ಶೇನ್ ವಾರ್ನ್ ಆಯ್ಕೆಯ ಶ್ರೇಷ್ಠ ತಂಡಕ್ಕೆ ಗಂಗೂಲಿ ಕ್ಯಾಪ್ಟನ್
ಬೆಂಗಳೂರು, ಡಿ. 16: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರು ತಮ್ಮ ಆಯ್ಕೆಯ ಭಾರತದ ಶ್ರೇಷ್ಠ ಟೆಸ್ಟ್ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ. ಸೌರವ್ ಗಂಗೂಲಿ ನಾಯಕರಾಗಿದ್ದರೆ, ವಿವಿಎಸ್ ಲಕ್ಷ್ಮಣ್ ಅವರು 12ನೇ ಆಟಗಾರರಾಗಿರುವುದು ವಿಶೇಷ.
46 ವರ್ಷ ವಯಸ್ಸಿನ ವಾರ್ನ್ ಅವರು ಡಿಸೆಂಬರ್ 16ರಂದು ತಮ್ಮ ಫೇಸ್ ಬುಕ್ ಪುಟದಲ್ಲಿ ತಂಡವನ್ನು ಪ್ರಕಟಿಸಿ, ಭಾರತೀಯ ಕ್ರಿಕೆಟ್ ನ ಶ್ರೇಷ್ಠ ತಂಡ ಆಯ್ಕೆ ಕಷ್ಟದ ವಿಷಯ ಎಂದಿದ್ದಾರೆ.
ವಾರ್ನ್ ತಂಡದಲ್ಲಿ ಏಳು ಜನ ಮಾಜಿ ನಾಯಕರಿದ್ದಾರೆ. ರಾಹುಲ್ ದ್ರಾವಿಡ್, ತೆಂಡೂಲ್ಕರ್, ಗಂಗೂಲಿ, ಅಜರುದ್ದೀನ್, ಕಪಿಲ್ ದೇವ್, ಧೋನಿ ಹಾಗೂ ಅನಿಲ್ ಕುಂಬ್ಳೆ.[ಆಸ್ಟ್ರೇಲಿಯಾದ ಟಾಪ್ 15 ಶತಕ ಪಟ್ಟಿಯಲ್ಲಿ ಸಚಿನ್, ಲಕ್ಷ್ಮಣ್, ಸೆಹ್ವಾಗ್]

ರವಿಶಾಸ್ತ್ರಿ, ಜಹೀರ್ ಖಾನ್ ಹಾಗೂ ಸಂಜಯ್ ಮಂಜೇಕ್ರರ್, ಮನೋಜ್ ಪ್ರಭಾಕರ್, ವೆಂಗ್ ಸರ್ಕರ್ ಅವರ ಹೆಸರು ಆಯ್ಕೆಗೆ ಪರಿಗಣಿಸಲಾಗಿತ್ತು. ಕರ್ನಾಟಕದ ಪರ ಆಡಿರುವ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಅವರು ವಾರ್ನ್ ತಂಡಕ್ಕೆ ಆಯ್ಕೆಯಾದ ಮೊದಲಿಗರು.
ವಿವಿಎಸ್ ಲಕ್ಷ್ಮಣ್ ಹಾಗೂ ಅಜರುದ್ದೀನ್ ಆಯ್ಕೆಯಲ್ಲಿ ಗೊಂದಲ ಮೂಡಿತ್ತು. ಇಬ್ಬರು ಹೈದರಾಬಾದ್ ಮೂಲದವರಾಗಿದ್ದು, ಒಂದೇ ಶೈಲಿಯ ಬ್ಯಾಟಿಂಗ್ ಮಾಡುವವರಾಗಿದ್ದಾರೆ. ಅಂತಿಮವಾಗಿ ಲಕ್ಷ್ಮಣ್ ಗಿಂತ ಅಜರುದ್ದೀನ್ ಅವರು ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಎನಿಸಿತು ಎಂದು ವಾರ್ನ್ ವಿವರಿಸಿದ್ದಾರೆ.
145 ಟೆಸ್ಟ್ ಪಂದ್ಯಗಳನ್ನಾಡಿ 708 ವಿಕೆಟ್ ಪಡೆದಿರುವ ವಾರ್ನ್ ಅವರು ತಮ್ಮ ಆಯ್ಕೆಯ ಶ್ರೇಷ್ಠ ತಂಡದ ಆಟಗಾರರೆಲ್ಲರ ವಿರುದ್ಧ ಆಡಿದ್ದಾರೆ. ಆದರೆ, ಎಂಎಸ್ ಧೋನಿ ವಿರುದ್ಧ ಐಪಿಎಲ್ ನಲ್ಲಿ ಮಾತ್ರ ಎದುರಾಗಿದ್ದು ವಿಶೇಷ.

ವಾರ್ನ್ ಆಯ್ಕೆಯ ಭಾರತದ ಶ್ರೇಷ್ಠ ಟೆಸ್ಟ್ ಕ್ರಿಕೆಟ್ ತಂಡ ಇಲ್ಲಿದೆ:
1. ವೀರೇಂದ್ರ ಸೆಹ್ವಾಗ್
2. ನವಜೋತ್ ಸಿಂಗ್ ಸಿಧು
3. ರಾಹುಲ್ ದ್ರಾವಿಡ್
4. ಸಚಿನ್ ತೆಂಡೂಲ್ಕರ್
5. ಸೌರವ್ ಗಂಗೂಲಿ
6. ಮೊಹಮ್ಮದ್ ಅಜರುದ್ದೀನ್
7. ಕಪಿಲ್ ದೇವ್
8. ಎಂಎಸ್ ಧೋನಿ
9. ಅನಿಲ್ ಕುಂಬ್ಳೆ
10. ಹರ್ಭಜನ್ ಸಿಂಗ್
11. ಜಾವಗಲ್ ಶ್ರೀನಾಥ್
12. ವಿವಿಎಸ್ ಲಕ್ಷ್ಮಣ್
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications