ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್‌ಗೆ ಪಾಕ್ ತಂಡ ಪ್ರಕಟ: ಸ್ಟಾರ್ ವೇಗಿ ಅಲಭ್ಯ
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಆಗಸ್ಟ್ 30 ರಿಂದ ರಾವಲ್ಪಿಂಡಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಪಾಕ್ ಆಡುವ ತಂಡವನ್ನು ಪ್ರಕಟಿಸಿದೆ. ಈ ಪ್ರಕಟಿತ 12 ಜನರ ತಂಡದಲ್ಲಿ ಸ್ಟಾರ್ ವೇಗದ ಬೌಲರ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಗುರುವಾರ ಪಾಕ್ ತನ್ನ ಆಡುವ ತಂಡವನ್ನು ಪ್ರಕಟಿಸಿದ್ದು, ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದನ್ನು ಬಿಟ್ಟರೆ ಪಾಕ್ ತಂಡದಲ್ಲಿ ಹೇಳಿಕೊಳ್ಳುವಂತೆ ಬದಲಾವಣೆಗಳು ಇಲ್ಲ.

ಈಗಾಗಲೇ ಮೊದಲ ಟೆಸ್ಟ್ ಪಂದ್ಯವನ್ನು ಸೋತು, ಟೀಕೆಗೆ ಗುರಿಯಾಗಿರುವ ಪಾಕ್ ಎರಡನೇ ಟೆಸ್ಟ್ ಪಂದ್ಯವನ್ನು ಶತಾಯ ಗತಾಯ ಗೆಲ್ಲಲ್ಲೇ ಬೇಕು ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಅದರಂತೆ, ಉತ್ತಮ ತಂಡವನ್ನು ಕಣಕ್ಕಿಳಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕಂಡ ನ್ಯೂನತೆಗಳನ್ನು ಮೆಟ್ಟಿ ನಿಲ್ಲಲು ಪಾಕ್ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.
ಅಬ್ರಾರ್ ಅಹ್ಮದ್‌ಗೆ ಅವಕಾಶ
ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದ್ದು, ಸರಣಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಇನ್ನು ಬಾಂಗ್ಲಾ ಪಾಕ್ ತಂಡವನ್ನು ಟೆಸ್ಟ್‌ನಲ್ಲಿ ಇದೇ ಮೊದಲ ಬಾರಿಗೆ ಸೋಲಿಸಿದೆ. ಮೊದಲ ಟೆಸ್ಟ್ ಆಡಲು ಸಾಧ್ಯವಾಗದ ಅಬ್ರಾರ್ ಅಹ್ಮದ್ ಮತ್ತು ಕಮ್ರಾನ್ ಗುಲಾಮ್ ಅವರನ್ನು ಪಾಕಿಸ್ತಾನ ತಂಡಕ್ಕೆ ಸೇರಿಸಿಕೊಂಡಿದೆ.

ಪಾಕ್ ತಂಡದ ವೇಗಿ ಶಾಹೀನ್ ಶಾ ಆಫ್ರಿದಿ ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಹೋಗಿದ್ದಾರೆ. ಹೀಗಾಗಿ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡುವಲ್ಲಿ ಆಗಿಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ, ಇವರು ಬಾಂಗ್ಲಾ ಬ್ಯಾಟರ್‌ಗಳನ್ನು ಕಾಡಿದ್ದರು.
ಶಾಹಿನ್ ಹೊರಗಿಟ್ಟಿದ್ದು ಏಕೆ?
ಪಾಕಿಸ್ತಾನ ಕ್ರಿಕೆಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ 12 ಆಟಗಾರರ ಪಟ್ಟಿಯಲ್ಲಿ ಶಾಹೀನ್ ಶಾ ಆಫ್ರಿದಿ ಹೆಸರಿಲ್ಲ. ಅವರು ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದರ ನಂತರ, ಅವರು ತಮ್ಮ ಮಗುವಿನ ಜನನದ ಕಾರಣ ತಂಡವನ್ನು ತೊರೆದರು. ಆಗಸ್ಟ್ 28 ರಂದೇ ಶಾಹೀನ್ ಶಾ ಅಫ್ರಿದಿ ಮತ್ತೆ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದ್ದರೂ, ನಂತರ ಅವರು ಆಡುವ ಸಾಧ್ಯತೆ ಇತ್ತು, ಆದರೆ ಈಗ ಅವರ ಹೆಸರು ನೋಡದೆ ಎಲ್ಲರೂ ಶಾಕ್ ಆಗಿದ್ದಾರೆ.
ಶಾಹೀನ್ ಪಾಕಿಸ್ತಾನ ತಂಡದ ಭರವಸೆಯ ಆಟಗಾರ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ನೀಡಿದ ಪ್ರದರ್ಶನ ಕಳಪೆಯಾಗಿತ್ತು. ಇದರಿಂದಾಗ ಬಾಬರ್ ಅಜಮ್ ನಾಯಕತ್ವ ಸ್ಥಾನಕ್ಕೆ ಕುತ್ತ ಬಂದಿತ್ತು. ಇದೇ ವೇಳೆ ಪಾಕ್ ತಂಡವನ್ನು ಕೆಲವು ಟಿ20 ಸರಣಿಗಳಲ್ಲಿ ಶಾಹೀನ್ ಆಫ್ರಿದಿ ಮುನ್ನಡೆಸಿದ್ದರು.
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ಗೆ ಪಾಕಿಸ್ತಾನ ತಂಡ: ಶಾನ್ ಮಸೂದ್ (ನಾಯಕ), ಸೌದ್ ಶಕೀಲ್ (ಉಪನಾಯಕ), ಅಬ್ರಾರ್ ಅಹ್ಮದ್, ಮೊಹಮ್ಮದ್ ಅಲಿ, ಸಲ್ಮಾನ್ ಅಲಿ ಅಗಾ, ಸೈಮ್ ಅಯೂಬ್, ಬಾಬರ್ ಅಜಮ್, ಮೀರ್ ಹಮ್ಜಾ, ಮೊಹಮ್ಮದ್ ರಿಜ್ವಾನ್, ಅಬ್ದುಲ್ಲಾ ಶಫೀಕ್, ನಸೀಮ್ ಷಾ, ಖುರ್ರಂ ಶಹಜಾದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications