Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

22 ವರ್ಷದ ಬಳಿಕ ಸಚಿನ್‌ ಎಲ್‌ಬಿಡಬ್ಲ್ಯೂಗೆ ಶೇನ್ ವಾರ್ನ್ ಅಪೀಲ್

Shane Warne Shares Old Clip of Lbw Appeal Against Sachin Tendulkar

ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ನಡುವಿನ ಜಿದ್ದಾಜಿದ್ದಿ ಸಾಕಷ್ಟು ಖ್ಯಾತಿಪಡೆದುಕೊಂಡಿದೆ. ಶೇನ್ ವಾರ್ನ್‌ರಂತಾ ದಿಗ್ಗಜ ಬೌಲರನ್ನು ಅದುರಿಸಲು ವಿಶ್ವದ ಎಲ್ಲಾ ದಾಂಡಿಗರು ತಿಣುಕಾಡುತ್ತುದ್ದರೆ ಸಚಿನ್‌ಗೆ ಮಾತ್ರ ಶೇನ್ ವಾರ್ನ್ ಎದುರಿಸುವುದೆಂದರೆ ಅಚ್ಚುಮೆಚ್ಚು. ಶೇನ್ ವಾರ್ನ್ ಎಸೆತವನ್ನು ಸಚಿನ್ ಮುನ್ನುಗ್ಗಿ ಬಾರಿಸುತ್ತಿದ್ದ ರೀತಿಗೆ ಎಲ್ಲರೂ ಮನಸೋತಿದ್ದರು.

ಸಚಿನ್‌ ತೆಂಡೂಲ್ಕರ್ ಅವರ ವಿಕೆಟ್ ಪಡೆಯಲು ವಾರ್ನ್ ಮಾತ್ರ ಹರಸಾಹಸವನ್ನೇ ಪಡಬೇಕಾಗಿಯತ್ತು. ಹೀಗೆ ಅದೊಂದು ಪಂದ್ಯದಲ್ಲಿ ಸಚಿನ್ ಅವರ ವಿಕೆಟ್ ಪಡೆಯಲು ಸಾಧ್ಯವಾಗದ ಶೇನ್ ವಾರ್ನ್ ಇಂದು ಟ್ವಿಟ್ಟರ್‌ನಲ್ಲಿ ಔಟ್‌ಗಾಗಿ ಮನವಿ ಮಾಡಿದ್ದಾರೆ.

ಟ್ವಿಟ್ಟರ್‌ನಲ್ಲಿ ರಾಬ್ ಮೂಡಿ ಎಂಬವರು 1998ರಲ್ಲಿ ನಡೆದ ಟೆಸ್ಟ್ ಪಂದ್ಯದ ತುಣುಕೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಸಚಿನ್ ತೆಂಡುಲ್ಕರ್ ವಾರ್ನ್ ಎಸೆತವನ್ನು ಡೆಫೆಂಡ್ ಮಾಡಲು ಹೋಗಿ ಎಲ್‌ಬಿಡಬ್ಲ್ಯೂ ಬಲೆಗೆ ಬೀಳುವ ಸಾಧ್ಯತೆಯಿತ್ತು. ವಾರ್ನ್ ಮತ್ತು ಆಸಿಸ್ ತಂಡದ ಇತರ ಸದಸ್ಯರು ಔಟ್‌ಗಾಗಿ ಬಲವಾದ ಮನವಿಯನ್ನು ಮಾಡಿದ್ದರು. ಆದರೆ ಅಂಪೈರ್ ಇದನ್ನು ನಾಟೌಟ್ ಎಂದು ತೀಮಾನಿಸಿದ್ದರು.

ಈ ವಿಡಿಯೋವನ್ನು ಮತ್ತೆ ರಿಟ್ವೀಟ್ ಮಾಡಿರುವ ಶೇನ್ ವಾರ್ನ್ ಇದು ನಾಟ್ಔಟ್‌ ಆಗೋದಿಕ್ಕೆ ಹೇಗೆ ಸಾಧ್ಯ ಎಂದು ಬರೆದುಕೊಂಡಿದ್ದಾರೆ. ಶೇನ್ ವಾರ್ನ್ ಈ ಟ್ವೀಟ್‌ಗೆ ಅಭಿಮಾನಿಗಳು ಸೇರಿದಂತೆ ಅನೇಕ ಕ್ರಿಕೆಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.ಈ ಪಂದ್ಯದಲ್ಲಿ ಸಚಿನ್ ಅಜೇಯ 155 ರನ್ ದಾಖಲಿಸಿದ್ದರು.

Story first published: Monday, April 6, 2020, 20:22 [IST]
Other articles published on Apr 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+