತಂದೆಯಾಗಿದ್ದಾರೆ. ಏಷ್ಯಾಕಪ್ ಸಂದರ್ಭದಲ್ಲಿಯೇ ಬೂಮ್ರಾ ಪತ್ನಿ ಸಂಜನಾ ಗಣೇಶನ್ ಗಂಡುಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಬೂಮ್ರಾ ನೇಪಾಳ ವಿರುದ್ಧದ ಪಂದ್ಯಕ್ಕೆ ಗೈರಾಗಿ ಭಾರತಕ್ಕೆ ವಾಪಸಾಗಿ ಕುಟುಂಬದ ಜೊತೆಗೆ ಸಮಯ ಕಳೆದು ಬಂದಿದ್ದರು. ಇದೀಗ ಮತ್ತೆ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಅವರು ಕಮ್‌ಬ್ಯಾಕ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜಸ್ಪ್ರೀತ್ ಬೂಮ್ರಾ ಅವರ ಮಗುವಿಗೆ ಪಾಕಿಸ್ತಾನ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಉಡುಗೊರೆಯನ್ನು ನೀಡಿ ಶುಭಹಾರೈಸಿದ್ದಾರೆ. ಈ ವಿಡಿಯೋವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಶಾಹೀನ್ ಅಫ್ರಿದಿ ಉಡುಗೊರೆಯನ್ನು ನೀಡುವ ಸಂದರ್ಭದಲ್ಲಿ ಮಗುವಿಗೆ ಶುಭಹಾರೈಸಿದ್ದು ಜಸ್ಪ್ರೀತ್ ಬೂಮ್ರಾ ಪಾಕ್ ವೇಗಿಯ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸೂಪರ್ 4 ಹಂತದ ಪಂದ್ಯ ಮಳೆಯಿಂದಾಗಿ ಮೀಸಲು ದಿನಕ್ಕೆ ಮುಂದೂಡಿಕೆಯಾದ ಬಳಿಕ ಶಾಹೀನ್ ಬೂಮ್ರಾ ಅವರಿಗೆ ಈ ಉಡುಗೊರೆ ನೀಡಿದ್ದಾರೆ.
ವಿಡಿಯೋ:
ಇನ್ನು ಟೀಮ್ ಇಂಡಿಯಾದ ವಬೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಹಾಗೂ ನಿರೂಪಕಿ ಸಂಜನಾ ಗಣೇಶನ್ 2019ರ ಬಳಿಕ ಪ್ರೇಮದಲ್ಲಿದ್ದರು. ಎರಡು ವರ್ಷಗಳ ನಂತರ ಈ ಜೋಡಿ ಮದುವೆಯಾಗಲು ನಿರ್ಧರಿಸಿ 2021ರಲ್ಲಿ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೋವಿಡ್ ಸಮಯವಾಗಿದ್ದ ಕಾರಣ ಕೆಲವೇ ಆಪ್ತರೆ ಸಮ್ಮುಖದಲ್ಲಿ ಈ ಮದುವೆ ಕಾರ್ಯಕ್ರಮ ನಡೆದಿತ್ತು. ಇದೀಗ ಈ ದಂಪತಿ ತಮ್ಮ ಮೊದಲ ಮಗುವನ್ನು ಇತ್ತೀಚೆಗಷ್ಟೇ ಬರಮಾಡಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications