Record break: ಸಚಿನ್ ತೆಂಡೂಲ್ಕರ್ ಬೃಹತ್ ದಾಖಲೆ ಮುರಿಯುತ್ತಾರಾ ಬಾಂಗ್ಲಾ ಆಟಗಾರ?
ಭಾರತ ತಂಡದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಹಲವು ಬೃಹತ್ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ದಾಖಲೆಗಳನ್ನು ಇದುವರೆಗೆ ಯಾರೂ ಮುರಿಯಲು ಸಾಧ್ಯವಾಗಿಲ್ಲ. ಬಾಂಗ್ಲಾದೇಶದ ಕ್ರಿಕೆಟಿಗರೊಬ್ಬರು ತೆಂಡೂಲ್ಕರ್ ದಾಖಲೆಯೊಂದನ್ನು ಮುರಿಯುವ ಸಮೀಪಕ್ಕೆ ಬಂದಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 20 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಟೆಸ್ಟ್ ಸರಣಿಯಲ್ಲಿ 5 ಬಾರಿ ಮತ್ತು ಏಕದಿನ ಸರಣಿಯಲ್ಲಿ 15 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಈ ದಾಖಲೆಯನ್ನು ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮುರಿಯುವ ಸನಿಹದಲ್ಲಿದ್ದಾರೆ. ಅವರು ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 17 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಶಕೀಬ್ ಟೆಸ್ಟ್ ಮಾದರಿಯಲ್ಲಿ 5 ಬಾರಿ, ಏಕದಿನ ಮಾದರಿಯಲ್ಲಿ 7 ಬಾರಿ ಮತ್ತು ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ 5 ಬಾರಿ ಈ ಸಾಧನೆ ಮಾಡಿದ್ದಾರೆ. ಈಗ 4 ಬಾರಿ ಈ ಪ್ರಶಸ್ತಿ ಗೆದ್ದರೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಲಿದ್ದಾರೆ.
ನಂಬರ್ ಒನ್ ಕೊಹ್ಲಿ
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅತಿಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ವಿಶ್ವದ ಮೊದಲ ಆಟಗಾರನಾಗಿದ್ದಾರೆ. ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದಿದ್ದಾರೆ. ಕೊಹ್ಲಿ ಏಕದಿನದಲ್ಲಿ 11 ಬಾರಿ, ಟಿ20ಯಲ್ಲಿ 7 ಬಾರಿ ಮತ್ತು ಟೆಸ್ಟ್‌ನಲ್ಲಿ 3 ಬಾರಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಅತಿಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ಆಟಗಾರರು
1) ವಿರಾಟ್ ಕೊಹ್ಲಿ- 21 (ಟೆಸ್ಟ್-3, ಏಕದಿನ-11, ಟಿ20-7)
2) ಸಚಿನ್ ತೆಂಡೂಲ್ಕರ್ - 20 (ಟೆಸ್ಟ್-5, ಏಕದಿನ-15, ಟಿ20-0)
3) ಶಕೀಬ್ ಅಲ್ ಹಸನ್ - 17 (ಟೆಸ್ಟ್-5, ಏಕದಿನ-7, ಟಿ20-5)
4) ಜಾಕ್ವೆಸ್ ಕಾಲಿಸ್ - 15 (ಟೆಸ್ಟ್-9, ಏಕದಿನ-6 ಟಿ20-0)
5) ಡೇವಿಡ್ ವಾರ್ನರ್ - 13 (ಟೆಸ್ಟ್-5, ಏಕದಿನ-3, ಟಿ20-5)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications