ಪ್ರಿಯಾಂಶ್ ಆರ್ಯ ಅಷ್ಟೇ ಅಲ್ಲಾ, ಪಂಜಾಬ್ ಜಯಕ್ಕೆ ಇವರೂ ಸಹ ಕಾರಣ
ತವರಿನ ಅಂಗಳದಲ್ಲಿ ಪಂಜಾಬ್ ಕಿಂಗ್ಸ್ ಗೆಲುವು ದಾಖಲಿಸುವಲ್ಲಿ ಪ್ರಿಯಾಂಶ್ ಆರ್ಯ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಆದರೆ ಇವರ ಜೊತೆ ಈ ಗೆಲುವಿನ ಶ್ರೇಯ ಇನ್ನೊಬ್ಬ ಆಟಗಾರನಿಗೂ ಸಲ್ಲುತ್ತದೆ. ಈ ಪ್ಲೇಯರ್ ಸಹ ಪಂಜಾಬ್ ಕಿಂಗ್ಸ್ ತವರಿನಲ್ಲಿ ಮೊದಲ ಗೆಲುವಿನ ನಗೆ ಬೀರಲು ಸಹಾಯ ಮಾಡಿದ್ದಾರೆ. ಪ್ರಿಯಾಂಶ್ ಜೊತೆ ಉತ್ತಮ ಜೊತೆಯಾಟ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದ ಆಟಗಾರ ಶಶಾಂಕ್ ಸಿಂಗ್.
32 ವರ್ಷದ ಭರವಸೆಯ ಮಿಡ್ಲ್ ಆರ್ಡರ್ ಬ್ಯಾಟರ್ ಶಶಾಂಕ್ ಸಿಂಗ್ ಅವರ ಅಮೋಘ ಪ್ರಯತ್ನ ಪ್ರಿಯಾಂಶ್ ಆರ್ಯ ಆಟದ ಮುಂದೆ ತೆರೆಯ ಹಿಂದೆ ಸರಿಯಿತು. ಆದರೆ ಕ್ರಿಕೆಟ್ ಅಂಗಳದಲ್ಲಿ ಇವರು ತೋರಿಸಿದ ಶಾಂತ ಸ್ವಾಭಾವ, ಒತ್ತಡವನ್ನು ಮೆಟ್ಟಿನಿಲ್ಲುವ ಎದೆಗಾರಿಕೆ ಪಂಜಾಬ್‌ಗೆ ನೆರವಾಯಿತು. ಇವರು 31 ಎಸೆತಗಳಲ್ಲಿ 52 ರನ್ ಸಿಡಿಸಿ ತಂಡದ ಗೆಲುವಿನ ತಮ್ಮ ಕಾಣಿಕೆ ನೀಡಿದರು.

ಪ್ರಿಯಾಂಶ್ ಆರ್ಯ ಸ್ಪೋಟದ ಆಟದಷ್ಟೇ ಶಶಾಂಕ್ ಸಿಂಗ್ ಅವರ ಎಚ್ಚರಿಕೆಯ ಆಟ ಅಮೋಘ. ಪ್ರಿಯಾಂಶ್ ಆರ್ಯ ಐಪಿಎಲ್ ಇತಿಹಾಸದ 4ನೇ ವೇಗದ ಶತಕ ಬಾರಿಸಿ 14ನೇ ಓವರ್‌ನಲ್ಲಿ ಪೆವಿಲಿಯನ್ ಸೇರಿದರು. ಈ ವೇಳೆ ಪಂಜಾಬ್ ತಂಡದ ಸ್ಕೋರ್ 154 ರನ್‌ಗಳಿಗೆ ಆರು ವಿಕೆಟ್ ಆಗಿತ್ತು. ಆದರೆ ಇಲ್ಲಿಂದ ಇನಿಂಗ್ಸ್‌ನ್ನು 200 ಗಡಿ ದಾಟಿಸುವಲ್ಲಿ ಶಶಾಂಕ್ ಸಿಂಗ್ ಕಾಣಿಕೆ ಅಪಾರ. ಇವರು ತಮ್ಮ ಶಾಟ್ ಸೆಲಕ್ಷನ್‌ಗಳಿಂದ ರನ್ ವೇಗಕ್ಕೆ ಚುರುಕು ಮುಟ್ಟಿಸುತ್ತಲೇ ಸಾಗಿದರು.
ಸೂಪರ್ ಬ್ಯಾಟಿಂಗ್
ಶಶಾಂಕ್, ಮಾರ್ಕೊ ಜಾನ್ಸನ್ ಅವರೊಂದಿಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 38 ಎಸೆತಗಳಲ್ಲಿ ಅಜೇಯ 65 ರನ್ ಸಿಡಿಸಿ ತಂಡದ ಮೊತ್ತ ಹಿಗ್ಗಿಸಿತು. ಈ ವೇಳೆ ಮಾರ್ಕೊ ಜಾನ್ಸನ್ ಸಹ ಉತ್ತಮ ಹೊಡೆತಗಳನ್ನು ಪ್ರಯೋಗಿಸಿದರು. ಶಶಾಂಕ್ ಮತೀಶ್ ಪತಿರಾಣಾಗೆ ಬಾರಿಸಿದ ನೋ ಲುಕ್ ಶಾಟ್ ಇವರ ಇನಿಂಗ್ಸ್‌ನ ಹೈಲೈಟ್ಸ್.
ನೋ ಲುಕ್ ಶಾಟ್ ಬೆಸ್ಟ್
ಶಶಾಂಕ್ ಸಿಂಗ್ ಅವರು ತಮ್ಮ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇವರು ಸ್ಪಿನ್ ಹಾಗೂ ವೇಗಿಗಳನ್ನು ದಂಡಿಸಿದ ಧಾಟಿ ಅಭಿಮಾನಿಗಳ ಮನ ಗೆದ್ದಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭರವಸೆಯ ಸ್ಪಿನ್ ಬೌಲರ್ ನೂರ್ ಅಹ್ಮದ್ ಅವರಿಗೆ ಶಶಾಂಕ್ ಬಾರಿಸಿದ ಸಿಕ್ಸ್ ಇವರಲ್ಲಿರುವ ಕ್ಷಮತೆಯನ್ನು ತೋರಿಸುತ್ತದೆ. ಇನ್ನು ಆರ್ ಅಶ್ವಿನ್ ಗೆ ಬಾರಿಸಿದ ಸ್ಟ್ರೇಟ್ ಶಾಟ್ ಇವರಲ್ಲಿರುವ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಪಂಜಾಬ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರೂ, ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಪ್ರಿಯಾಂಶ್ ಆರ್ಯ ಹಾಗೂ ಶಶಾಂಕ್ ಸಿಂಗ್ ಕಾರಣ.

ಪ್ರಿಯಾಂಶ್ ಆರ್ಯ ಎಲ್ಲರ ಚಿತ್ತ ಕದ್ದು ಹೆಡ್‌ಲೈನ್ ಆದರೆ, ಶಶಾಂಕ್ ಸಿಂಗ್ ತಮಗೆ ತಂಡ ನೀಡಿದ್ದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications