Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shahid Afridi: ಅಳಿಯನ ಬೆಂಬಲಕ್ಕೆ ನಿಲ್ಲದ ಮಾವ; ಆಯ್ಕೆ ಸಮಿತಿ ನಿರ್ಧಾರ ಸರಿ ಎಂದ ಶಾಹಿದ್ ಅಫ್ರಿದಿ

ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು. ಇದಾದ ಬಳಿಕ
ಪಾಕಿಸ್ತಾನ ತಂಡದಲ್ಲಿ ದೊಡ್ಡ ಬದಲಾವಣೆಗಳಾಗಿವೆ.

ಇಂಗ್ಲೆಂಡ್ ವಿರುದ್ಧ ಪಂದ್ಯ ಟೆಸ್ಟ್ ಪಂದ್ಯದ ಸೋಲಿನ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೊಸ ಆಯ್ಕೆ ಸಮಿತಿಯನ್ನು ರಚಿಸಿತ್ತು. ಈ ಹೊಸ ಸಮಿತಿಯು ಸರಣಿಯ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ಮಾಜಿ ನಾಯಕ ಬಾಬರ್ ಅಜಮ್ ಮತ್ತು ಇಬ್ಬರು ಸ್ಟಾರ್ ವೇಗದ ಬೌಲರ್‌ಗಳಾದ ಶಾಹೀನ್ ಶಾ ಆಫ್ರಿದಿ ಮತ್ತು ನಸೀಮ್ ಶಾ ಅವರನ್ನು ತಂಡದಿಂದ ಆಯ್ಕೆ ಸಮಿತಿ ಕೈ ಬಿಟ್ಟಿತ್ತು.

Shahid Afridi supported PCB selection committee decision

ಹೊಸ ಪಿಸಿಬಿಯ ಆಯ್ಕೆ ಸಮಿತಿಯಲ್ಲಿರುವ ಮಾಜಿ ವೇಗದ ಬೌಲರ್ ಆಕಿಬ್ ಜಾವೇದ್, ಮಾಜಿ ನಾಯಕ ಅಜರ್ ಅಲಿ, ಮಾಜಿ ಅಂಪೈರ್ ಅಲೀಂ ದಾರ್, ವಿಶ್ಲೇಷಕ ಹಸನ್ ಚೀಮಾ ಮತ್ತು ಸಲಹೆಗಾರ ಬಿಲಾಲ್ ಅಫ್ಜಲ್ ಅವರು, ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ಇದಾದ ಬಳಿಕ ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಪಾಕಿಸ್ತಾನ ತಂಡದ ಮಾಜಿ ಮತ್ತು ಹಾಲಿ ಆಟಗಾರರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ಶಾಹೀನ್ ಶಾ ಅಫ್ರಿದಿ ಅವರ ಮಾವ ಮತ್ತು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ತಮ್ಮ ಹೇಳಿಕೆಯಿಂದ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಶಾಹಿದ್ ಅಫ್ರಿದಿ ಅವರು ಆಯ್ಕೆ ಸಮಿತಿ ನಿರ್ಧಾರವನ್ನು ಸ್ವಾಗತಿಸಿದ್ದು, ತಮ್ಮ ಅಳಿಯ ಶಾಹೀನ್ ಶಾ ಅಫ್ರಿದಿ ಅವರ ಬೆಂಬಲಕ್ಕೆ ನಿಂತಿಲ್ಲ.

ಶಾಹಿದ್ ಅಫ್ರಿದಿ ಹೇಳಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ (ಎಕ್ಸ್) ಮಾಡಿರುವ ಶಾಹಿದ್ ಅಫ್ರಿದಿ ಅವರು, 'ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬಾಬರ್, ಶಾಹೀನ್ ಮತ್ತು ನಸೀಮ್‌ಗೆ ವಿರಾಮ ನೀಡುವ ಆಯ್ಕೆಗಾರರ ​​ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ. ಈ ಸೂಕ್ತ ಕ್ರಮವು ಈ ಚಾಂಪಿಯನ್ ಆಟಗಾರರ ವೃತ್ತಿಜೀವನವನ್ನು ಕಾಪಾಡುವ ಮೂಲಕ ಮತ್ತಷ್ಟು ವಿಸ್ತರಿಸಲು ಸಹಾಯ ಮಾಡುತ್ತದೆ. ಇದು ಉದಯೋನ್ಮುಖ ಪ್ರತಿಭೆಗಳನ್ನು ಪರೀಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಉತ್ತಮ ಅವಕಾಶ ನೀಡಲಿದೆ ಎಂದು ಬರೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ, ಪಾಕಿಸ್ತಾನದ ನಾಯಕ ಶಾನ್ ಮಸೂದ್ ಮತ್ತು ಮುಖ್ಯ ಕೋಚ್ ಜೇಸನ್ ಗಿಲ್ಲೆಸ್ಪಿ ಇನ್ನು ಮುಂದೆ ತಂಡವನ್ನು ಆಯ್ಕೆ ಮಾಡುವ ಅಥವಾ ಪ್ಲೇಯಿಂಗ್ 11 ಅನ್ನು ಅಧಿಕಾರವನ್ನು ಹೊಂದಿರುವುದಿಲ್ಲ. ಪಿಸಿಬಿಯ ಹೊಸ ಆಯ್ಕೆ ಸಮಿತಿಯು ಅವರ ಅಧಿಕಾರವನ್ನು ತಗ್ಗಿಸಿದೆ. ನಾಯಕ ಮತ್ತು ಮುಖ್ಯ ಕೋಚ್‌ನ ಪಾತ್ರಗಳನ್ನು ಬದಲಾಯಿಸಲಾಗಿದೆ. ಈಗ ಅವರಲ್ಲಿ ಯಾರಿಗೂ ಆಯ್ಕೆ ವಿಷಯಗಳಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಅಥವಾ ಪ್ಲೇಯಿಂಗ್-11 ಅನ್ನು ಅಂತಿಮಗೊಳಿಸುವ ಹಕ್ಕನ್ನು ಹೊಂದಿರುವುದಿಲ್ಲ.

Story first published: Wednesday, October 16, 2024, 17:46 [IST]
Other articles published on Oct 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+