ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಕೀಬ್ ಅಲ್‌ ಹಸನ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡಕ್ಕೆ ಭಾರತೀಯನೇ ನಾಯಕ

Shakib Al Hasan Picks His All-Time ODI XI with 3 Indian cricketers MS Dhoni as skipper

ಬೆಂಗಳೂರು, ಆಗಸ್ಟ್ 29: ಬಾಂಗ್ಲಾದೇಶದ ಕ್ರಿಕೆಟ್ ಆಟಗಾರ ಶಕೀಬ್ ಅಲ್ ಹಸನ್ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ತಂಡವನ್ನು ಹೆಸರಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ ಸಂವಾದದಲ್ಲಿ ಭಾಗಿಯಾಗಿದ್ದ ಶಕೀಬ್ ಅಲ್ ಹಸನ್ ಈ ತಂಡವನ್ನು ಹೆಸರಿಸಿದ್ದಾರೆ. ಏಕದಿನ ಮಾದರಿಯ ಬಲಿಷ್ಠ ಆಟಗಾರರನ್ನು ಹೊಂದಿರುವ ತಂಡದಲ್ಲಿ ಟೀಮ್ ಇಂಡಿಯಾ ಮೂವರು ಆಟಗಾರರು ಇದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ಮಾತ್ರ ಭಾರತ ತಂಡದಿಂದ ಯಾವ ಆಟಗಾರನನ್ನು ಕೂಡ ಶಕೀಬ್ ಅಲ್ ಹಸನ್ ಹೆಸರಿಸಿಲ್ಲ.

ಸ್ಪೋರ್ಟ್ಸ್ ಕೀಡಾ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಶಕೀಬ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಮೂವರು ಭಾರತೀಯ ಆಟಗಾರರು, ತಲಾ ಇಬ್ಬರು ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಹಾಗೂ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳ ತಲಾ ಓರ್ವ ಆಟಗಾರರು ಈ ತಂಡದಲ್ಲಿ ಶಕೀಬ್ ಹಸನ್ ಹೆಸರಿಸಿದ್ದಾರೆ. ಬಾಂಗ್ಲಾದೇಶದ ಪರವಾಗಿ ತಮ್ಮನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಶಕೀಬ್ ಅಲ್ ಹಸನ್.

ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ಕಳವಳಪಡಬೇಕಾದ ಸಂಗತಿ ಹೇಳಿದ ಆಕಾಶ್ ಚೋಪ್ರನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ಕಳವಳಪಡಬೇಕಾದ ಸಂಗತಿ ಹೇಳಿದ ಆಕಾಶ್ ಚೋಪ್ರ

ಭಾರತೀಯನೇ ನಾಯಕ

ಭಾರತೀಯನೇ ನಾಯಕ

ಶಕೀಬ್ ಅಲ್ ಹಸನ್ ಹೆಸರಿಸಿದ ಈ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಮೂವರು ಭಾರತೀಯ ಆಟಗಾರರು ಇದ್ದಾರೆ. ಇನ್ನು ಈ ತಂಡದ ನಾಯಕತ್ವವನ್ನು ಕೂಡ ಭಾರತೀಯ ಆಟಗಾರನಿಗೆ ನೀಡಿದ್ದಾರೆ ಬಾಂಗ್ಲಾದೇಶದ ಆಟಗಾರ. ಶಕೀಬ್ ಅಲ್ ಹೆಸರಿಸಿದ ತಂಡದ ನಾಯಕತ್ವವನ್ನು ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ವಹಿಸಲಾಗಿದೆ.

ಟೀಮ್ ಇಂಡಿಯಾದ ಮತ್ತಿಬ್ಬರು ಪ್ರಮುಖ ಆಟಗಾರರು

ಟೀಮ್ ಇಂಡಿಯಾದ ಮತ್ತಿಬ್ಬರು ಪ್ರಮುಖ ಆಟಗಾರರು

ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ಶಕೀಬ್ ಅಲ್ ಹಸನ್ ನಾಯಕ ಎಂಎಸ್ ಧೋನಿ ಜೊತೆಗೆ ಮತ್ತಿಬ್ಬರು ಭಾರತೀಯ ತ,ಡದ ಆಟಗಾರರನ್ನು ಕೂಡ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ತಂಡದಲ್ಲಿದ್ದಾರೆ. ಶಕೀಬ್ ಅಲ್ ಹಸನ್ ಹೆಸರಿಸಿರುವ ಈ ತಂಡದಲ್ಲಿ ಒಂದೇ ದೇಶದ ಮೂವರು ಆಟಗಾರರನ್ನು ಭಾರತ ತಂಡದಿಂದ ಮಾತ್ರವೇ ಸೇರಿಸಿಕೊಳ್ಳಲಾಗಿದೆ.

ಬ್ಯಾಟಿಂಗ್ ಕ್ರಮಾಂಕ ಹೇಗಿದೆ?

ಬ್ಯಾಟಿಂಗ್ ಕ್ರಮಾಂಕ ಹೇಗಿದೆ?

ಶಕೀಬ್ ಅಲ್ ಹಸನ್ ಹೆಸರಿಸಿರುವ ಈ ತಂಡದಲ್ಲಿ ಆರಂಭಿಕ ಸ್ಥಾನಕ್ಕೆ ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆಟಗಾರ ಸಯೀದ್ ಅನ್ವರ್ ಅವರನ್ನು ಆಯ್ಕೆ ಮಾಡಲಾಗಿದೆ. ಮೂರನೇ ಕ್ರಮಾಂಕದಲ್ಲಿ ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಟಗಾರ ಕ್ರಿಸ್ ಗೇಲ್‌ಗೆ ಅವಕಾಶ ನೀಡಲಾಗಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ ಈ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಎಂದು ಶಕೀಬ್ ಅಲ್ ಹಸನ್ ಹೆಸರಿಸಿದ್ದಾರೆ. ಆಲ್‌ರೌಂಡರ್ ಜಾಕ್ ಕ್ಯಾಲೀಸ್ ಐದನೇ ಕ್ರಮಾಂಕದಲ್ಲಿದ್ದರೆ ಎಂಎಸ್ ಧೋನಿ ಆರನೇ ಕ್ರಮಾಂಕದಲ್ಲಿ ಹೆಸರಿಸಲ್ಪಟ್ಟಿದ್ದಾರೆ.

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಏಳನೇ ಕ್ರಮಾಂಕದಲ್ಲಿ ಸ್ವತಃ ಆಲ್‌ರೌಂಡರ್ ಹಾಗೂ ಸ್ಪಿನ್ನರ್ ಆಗಿರುವ ಶಕೀಬ್ ಅಲ್ ಹಸನ್ ತಮ್ಮನ್ನು ಹೆಸರಿಸಿದ್ದಾರೆ. ನಂತರ ವಿಶ್ವ ಕಂಡ ಇಬ್ಬರು ಶ್ರೇಷ್ಠ ಸ್ಪಿನ್ನರ್‌ಗಳಾದ ಮುತ್ತಯ್ಯ ಮುರಳೀಧರನ್ ಹಾಗೂ ಶೇನ್ ವಾರ್ನ್ ಅವರು ಈ ತಂಡದಲ್ಲಿದ್ದಾರೆ. ಪಾಕಿಸ್ತಾನದ ವೇಗಿ ವಾಸಿಂ ಅಕ್ರಂ ಹಾಗೂ ಗ್ಲೆನ್ ಮೆಕ್‌ಗ್ರಾಥ್ ವೇಗಿಗಳಾದ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ತರ್ಲೆ ಮಾಡಿ ಎಲ್ರನ್ನೂ ನಗಿಸೋ ಟೀಂ ಇಂಡಿಯಾದ 12ನೇ ಆಟಗಾರ ಯಾರು? | Oneindia Kannada
ಶಕೀಬ್ ಅಲ್ ಹಸನ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡ ಹೀಗಿದೆ:

ಶಕೀಬ್ ಅಲ್ ಹಸನ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡ ಹೀಗಿದೆ:

ಸಚಿನ್ ತೆಂಡೂಲ್ಕರ್, ಸಯೀದ್ ಅನ್ವರ್, ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಜಾಕ್ ಕಾಲಿಸ್, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ವಾಸಿಮ್ ಅಕ್ರಮ್, ಗ್ಲೆನ್ ಮೆಕ್‌ಗ್ರಾಥ್

Story first published: Sunday, August 29, 2021, 17:18 [IST]
Other articles published on Aug 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X