For Quick Alerts
ALLOW NOTIFICATIONS  
For Daily Alerts
 

ಸಚಿನ್, ದ್ರಾವಿಡ್‌, ವಿರಾಟ್ ಮಾಡದ ದಾಖಲೆ ನಿರ್ಮಿಸಿದ ಹೋಪ್‌

ವೆಸ್ಟ್‌ ಇಂಡೀಸ್‌ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಉಭಯ ದೇಶಗಳ ನಡುವಣ 2 ಪಂದ್ಯಗಳ ಏಕದಿನ ಸರಣಿ ಆಡಲಾಗುತ್ತಿದೆ. ಈ ಪಂದ್ಯದಲ್ಲಿ ವಿಂಡೀಸ್ ತಂಡದ ಸ್ಟಾರ್‌ ಬ್ಯಾಟರ್‌ ಶಾಯ್‌ ಹೋಪ್‌ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಯಾರೊಬ್ಬ ಬ್ಯಾಟರ್‌ ಮಾಡದ ಸಾಧನೆ ಶಾಯ್‌ ಹೋಪ್‌ ಮಾಡಿದ್ದಾರೆ. ಅವರು ಮಾಡಿದ ದಾಖಲೆಯ ಬಗ್ಗೆ ವರದಿ ಇಲ್ಲಿದೆ.

ನೇಪಿಯರ್‌ನಲ್ಲಿ ಉಭಯ ತಂಡಗಳ ನಡುವಣ 2ನೇ ಪಂದ್ಯ ನಡೆಯಿತು. ಈ ವೇಳೆ ಪಂದ್ಯಕ್ಕೆ ಮಳೆ ಕಾಟ ಸಹ ನೀಡಿತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್‌ ತಂಡ 34 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 247 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ನ್ಯೂಜಿಲೆಂಡ್‌ 33.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 248 ರನ್‌ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಆತಿಥೇಯ ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

Shai Hope Smashes World Record Hits ODI Century Against All 12 Test-Playing Nations

ಮೊದಲು ಬ್ಯಾಟ್ ಮಾಡಿದ ವಿಂಡೀಸ್‌ ತಂಡದ ಪರ ನಾಯಕ ಶಾಯ್‌ ಹೋಪ್‌ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರು 157ರ ಸ್ಟ್ರೈಕ್‌ ರೇಟ್‌ನಲ್ಲಿ 109 ರನ್‌ ಬಾರಿಸಿದರು. ಈ ವೇಳೆ 13 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ವಿಂಡೀಸ್ ತಂಡದ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ರಿಯನ್‌ ಲಾರ್ ಅವರ ಶತಕಗಳ ಸಾಧನೆಯನ್ನು ಹೋಪ್‌ ಸರಿಗಟ್ಟಿದರು. ಏಕದಿನ ಕ್ರಿಕೆಟ್‌ನಲ್ಲಿ ಹೋಪ್‌ ಅವರಿಗೆ ಇದು 19ನೇ ಶತಕವಾಗಿದೆ. ವಿಂಡೀಸ್‌ ಪರ ಏಕದಿನ ಕ್ರಿಕೆಟ್‌ನಲ್ಲಿ ಕ್ರಿಸ್‌ ಗೇಲ್‌ ಅತಿ ಹೆಚ್ಚು 25 ಶತಕ ಬಾರಿಸಿದ್ದಾರೆ.

ಶಾಯ್‌ ಹೋಪ್‌ ಅವರು 12 ಟೆಸ್ಟ್‌ ತಂಡಗಳ ವಿರುದ್ಧ ಶತಕವನ್ನು ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ರಾಹುಲ್ ದ್ರಾವಿಡ್ ಹೆಸರಿನಲ್ಲಿತ್ತು. ದ್ರಾವಿಡ್‌ ಆಗ ಟೆಸ್ಟ್ ಆಡುವ 10 ತಂಡಗಳ ವಿರುದ್ಧ ಶತಕ ಸಿಡಿಸಿದ್ದರು. ಇನ್ನು ಸಚಿನ್ ಸಹ ಟೆಸ್ಟ್ ಪಂದ್ಯಗಳನ್ನು ಆಡುವ 9 ತಂಡಗಳ ವಿರುದ್ಧ ಶತಕಗಳನ್ನು ಬಾರಿಸಿದ್ದರು. ಅಫ್ಘಾನಿಸ್ತಾನ, ಐರ್ಲೆಂಡ್‌ ತಂಡಗಳಿಗೆ ಟೆಸ್ಟ್‌ ಆಡುವ ಮಾನ್ಯತೆ 2017ರಲ್ಲಿ ಸಿಕ್ಕಿದೆ. ಅದಗಾಲೆ ಸಚಿನ್, ರಾಹುಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ವಿರಾಟ್‌ ಕೊಹ್ಲಿ ಐರ್ಲೆಂಡ್ ವಿರುದ್ಧ ಶತಕ ಬಾರಿಸಿಲ್ಲ.

ಹೋಪ್‌ ಸಾಧನೆ

ವೆಸ್ಟ್ ಇಂಡೀಸ್ ನಾಯಕ 32 ವರ್ಷದ ಶಾಯ್‌ ಹೋಪ್‌ ಏಕದಿನ ಕ್ರಿಕೆಟ್‌ನಲ್ಲಿ ಆಡಿದ 147 ಪಂದ್ಯಗಳಲ್ಲಿ 50.80ರ ಸರಾಸರಿಯಲ್ಲಿ 6097 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 19 ಶತಕಗಳು, 30 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ.

Story first published: Wednesday, November 19, 2025, 20:25 [IST]
Other articles published on Nov 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+