ಪೋರ್ಟ್ ಆಫ್ ಸ್ಪೇನ್, ಜುಲೈ 28: ಬಾಲಿವುಡ್ ನಟ ಶಾರುಖ್ ಖಾನ್ ಅವರು ಕೆರಿಬಿಯನ್ ಕ್ರಿಕೆಟ್ ಲೀಗ್ ನಲ್ಲಿ ಮೊದಲ ಯತ್ನದಲ್ಲೇ ಭರ್ಜರಿ ಯಶಸ್ಸು ಕಂಡಿದ್ದಾರೆ.
ಕಿಂಗ್ ಖಾನ್ ಒಡೆತನದ ಟ್ರಿನಿಡಾಡ್ ಆಂಡ್ ಟೊಬಾಗೋ ರೆಡ್ ಸ್ಟೀಲ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಸಿಪಿಎಲ್ ಮುಗಿದು ಎರಡು ದಿನ ಕಳೆದರೂ ಸಂಭ್ರಮಾಚರಣೆ ಇನ್ನೂ ಮುಗಿದಿಲ್ಲ.
ಕೋಲ್ಕತ್ತಾ ನೈಟ್ರೈಡರ್ಸ್ನ ಸ್ಪೂರ್ತಿಯಲ್ಲಿ ಈ ತಂಡಕ್ಕೆ ಟ್ರಿನ್ಬಾಗೋ ನೈಟ್ರೈಡರ್ಸ್ ಎಂದು ಹೆಸರಿಟ್ಟು ಜೆರ್ಸಿಯಲ್ಲೂ ಸ್ವಲ್ಪ ಬದಲಾವಣೆ ಮಾಡಲು ಶಾರುಖ್ ಖಾನ್ ನಿರ್ಧರಿಸಿದ್ದಾರೆ. ಬ್ರಾವೋ ಹಾಗೂ ತಂಡದ ಸಂಭ್ರಮದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಆದರೆ, ಪಾರ್ಟಿ ಮುಂದುವರೆಯಲಿದೆ ಎಂದು ಶಾರುಖ್ ಹೇಳಿದ್ದಾರೆ.[ಸಿಪಿಎಲ್ ನಲ್ಲೂ ಕಿಂಗ್ ಖಾನ್ ತಂಡ]
ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಫೈನಲ್‌ನಲ್ಲಿ ಬಾರ್ಬಡೊಸ್ ಟ್ರಿಡೆಂಟ್ಸ್ ತಂಡವನ್ನು 20 ರನ್‌ಗಳಿಂದ ಮಣಿಸಿರುವ ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಮಾಲಕತ್ವದ ಟ್ರಿನಿಡಾಡ್ ಅಂಡ್ ಟೊಬಾಗೊ ರೆಡ್ ಸ್ಟೀಲ್ ತಂಡ ಚೊಚ್ಚಲ ಸಿಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.