ಪಹಲ್ಗಾಮ್‌ನಲ್ಲಿದ್ದ ಅಮಾಯಕರ ಮೇಲೆ ಉಗ್ರರ ದಾಳಿ ನಡೆಸಿದ ಬೆನ್ನಲ್ಲೆ, ಕೇಂದ್ರ ಸರ್ಕಾರ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈ ಬೆನ್ನಲ್ಲೆ ಎರಡೂ ಕಡೆಯ ಕ್ರಿಕೆಟ್ ಆಟಗಾರರು ತಮ್ಮ ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಮಾಜಿ ಸ್ಫೋಟಕ ಬ್ಯಾಟರ್ ನೀಡಿರುವ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಜೊತೆಗಿನ ಸಂಬಂಧಗಳನ್ನು ಭಾರತ ಕಳೆದುಕೊಳ್ಳುತ್ತಿದೆ. ಪಹಲ್ಗಾಮ್ ದಾಳಿಯ ಬೆನ್ನಲ್ಲೆ ಪಾಕ್ ಸ್ಫೋಟಕ ಬ್ಯಾಟರ್ ಶಾಹಿದ್ ಆಫ್ರಿದಿ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ವೇಳೆ ಸ್ಟಾರ್ ಬ್ಯಾಟರ್ ಆಫ್ರಿದಿ ದೊಡ್ಡ ಹೇಳಿಕೆ ನೀಡಿದ್ದು, "ನನಗೆ ಕ್ರಿಕೆಟ್ ಮತ್ತು ಕ್ರೀಡಾ ರಾಜತಂತ್ರಿಕತೆಯಲ್ಲಿ ಆಳವಾದ ನಂಬಿಕೆ ಇದೆ. ಇದರಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ ವೇಳೆ ಮಾತನಾಡಿರುವ ಶಾಹಿದ್ ಆಫ್ರಿದಿ, ನಾವು ನೆರೆಹೊರೆಯ ರಾಷ್ಟ್ರಗಳಾಗಿದ್ದು, ನಾವು ಪರಸ್ಪರ ಕಾಳಜಿ ವಹಿಸಬೇಕು. ಈ ಘಟನೆ ದುಃಖ ತಂದಿದೆ. ಈ ಘಟನೆಗೆ ನೇರವಾಗಿ ಭಾರತ, ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ. ಈ ಘಟನೆಗಳನ್ನು ಪಾಕ್ ಮಾಡಿದೆ ಎಂದು ಹೇಳಲು ನಿಮ್ಮ ಬಳಿ ಇರುವ ಪುರಾವೆಗಳನ್ನಾದ್ರೂ ನೀಡಿ ಎಂದು ಕೇಳಿ ಕೊಂಡಿದ್ದಾರೆ. ಪೂರವೆಗಳಿಲ್ಲದೆ ಪಾಕಿಸ್ತಾನವನ್ನು ದೂರಲೇ ಬೇಡಿ ಎಂದು ಶಾಹೀದ್ ಆಫ್ರಿದಿ ಹೇಳಿದ್ದಾರೆ.
ಇಂತಹ ಘಟನೆಗಳನ್ನು ಯಾವುದೇ ಧರ್ಮವಾದ್ರೂ ಬೆಂಬಲಿಸುವುದಿಲ್ಲ. ಪಾಕ್‌ನಲ್ಲೂ ಇಂತಹ ಕೃತ್ಯಗಳು ನಡೆಯುತ್ತವೆ. ಈ ವೇಳೆ ಎರಡೂ ದೇಶಗಳ ನಡುವೆ ಸಂಬಂಧಗಳು ಸುಧಾರಿಸಬೇಕು ಎಂದು ಆಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತೊಮ್ಮೆ ಯಾವುದೇ ಪುರಾವೆಗಳು ಇಲ್ಲದೆ ಆರೋಪ ಮತ್ತು ಪ್ರತಿ ಆರೋಪಗಳಿಗೆ ಮುಂದಾಗಿರುವುದು ಅತ್ಯಂತ ವಿಷಾದಕರ. ಇಂತಹ ಕಾರ್ಯಗಳು ಉದ್ವಿಗ್ನತೆಯನ್ನು ಹೆಚ್ಚಿಸುತ್ತವೆ. ಮತ್ತು ಎರಡೂ ದೇಶದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಭಾರತ ದೂಷಿಸವ ಬದಲು, ಸಮಸ್ಯೆಗಳನ್ನು ನಿವಾರಿಸುವತ್ತ ಚಿತ್ತ ಹರಿಸಬೇಕು. ಎರಡೂ ದೇಶಗಳ ಸಂಬಂಧ ಸುಧಾರಣೆಗೆ ಒಂದೇ ಮಾರ್ಗ ಮಾತುಕತೆಯಾಗಿದೆ. ಹಿಂಸಾಚಾರ, ಆರೋಪ, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ. ರಾಜಕೀಯ ಹಸ್ತಕ್ಷೇಪ ಕ್ರಿಕೆಟ್‌ನಲ್ಲಿ ಸಲ್ಲದು ಎಂದಿದ್ದಾರೆ.
ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಆರಂಭಿಕ ಆಟಗಾರ ಗುಲ್ ಫಿರೋಜಾ ತಮ್ಮ ತಂಡವು ಭಾರತದ ಜೊತೆ ಕ್ರಿಕೆಟ್ ಆಡಲು ಯಾವುದೇ ಆಸಕ್ತಿ ಹೊಂದಿಲ್ಲ ಎಂದಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಮಾಜಿ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಹಾಗೂ ಶ್ರೀವತ್ಸ್ ಗೋಸ್ವಾಮಿ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ಬಹಿಷ್ಠಕರಿಸುವಂತೆ ಒತ್ತಾಯಿಸಿದ್ದಾರೆ.