'ಸರ್ವಕಾಲಿಕ ವಿಶ್ವಕಪ್ XI'ನಿಂದ ಸಚಿನ್ ಬಿಟ್ಟಿದ್ದಕ್ಕೆ ಕಾರಣ ಹೇಳಿದ ಅಫ್ರಿದಿ

ನವದೆಹಲಿ, ಮೇ 10: ತನ್ನ ಆಯ್ಕೆಯ ಸರ್ವಕಾಲಿಕ ವಿಶ್ವಕಪ್ ತಂಡದಿಂದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮತ್ತು 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಯನ್ನು ಕೈ ಬಿಟ್ಟು ವಿರಾಟ್ ಕೊಹ್ಲಿಯನ್ನು ಆರಿಸಿದ್ದರು. ಇದಕ್ಕೆ ಅಫ್ರಿದಿ ಕಾರಣ ಹೇಳಿಕೊಂಡಿದ್ದಾರೆ.
ತನ್ನ ನೆಚ್ಚಿನ ಭಾರತೀಯ ಕ್ರಿಕೆಟಿಗರಲ್ಲಿ ತೆಂಡೂಲ್ಕರ್ ಮತ್ತು ಧೋನಿ ಇಬ್ಬರೂ ಇದ್ದಾರೆ ಎಂದು ಸ್ಪಷ್ಟನೆ ನೀಡಿ ಪಿಟಿಐ ಜೊತೆ ಮಾತನಾಡಿದ ಅಫ್ರಿದಿ, 'ಭಾರತೀಯ ಕ್ರಿಕೆಟ್‌ನಲ್ಲಿ ಸಚಿನ ಮತ್ತು ಧೋನಿ ಇಬ್ಬರೂ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ನಾನು ಕೊಹ್ಲಿಯನ್ನು ಆರಿಸಿದ್ದು ಯಾಕೆಂದರೆ ಕೊಹ್ಲಿ ಬ್ಯಾಟಿಂಗ್ ನೋಡೋಕೆ ಖುಷಿ ಅನ್ನಿಸುತ್ತೆ ಅದಕ್ಕೆ' ಎಂದರು.
ನೆಚ್ಚಿನ ಆಲ್ ಟೈಮ್ ವಿಶ್ವಕಪ್ XI ತಂಡವನ್ನು ಆರಿಸುವಾಗ ಅಫ್ರಿದಿ ಸಾಯೀದ್ ಅನ್ವರ್ (ಪಾಕಿಸ್ತಾನ), ಆ್ಯಡಮ್ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ) ಅವರನ್ನು ಆರಂಭಿಕ ಆಟಗಾರರಾಗಿ ಆರಿಸಿದ್ದರು. ಈ ತಂಡದಲ್ಲಿ ಸಚಿನ್ ಮತ್ತು ಧೋನಿಗೆ ಸ್ಥಾನವೇ ನೀಡದಿದ್ದುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೀಡು ಮಾಡಿತ್ತು. ಇಡೀ ತಂಡದಲ್ಲಿ ಭಾರತದ ಆಟಗಾರ ಕೊಹ್ಲಿ ಮಾತ್ರ ನಾಲ್ಕನೇ ಕ್ರಮಾಂಕದಲ್ಲಿದ್ದರು.
ಅಫ್ರಿದಿಯ ಸರ್ವಕಾಲಿಕ ವಿಶ್ವಕಪ್ XI: ಸಾಯೀದ್ ಅನ್ವರ್, ಆ್ಯಡಮ್ ಗಿಲ್‌ಕ್ರಿಸ್ಟ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿ, ಇಂಜಮಾಮ್ ಉಲ್-ಹಕ್, ಜಾಕ್ ಕ್ಯಾಲೀಸ್, ವಾಸಿಮ್ ಅಕ್ರಮ್, ಗ್ಲೆನ್ ಮೆಗ್ರಾತ್, ಶೇನ್ ವಾರ್ನ್, ಶೋಯೆಬ್ ಅಖ್ತರ್, ಸಕ್ಲೈನ್ ಮುಷ್ತಾಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications