ಆಟದ ವೇಳೆ ರಿಯಾಝ್‌ಗೆ ತಮಾಷೆಯ ಪ್ರಶ್ನೆ ಎಸೆದ ಅಫ್ರಿದಿ-ವಿಡಿಯೋ

ಒಟ್ಟಾವಾ, ಜುಲೈ 31: ಸದ್ಯ ನಡೆಯುತ್ತಿರುವ ಗ್ಲೋಬಲ್ ಟಿ20 ಕೆನಡಾ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭಾನುವಾರ (ಜುಲೈ 28) ಜಿಟಿ20ಸಿ ಪಂದ್ಯದ ವೇಳೆ ಅಫ್ರಿದಿ ತನ್ನ ಸಹ ಆಟಗಾರ ವಹಾಬ್ ರಿಯಾಝ್‌ಗೆ ತಮಾಷೆಯ ಪ್ರಶ್ನೆ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಎಡ್ಮಂಟನ್ ರಾಯಲ್ಸ್ ಮತ್ತು ಬ್ರಾಂಪ್ಟನ್ ವೂಲ್ವ್ಸ್ ನಡುವಿನ ಪಂದ್ಯದಲ್ಲಿ ಬ್ರಾಂಪ್ಟನ್ ವೂಲ್ವ್ಸ್ ಪರ ಬ್ಯಾಟ್ ಬೀಸಿದ್ದ ಅಫ್ರಿದಿ ಸ್ಫೋಟಕ ಪ್ರದರ್ಶನ ನೀಡಿದ್ದರು. 40 ಎಸೆತಗಳಿಗೆ ಅಫ್ರಿದಿ 81 ರನ್ ಚಚ್ಚಿದ್ದರು. ಇದರಲ್ಲಿ 10 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳೂ ಸೇರಿದ್ದವು.
ಬ್ರಾಂಪ್ಟನ್ ವೂಲ್ವ್ಸ್ ಇನ್ನಿಂಗ್ಸ್‌ನ ಕೊನೇ ಎಸೆತದಲ್ಲಿ ಅಫ್ರಿದಿ-ವಹಾಬ್ ನಡುವಿನ ತಮಾಷೆಯ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿತ್ತು. ಮತ್ತೊಂದು ರನ್ ಓಡಲು ಹೇಳಿದ ರಿಯಾಝ್‌ಗೆ ಅಫ್ರಿದಿ, 'ಹುಚ್ಚ, ಬೌಲಿಂಗ್ ಯಾರ್ ಮಾಡ್ತಾರೆ?,' (ಪಾಗಲ್, ಬೌಲಿಂಗ್ ಕೌನ್ ಕರೇಗಾ?) ಎಂದು ತಮಾಷೆಯಾಗಿ ಪ್ರಶ್ನಿಸಿದ್ದರು.
ಇನ್ನಿಂಗ್ಸ್‌ನ ಕೊನೆಯ ಎಸೆತಕ್ಕೆ ಅಫ್ರಿದಿ ಸಿಂಗಲ್ ರನ್ ಗಳಿಸಿದ್ದರು. ಇನ್ನೊಂದು ರನ್‌ಗೆ ಅವಕಾಶವಿದ್ದಿದ್ದರಿಂದ ರಿಯಾಝ್, ಅಫ್ರಿದಿಯವರನ್ನು ರನ್‌ಗಾಗಿ ಕರೆದರು. ಭರ್ಜರಿ ಬ್ಯಾಟ್ ಬೀಸಿದ್ದ ಅಫ್ರಿದಿಗೆ ಇನ್ನೊಂದು ಹೆಚ್ಚುವರಿ ರನ್ ಓಡಲು ಆಸಕ್ತಿ ಇಲ್ಲದ್ದರಿಂದ ಹೀಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು. ಅಂದ್ಹಾಗೆ ಪಂದ್ಯದಲ್ಲಿ ಬ್ರಾಂಪ್ಟನ್ ವೂಲ್ವ್ಸ್ 27 ರನ್ ಗೆಲುವನ್ನಾಚರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications