Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಶ್ರೇಷ್ಠ ಪ್ಲೇಯಿಂಗ್ 11 ಹೆಸರಿಸಿದ ಶೇನ್ ವಾರ್ನ್: ಧೋನಿ, ಕೊಹ್ಲಿ ಹೆಸರಿಲ್ಲ!

Shane warne

ವಿಶ್ವ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಟೀಂ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ತಂಡವನ್ನ ಹೆಸರಿಸಿದ್ದಾರೆ. ಭಾರತದ ವಿರುದ್ಧ ಅನೇಕ ಅಂತರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ವಾರ್ನ್, ಯಾವುದೇ ಮಾಡ್ರನ್ ಡೇ ಕ್ರಿಕೆಟರ್ ಅನ್ನು ಆಯ್ಕೆ ಮಾಡದೇ ಇರುವುದು ಅಭಿಮಾನಿಗಳಿಗೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ.

ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11ನಲ್ಲಿ ಟೀಂ ಇಂಡಿಯಾಕ್ಕೆ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದುಕೊಟ್ಟು ಮಹೇಂದ್ರ ಸಿಂಗ್ ಧೋನಿ ಆಗಲಿ, ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಇರಲಿ, ಲಿಮಿಟೆಡ್ ಓವರ್ ಕ್ರಿಕೆಟ್‌ನ ಲೆಜೆಂಡ್‌ಗಳಲ್ಲಿ ಒಬ್ಬಾತ ವಿರಾಟ್ ಕೊಹ್ಲಿಗಾಗಲಿ ಸ್ಥಾನ ಒದಗಿಸಿಲ್ಲ.

ಆದ್ರೆ ಶೇನ್ ವಾರ್ನ್ ಈ ಕುರಿತಾಗಿ ಸ್ಪಷ್ಟಪಡಿಸಿದ್ದು, ತಾನು ಆಡಿದ ಎದುರಾಳಿ ಆಟಗಾರರನ್ನು ಮಾತ್ರ ಆಯ್ಕೆ ಮಾಡುತ್ತಿದ್ದೇನೆ, ಹೀಗಾಗಿ ಭಾರತದ ಮಾಡ್ರನ್ ಡೇ ಕ್ರಿಕೆಟರ್ಸ್ ಈ ಪಟ್ಟಿಯಲ್ಲಿಲ್ಲ ಎಂಬುದನ್ನ ತಿಳಿಸಿದ್ದಾರೆ.

"ನಾನು ನನ್ನ ವಿರುದ್ಧ ಆಡಿದ ಆಟಗಾರರನ್ನು ಮಾತ್ರ ಆಯ್ಕೆ ಮಾಡುತ್ತಿದ್ದೇನೆ. ಅದಕ್ಕಾಗಿಯೇ ಎಂ.ಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ತಂಡದ ಭಾಗವಾಗುವುದಿಲ್ಲ. ಧೋನಿ ಬಹುಶಃ ಭಾರತದ ಪರ ಆಡಿದ ಶ್ರೇಷ್ಠ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿದ್ದರೆ, ಕೊಹ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು'' ಎಂದು ವಾರ್ನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಸೌರವ್ ಗಂಗೂಲಿಯನ್ನ ಟೀಂ ಇಂಡಿಯಾ ನಾಯಕನಾಗಿ ಮಾಡಿದ್ದು, ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬ್ಯಾಟಿಂಗ್ ರೆಕಾರ್ಡ್‌ ಹೊಂದಿರುವ ವಿವಿಎಸ್ ಲಕ್ಷ್ಮಣ್‌ ಅವರನ್ನ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ.

"ನಾನು ಗಂಗೂಲಿ ಅವರನ್ನು ನನ್ನ ತಂಡದ ನಾಯಕನಾಗಬೇಕೆಂದು ಬಯಸಿದ್ದೆ, ಅದಕ್ಕಾಗಿಯೇ ಲಕ್ಷ್ಮಣ್ ಹೆಸರನ್ನ ಕೈ ಬಿಟ್ಟಿದ್ದೇನೆ" ಎಂದು ಅವರು ಹೇಳಿದರು.

ಶೇನ್‌ ವಾರ್ನ್‌ರ ಬೆಸ್ಟ್ ಪ್ಲೇಯಿಂಗ್ 11 (ಭಾರತ) ಆಟಗಾರರ ಹೆಸರು ಈ ಕೆಳಗಿನಂತಿದೆ:
ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ನವಜೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಕಪಿಲ್ ದೇವ್, ನಯನ್ ಮೊಂಗಿಯಾ (ವಿಕೆಟ್ ಕೀಪರ್), ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ.

ಇತ್ತೀಚೆಗಷ್ಟೇ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಆಲ್‌ ಟೈಂ ಬೆಸ್ಟ್ ಇಲೆವೆನ್ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗಾಗಲಿ, ಯುವರಾಜ್, ಧೋನಿಗಾಗಲಿ ಸ್ಥಾನ ಕೊಟ್ಟಿಲ್ಲ. ಅಷ್ಟೇ ಏಕೆ ಭಾರತದ ಗೋಡೆ ರಾಹುಲ್ ದ್ರಾವಿಡ್ ಹೆಸರನ್ನ ಸಹ ಕೈ ಬಿಟ್ಟಿದ್ದರು. ಹಾಗಿದ್ದರೆ ಸಚಿನ್ ಆಲ್‌ ಟೈಂ ಬೆಸ್ಟ್ ಆಟಗಾರರು ಯಾರು ಎಂದು ಈ ಕೆಳಗೆ ತಿಳಿಯಿರಿ.

ಸಚಿನ್ ತೆಂಡೂಲ್ಕರ್‌ನ ಸಾರ್ವಕಾಲಿಕ ಶ್ರೇಷ್ಠ 11 ಆಟಗಾರರು
ವೀರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್, ಜಾಕ್ವೆಸ್ ಕಾಲಿಸ್, ಸೌರವ್ ಗಂಗೂಲಿ, ಆಡಂ ಗಿಲ್‌ಕ್ರಿಸ್ಟ್, ಶೇನ್ ವಾರ್ನ್, ವಾಸಿಂ ಅಕ್ರಮ್, ಹರ್ಭಜನ್ ಸಿಂಗ್ ಮತ್ತು ಗ್ಲೆನ್ ಮೆಗ್ರಾತ್

Story first published: Monday, January 10, 2022, 10:30 [IST]
Other articles published on Jan 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+