Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shannon Gabriel Retired: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿಂಡೀಸ್ ವೇಗಿ ವಿದಾಯ

ವೆಸ್ಟ್ ಇಂಡೀಸ್‌ನ ಅನುಭವಿ ವೇಗದ ಬೌಲರ್ ಶಾನನ್ ಗೇಬ್ರಿಯಲ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಈ ಕ್ರಿಕೆಟಿಗ ವಿದಾಯ ಹೇಳಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಶಾನನ್ ಗೇಬ್ರಿಯಲ್ ಮೇ 17, 2012 ರಂದು ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದ್ದರು. ಅವರು ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Shannon Gabriel has announced his retirement from international cricket

ಶಾನನ್ ಗೇಬ್ರಿಯಲ್ ಹೇಳಿದ್ದೇನು?

" ಕಳೆದ 12 ವರ್ಷಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಇಂತಹ ದೊಡ್ಡ ವೇದಿಕೆಯಲ್ಲಿ ಈ ಪ್ರೀತಿಯ ಆಟವನ್ನು ಆಡಿರುವುದು ತುಂಬಾ ಸಂತೋಷವನ್ನು ತಂದಿದೆ. ಆದರೆ ಗಾದೆ ಮಾತಿನಂತೆ ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು. ಇಂದು ನಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ" ಎಂದು ಭಾವನಾತ್ಮಕವಾಗಿ ಶಾನನ್ ಗೇಬ್ರಿಯಲ್ ಬರೆದುಕೊಂಡಿದ್ದಾರೆ.

ಅಲ್ಲದೆ, ಮುಂದಿನ ದಿನಗಳಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ ಕ್ಲಬ್ ಹಾಗು ಫ್ರಾಂಚೈಸ್ ಲೀಗ್‌ಗಳನ್ನು ಆಡುವುದನ್ನು ಮುಂದುವರಿಸಲು ನಾನು ಯೋಜಿಸುತ್ತೇನೆ ಎಂದು ಗೇಬ್ರಿಯಲ್ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ವೃತ್ತಿಜೀವನ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ವರ್ಷಗಳ ಕಾಲ ವೆಸ್ಟ್ ಇಂಡೀಸ್ ತಂಡವನ್ನು ಶಾನನ್ ಗೇಬ್ರಿಯಲ್ ಪ್ರತಿನಿಧಿಸಿದ್ದಾರೆ. ಅವರು ವಿಂಡೀಸ್ ಪರ 59 ಟೆಸ್ಟ್ ಪಂದ್ಯಗಳಲ್ಲಿ 166 ವಿಕೆಟ್ ಪಡೆದಿದ್ದಾರೆ. 25 ಏಕದಿನ ಪಂದ್ಯಗಳಲ್ಲಿ 33 ವಿಕೆಟ್ ಉರುಳಿಸಿದ್ದಾರೆ.

ಇದಲ್ಲದೇ ಶಾನನ್ ಗೇಬ್ರಿಯಲ್ 2 ಟಿ20 ಕ್ರಿಕೆಟ್‌ನಲ್ಲಿ ಕೇವಲ 3 ವಿಕೆಟ್ ಪಡೆದಿದ್ದಾರೆ. ಇದೀಗ ಶಾನನ್ ಗೇಬ್ರಿಯಲ್ ಅವರು ತಮ್ಮ 36ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ರೂಟ್ ವಿರುದ್ಧ ವಿವಾದಾತ್ಮಕ ಹೇಳಿಕೆ

ಶಾನನ್ ಗೇಬ್ರಿಯಲ್ ಅವರ ಹಠಾತ್ ನಿವೃತ್ತಿಯಿಂದ ಕ್ರಿಕೆಟ್‌ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಇನ್ನೂ 2 ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯವಿದ್ದರೂ ನಿವೃತ್ತಿ ಘೋಷಿಸಿರುವುದು ಅಚ್ಚರಿ ತಂದಿದೆ.

ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಶಾನನ್ ಗೇಬ್ರಿಯಲ್ ಅವರನ್ನು 2019ರಲ್ಲಿ ನಾಲ್ಕು ಏಕದಿನ ಪಂದ್ಯಗಳಿಗೆ ನಿಷೇಧಿಸಲಾಯಿತು. ಈ ವಿವಾದ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿತ್ತು.

Story first published: Thursday, August 29, 2024, 12:01 [IST]
Other articles published on Aug 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+