Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನಕ್ಕೆ ವಿರಾಟ್‌ ಕೊಹ್ಲಿ ಬರಲಿ; ಆಫ್ರಿದಿ ಆಹ್ವಾನ

ಜುಲೈ 12 ಶುಕ್ರವಾರ, ಐಸಿಸಿ ಚಾಂಪಿಯನ್ ಟ್ರೋಫಿ ಮುಂದಿನ ವರ್ಷ 2025ರಲ್ಲಿ ನಡೆಯಲಿದೆ. ಈ ಟೂರ್ನಿಗೆ ಪಾಕಿಸ್ತಾನದ ಆತಿಥ್ಯ ವಹಿಸಲಿದೆ. ಆದರೆ ಭದ್ರತಾ ದೃಷ್ಟಿಯಂದ ಭಾರತ ತಂಡವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಪಾಕಿಸ್ತಾನದ ಬದಲಿಗೆ ಚಾಂಪಿಯನ್‌ ಟ್ರೋಫಿಯನ್ನು ದುಬೈ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮನವಿ ಮಾಡಿದೆ. ಆದರೆ ಈ ಬಗ್ಗೆ ಐಸಿಸಿ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Shahid Afridi invites Virat Kohli to Pakistan

ಇದೀಗ ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್ ವಿರಾಟ್‌ ಕೊಹ್ಲಿ ಅವರಿಗೆ ಪಾಕಿಸ್ತಾನಕ್ಕೆ ಬರುವುದಕ್ಕೆ ಮಾಜಿ ದಿಗ್ಗಜ ಆಲ್‌ರೌಂಡರ್ ಶಾಹಿದ್‌ ಆಫ್ರಿದಿ ಆಹ್ವಾನ ನೀಡಿದ್ದಾರೆ. ಪಾಕಿಸ್ತಾನದಲ್ಲಿ ನಡೆಯಲಿರುವ 2025ರ ಚಾಂಪಿಯನ್‌ ಟ್ರೋಫಿಯಲ್ಲಿ ವಿರಾಟ್‌ ಕೊಹ್ಲಿ ಆಡಬೇಕೆಂದು ಆಫ್ರಿದಿ ಹೇಳಿದ್ದಾರೆ.

"ವಿರಾಟ್‌ ಕೊಹ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದರೆ, ಅವರು ಭಾರತದ ಆತಿಥ್ಯವನ್ನು ಮರೆತೇ ಬಿಡುತ್ತಾರೆ. ಏಕೆಂದರೆ ವಿರಾಟ್‌ ಕೊಹ್ಲಿ ಅವರಿಗೆ ಪಾಕಿಸ್ತಾನದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ನಾವೆಲ್ಲರೂ ಪಾಕಿಸ್ತಾನದಲ್ಲಿ ಕೊಹ್ಲಿ ಆಡುವುದನ್ನು ನೋಡಲು ಕಾಯುತ್ತಿದ್ದೇವೆ" ಎಂದು ಶಾಹಿದ್ ಆಫ್ರಿದಿ ತಿಳಿಸಿದ್ದಾರೆ.

17 ವರ್ಷಗಳ ನಂತರ ಭಾರತ ತಂಡದ ಪಾಕ್ ಪ್ರವಾಸವನ್ನು ಸಾಧ್ಯವಾಗಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ನಡೆಸಲು ಪಿಸಿಬಿ ತಯಾರಿ ನಡೆಸುತ್ತಿದೆ.

ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲವೊಂದು ಎಎನ್‌ಐಗೆ ಮಾಹಿತಿ ನೀಡಿದ್ದು, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.

ಈ ಹಿಂದೆ ಕೂಡ ಏಷ್ಯಾ ಕಪ್‌ ಟೂರ್ನಿಗೂ ಹೈಬ್ರಿಡ್ ಮಾದರಿಯನ್ನು ಪರಿಗಣಿಸಲು ಪಿಸಿಬಿ ನಿರಾಕರಿಸಿತ್ತು. ಬಳಿಕ ಹೈಬ್ರಿಡ್‌ ಮಾದರಿಗೆ ಪಿಸಿಬಿ ಗ್ರೀನ್‌ ಸಿಗ್ನಲ್‌ ಕೊಟ್ಟಿತ್ತು. ಟೀಮ್‌ ಇಂಡಿಯಾದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದ್ದವು.

2008ರ ಮುಂಬೈ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ನಿರಂತರವಾಗಿ ಹದಗೆಡುತ್ತಿವೆ. ಅಂದಿನಿಂದ ಭಾರತ ತಂಡವು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಪ್ರವಾಸ ಕೈಗೊಂಡಿಲ್ಲ.

Story first published: Friday, July 12, 2024, 13:58 [IST]
Other articles published on Jul 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+