ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಕೇಪ್ ಟೌನ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಜೋಡಿ ಶಾನ್ ಮಸೂದ್ ಮತ್ತು ಬಾಬರ್ ಅಜಮ್ ದಾಖಲೆಯ ಜೊತೆಯಾಟವಾಡಿದ್ದಾರೆ. ಇದರೊಂದಿಗೆ ಶಾನ್ ಮಸೂದ್ ಮತ್ತು ಬಾಬರ್ ಅಜಮ್ ಪಾಕಿಸ್ತಾನ ತಂಡವನ್ನು ಫಾಲೋ ಆನ್ ನಿಂದ ಪಾರು ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಬೌಲರ್‌ಗಳ ಬೆಂಡೆತ್ತಿದ್ದ ಶಾನ್ ಮಸೂದ್ ಮತ್ತು ಬಾಬರ್ ಅಜಮ್ 205 ರನ್‌ಗಳ ಆರಂಭಿಕ ಜೊತೆಯಾಟ ಆಡುವ ಮೂಲಕ ಇತಿಹಾಸ ಸೃಷ್ಟಿಸಿದ್ದು, 17 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ 615 ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 194 ರನ್‌ಗಳಿಗೆ ಆಲೌಟ್ ಆಗಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನದ ಒಂದು ವಿಕೆಟ್ ಕಳೆದುಕೊಂಡು 213 ರನ್ ಗಳಿಸಿದೆ. ಇನ್ನೂ 8 ವಿಕೆಟ್‌ಗಳನ್ನು ಇಟ್ಟುಕೊಂಡಿರುವ ಪಾಕಿಸ್ತಾನ ದಕ್ಷಿಣ ಆಫ್ರಿಕಾಕ್ಕಿಂತ 208 ರನ್‌ಗಳಿಂದ ಹಿಂದುಳಿದಿದೆ.

ಒಂದು ಹಂತದಲ್ಲಿ ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ಪ್ರಾಬಲ್ಯ ಸಾಧಿಸಿತ್ತು. ಈ ವೇಳೆ ಪಾಕಿಸ್ತಾನ ಫಾಲೋ-ಆನ್ ಆಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪಾಕಿಸ್ತಾನ ಪರ ಶಾನ್ ಮಸೂದ್ ಮತ್ತು ಬಾಬರ್ ಅಜಮ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಇದರೊಂದಿಗೆ ಪಾಕಿಸ್ತಾನ ಪಂದ್ಯದಲ್ಲಿ ಅದ್ಭುತ ಪುನರಾಗಮನವನ್ನು ಮಾಡಿತು. ಈ ಆರಂಭಿಕ ಜೋಡಿಯು 205 ರನ್‌ಗಳ ಜೊತೆಯಾಟವಾಡಿದರು. ಬೃಹತ್ ರನ್ ಕಲೆ ಹಾಕುತ್ತಿದ್ದಂತೆ ಶಾನ್ ಮಸೂದ್ ಮತ್ತು ಬಾಬರ್ ಅಜಮ್ ಹೊಸ ದಾಖಲೆ ಸೃಷ್ಟಿಸಿದರು. ಮಸೂದ್ ಮತ್ತು ಬಾಬರ್ ಜೋಡಿಯು 2008 ರಲ್ಲಿ ಗ್ರೇಮ್ ಸ್ಮಿತ್ ಮತ್ತು ನೀಲ್ ಮೆಕೆಂಜಿ ಅವರ ಆರಂಭಿಕ 204 ರನ್‌ಗಳ ಜೊತೆಯಾಟದ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಬರ್ ಮತ್ತು ಮಸೂದ್ ಜೋಡಿ 18 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ನೆಲದಲ್ಲಿ ಬೃಹತ್ ಆರಂಭಿಕ ಜೊತೆಯಾಟವಾಡಿದ ಏಷ್ಯಾದ ಜೋಡಿ ಎನಿಸಿಕೊಂಡಿದೆ. ಇದಕ್ಕೂ ಮೊದಲು, ಈ ದಾಖಲೆಯು ಭಾರತದ ವಾಸಿಂ ಜಾಫರ್ ಮತ್ತು ದಿನೇಶ್ ಕಾರ್ತಿಕ್ ಹೆಸರಿನಲ್ಲಿತ್ತು. ಅವರು 2007 ರಲ್ಲಿ ದಕ್ಷಿಣ ಆಫ್ರಿಕಾದ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ 153 ರನ್‌ಗಳ ಜೊತೆಯಾಟವನ್ನು ಮಾಡುವ ಮೂಲಕ ದಾಖಲೆ ಮಾಡಿದ್ದರು. ಇದೀಗ ಬಾಬರ್ ಮತ್ತು ಮಸೂದ್ ಜೋಡಿ ಈ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಅಸದ್ ಶಫೀಕ್ ಮತ್ತು ಯೂನಿಸ್ ಖಾನ್- 219 (ಕೇಪ್ ಟೌನ್, 2013)
ಶಾನ್ ಮಸೂದ್ ಮತ್ತು ಬಾಬರ್ ಆಜಮ್- 205 (ಕೇಪ್ ಟೌನ್, 2025)
ಅಸದ್ ಶಫೀಕ್ ಮತ್ತು ಮಿಸ್ಬಾ-ಉಲ್-ಹಕ್- 197 (ದುಬೈ, 2013)
ಮಿಸ್ಬಾ-ಉಲ್-ಹಕ್ ಮತ್ತು ಯೂನಿಸ್ ಖಾನ್- 186* (ದುಬೈ, 2010)
ಕಮ್ರಾನ್ ಅಕ್ಮಲ್ ಮತ್ತು ಯೂನಿಸ್ ಖಾನ್- 161 (ಲಾಹೋರ್, 2007)