Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಟೀಮ್ ಇಂಡಿಯಾದ ಈ ಆಟಗಾರನ ಅಭಿಮಾನಿ ಶೇನ್‌ ವ್ಯಾಟ್ಸನ್‌

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಳೆದ ವರ್ಷ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲೂ ವಿರಾಟ್‌ ರನ್‌ ಬರವನ್ನು ಅನುಭವಿಸುತ್ತಿದ್ದರು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಅವರ ಬ್ಯಾಟ್ ಮೌನವಾಗಿತ್ತು. ಚಾಂಪಿಯನ್ಸ್ ಟ್ರೋಫಿ ಸಮೀಪಿಸುತ್ತಿರುವುದರಿಂದ ಎಲ್ಲರ ಕಣ್ಣು ಈಗ ಚೇಸಿಂಗ್ ಸ್ಟಾರ್ ಮೇಲೆ ನೆಟ್ಟಿದೆ. ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಬ್ಯಾಟ್ ಹೇಗಿರಲಿದೆ ಎಂಬ ಬಗ್ಗೆ ಪ್ರಶ್ನೆಗಳು ಮೂಡಿವೆ.

ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವ್ಯಾಟ್ಸನ್‌ ವಿರಾಟ್‌ ಕೊಹ್ಲಿ ಅವರ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. " ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಸ್ವರೂಪಕ್ಕೆ ಮರಳಿದ ನಂತರ ಪ್ರಸ್ತುತ ಕಳಪೆ ಫಾರ್ಮ್ ಯಾವುದೇ ಪರಿಣಾಮ ಬೀರುವುದಿಲ್ಲ. ದುಬೈನಲ್ಲಿ ಭಾರತ ತನ್ನ ಪಂದ್ಯಗಳನ್ನು ಆಡಲಿದೆ. ಈ ಅಂಗಳದಲ್ಲಿ ಮತ್ತೆ ಇಬ್ಬರೂ ಆಟಗಾರರು ಲಯ ಕಂಡುಕೊಳ್ಳಲಿದ್ದಾರೆ ಎಂಬ ಭರವಸೆಯನ್ನು ಶೇನ್ ವ್ಯಾಟ್ಸನ್‌ ವ್ಯಕ್ತ ಪಡಿಸಿದ್ದಾರೆ.

Shane Watson on Virat Kohli Master of ODI Cricket Expectations High for Champions Trophy

ಶೇನ್‌ ವ್ಯಾಟ್ಸನ್ ಹೇಳಿದ್ದೇನು?

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ಗೆ ಶೇನ್‌ ವ್ಯಾಟ್ಸನ್‌ ದೊಡ್ಡ ಅಭಿಮಾನಿ ಎಂದು ತಿಳಿಸಿದ್ದಾರೆ. ವಿರಾಟ್ ಇಲ್ಲಿಯವರೆಗೆ 295 ಪಂದ್ಯಗಳಲ್ಲಿ 13,906 ರನ್ ಗಳಿಸಿದ್ದಾರೆ. ಈ ವೇಳೆ ಇವರ ಸರಾಸರಿ 58.18 ಆಗಿದೆ. ಏಕದಿನ ಸ್ವರೂಪದಲ್ಲಿ ವಿರಟ್‌ 50 ಶತಕ ಹಾಗೂ 72 ಅರ್ಧಶತಕಗಳನ್ನು ಬಾರಿಸಿದ್ದಾರೆ.

ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನ ಮಾಸ್ಟರ್‌. ಇವರು ಮೂರು ಸ್ಟರೂಪಗಳಲ್ಲಿ ಸ್ಥಿರ ಬ್ಯಾಟಿಂಗ್ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಆದರೆ ಇವರು ಏಕದಿನ ಸ್ವರೂಪದಲ್ಲಿ ಬೇರೆಯದ್ದೇ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಅಂಕಿ ಅಂಶಗಳ ಏಕದಿನ ಸ್ವರೂಪದಲ್ಲಿ ಸ್ಥಿರವಾಗಿವೆ. ಇವರು 50 ಓವರ್‌ಗಳ ಫಾರ್ಮೆಟ್‌ನಲ್ಲಿ 93 ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಇವರು ಬ್ಯಾಲೆನ್ಸ್‌ ಆಗಿ ಇನಿಂಗ್ಸ್‌ ಕಟ್ಟುವ ಕ್ಷಮತೆ ಹೊಂದಿರುವ ಆಟಗಾರ ಎಂದು ಶೇನ್ ಬಣ್ಣಿಸಿದ್ದಾರೆ.

Shane Watson on Virat Kohli Master of ODI Cricket Expectations High for Champions Trophy

ಹೇಗಿದೇ ವಿರಾಟ್ ಅಂಕಿ ಅಂಶ?

ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅವರ ಅಂಕಿ ಅಂಶ ಅಮೋಘವಾಗಿವೆ. ಇವರು ಇದುವರೆಗೆ ಚಾಂಪಿಯನ್ಸ್‌ ಟ್ರೋಫಿ ಇತಿಹಾಸದಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿದ್ದಾರೆ. ಇವರ ಸರಾಸರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರ ಸರಾಸರಿ 88.16 ಆಗಿದೆ. ಮತ್ತು ಐಸಿಸಿಯ ಬಿಗ್‌ ಟೂರ್ನಿ ಇವರು 529 ರನ್‌ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಪಾಕಿಸ್ತಾನ ಆಯೋಜಿಸಲಿರುವ ಚಾಂಪಿಯನ್ಸ್‌ ಟ್ರೋಫಿ ಏಕದಿನ ಫಾರ್ಮೆಟ್‌ನಲ್ಲಿ ನಡೆಯಲಿದೆ.

Story first published: Monday, January 6, 2025, 19:48 [IST]
Other articles published on Jan 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+