Shahid Afridi: ಅಳಿಯನ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಶಾಹಿದ್ ಅಫ್ರಿದಿ
ವಿಶ್ವಕಪ್ 2023 ರ ನಂತರ, ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸಿದೆ. ಕೋಚಿಂಗ್ ಸಿಬ್ಬಂದಿಯಿಂದ ಹಿಡಿದು ನಾಯಕತ್ವದವರೆಗೆ, ಪ್ರತಿಯೊಂದು ವಿಭಾಗದಲ್ಲೂ ದೊಡ್ಡ ಬದಲಾವಣೆ ಆಗಿದೆ.
ಪಾಕ್ ತಂಡದ ಸ್ಟಾರ್ ಆಟಗಾರ ಬಾಬರ್ ಅಜಮ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವವನ್ನು ತೊರೆದಿದ್ದಾರೆ. ಇವರ ಸ್ಥಾನದಲ್ಲಿ ಮೂರು ವಿಭಿನ್ನ ಸ್ವರೂಪಗಳಲ್ಲಿ ವಿಭಿನ್ನ ನಾಯಕರನ್ನು ಆಯ್ಕೆ ಮಾಡಲಾಗಿದೆ. ಪಾಕಿಸ್ತಾನದ ಟೆಸ್ಟ್ ನಾಯಕತ್ವವನ್ನು ಶಾನ್ ಮಸೂದ್ ನಿರ್ವಹಿಸುತ್ತಿದ್ದು, ಟಿ20 ತಂಡದ ನಾಯಕತ್ವವನ್ನು ಶಾಹೀನ್ ಅಫ್ರಿದಿ ಅವರಿಗೆ ನೀಡಲಾಗಿದೆ. ಇದೀಗ ಪಾಕಿಸ್ತಾನ ತಂಡದ ನಾಯಕತ್ವದ ಬದಲಾವಣೆಗೆ ಸಂಬಂಧಿಸಿದಂತೆ ಶಾಹಿದ್ ಅಫ್ರಿದಿ ಅವರ ಹೇಳಿಕೆ ನೀಡಿದ್ದಾರೆ.

ಜಿಯೋ ಟಿವಿಯಲ್ಲಿ ಮಾತನಾಡಿರುವ ಅಫ್ರಿದಿ 'ನಾನು ರಿಜ್ವಾನ್ ಅವರ ಕಠಿಣ ಪರಿಶ್ರಮ ಮತ್ತು ಫೋಕಸ್ ಲೆವೆಲ್ ಅಭಿಮಾನಿ. ನಾನು ಇಷ್ಟಪಡುವ ಅವನ ದೊಡ್ಡ ಗುಣವೆಂದರೆ ಅವನು ತನ್ನ ಆಟದ ಮೇಲೆ ಮಾತ್ರ ಗಮನಹರಿಸುತ್ತಾನೆ. ಯಾರು ಏನು ಮಾಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ. ಅವರೊಬ್ಬ ಫೈಟರ್ ಕ್ರಿಕೆಟಿಗ. ಬಾಬರ್ ನಂತರ ಟಿ20 ತಂಡದ ನಾಯಕನಾಗಿ ಅವರನ್ನು ನೋಡಲು ಬಯಸಿದ್ದೆ ಆದರೆ ತಪ್ಪಾಗಿ ಈ ಜವಾಬ್ದಾರಿಯನ್ನು ಶಾಹೀನ್ ಅಫ್ರಿದಿಗೆ ನೀಡಲಾಗಿದೆ ಎಂದಿದ್ದಾರೆ.
ಶಾಹಿದ್ ಅಫ್ರಿದಿ ಅವರ ಈ ಹೇಳಿಕೆ ಕುತೂಹಲಕಾರಿಯಾಗಿದೆ ಏಕೆಂದರೆ ಶಾಹೀನ್ ಅವರ ಅಳಿಯ. ಅವರು ಆಗಾಗ್ಗೆ ಶಾಹೀನ್ ಅವರನ್ನು ಹೊಗಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಹೀನ್ ಟಿ20 ನಾಯಕತ್ವವನ್ನು ಟೀಕಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕ್
ಸದ್ಯ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಪ್ರವಾಸದಲ್ಲಿ ಆಸೀಸ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಎರಡು ಪಂದ್ಯಗಳು ನಡೆದಿದ್ದು, ಈ ಸರಣಿಯಲ್ಲಿ ಪಾಕಿಸ್ತಾನವೂ ಸೋತಿದೆ. ಆಡಿರುವ ಎರಡೂ ಟೆಸ್ಟ್ ಸೋತಿರುವ ಪಾಕ್, ಜನವರಿ 3ರಿಂದ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಸರಣಿಯ ನಂತರ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications