Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ವಿಂಡೀಸ್ ತಂಡ ಪ್ರಕಟ, ಗೇಬ್ರಿಯಲ್ ಸೇರ್ಪಡೆ

Shannon Gabriel named in West Indies squad for England series

ಲಂಡನ್, ಜುಲೈ 3: ಮೊಣಕಾಲು ಗಾಯದಿಂದ ಗುಣಮುಖರಾಗಿರುವ ವೇಗಿ ಶಾನನ್ ಗೇಬ್ರಿಯಲ್ ವೆಸ್ಟ್ ಇಂಡೀಸ್ ಕ್ರಿಕೆಟ್‌ ಟೆಸ್ಟ್ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್, 15 ಜನರ ತಂಡ ಪ್ರಕಟಿಸಿದೆ. ಈ ತಂಡದಲ್ಲಿ ಗೇಬ್ರಿಯಲ್ ಕೂಡ ಇದ್ದಾರೆ.

ಟೆಸ್ಟ್ ಸರಣಿಗಾಗಿ ವಿಂಡೀಸ್ ತಂಡ ಇಂಗ್ಲೆಂಡ್‌ಗೆ ಬಂದಿಳಿಯುವಾಗ ಗೇಬ್ರಿಯಲ್ ಅವರು ಮೀಸಲು ಆಟಗಾರರ ಸಾಲಿನಲ್ಲಿದ್ದರು. ಆದರೆ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ಗೇಬ್ರಿಯಲ್, ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ತಂಡದೊಳಗಿನ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಾನು ಮತ್ತೆ ಫಿಟ್ ಆಗಿರುವುದನ್ನು ಸಾಬೀತುಪಡಿಸಿದ್ದಾರೆ.

ಗೇಬ್ರಿಯಲ್ ಅಲ್ಲದೆ ವೆಸ್ಟ್ ಇಂಡೀಸ್ ತಂಡದಲ್ಲಿ ವೇಗಿಗಳ ಬಣದಲ್ಲಿ ನಾಯಕ ಜೇಸನ್ ಹೋಲ್ಡರ್, ಕೆಮರ್ ರೋಚ್, ಚೆಮರ್ ಹೋಲ್ಡರ್, ಅಲ್ಝಾರಿ ಜೋಸೆಫ್ ಮತ್ತು ರೇಮನ್ ರೀಫರ್ ಈ ಪ್ರಮುಖರು ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಜುಲೈ 8ರಿಂದ ಆರಂಭಗೊಳ್ಳಲಿದೆ.

ವೆಸ್ಟ್ ಇಂಡೀಸ್ ಟೆಸ್ಟ್ ತಂಡ
ಜೇಸನ್ ಹೋಲ್ಡರ್ (ನಾಯಕ), ಜೆರ್ಮೈನ್ ಬ್ಲ್ಯಾಕ್‌ವುಡ್, ಎನ್‌ಕ್ರುಮಾ ಬೊನ್ನರ್, ಕ್ರೈಗ್ ಬ್ರಾಥ್‌ವೈಟ್, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರೋಸ್ಟನ್ ಚೇಸ್, ರಹಕೀಮ್ ಕಾರ್ನ್‌ವಾಲ್, ಶೇನ್ ಡೌರಿಚ್, ಶಾನನ್ ಗೇಬ್ರಿಯಲ್, ಚೆಮರ್ ಹೋಲ್ಡರ್, ಶೈ ಹೋಪ್, ಅಲ್ಝಾರಿ ಜೋಸೆಫ್, ರೇಮನ್ ರೀಫರ್ ಮತ್ತು ಕೆಮರ್ ರೋಚ್.

Story first published: Friday, July 3, 2020, 14:08 [IST]
Other articles published on Jul 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+