ಸಂಜು ಸ್ಯಾಮ್ಸನ್ ಭಾರತದ ಭವಿಷ್ಯದ ಎಂ.ಎಸ್. ಧೋನಿ ಎಂದ ಶಶಿ ತರೂರ್, ಒಪ್ಪಲಿಲ್ಲ ಗೌತಮ್ ಗಂಭೀರ್!

ಮರುಭೂಮಿ ನಗರಿ ದುಬೈನ ಶಾರ್ಜಾದಲ್ಲಿ ಸಿಕ್ಸರ್‌ಗಳ ಸುಂಟರಗಾಳಿ ಎಬ್ಬಿಸಿದ ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ಭವಿಷ್ಯದ ಎಂ.ಎಸ್. ಧೋನಿ ಎಂದೇ ಕರೆಸಿಕೊಂಡಿದ್ದಾರೆ. ಹೀಗಂತ ನಾವು ಹೇಳ್ತಿಲ್ಲ.. ಬದಲಿಗೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್ ಕೇವಲ 25 ಎಸೆತಗಳಲ್ಲಿ 50 ರನ್ ಸಿಡಿಸಿದ. 202ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸಂಜು ಇನ್ನಿಂಗ್ಸ್‌ನಲ್ಲಿ ಏಳು ಭರ್ಜರಿ ಸಿಕ್ಸರ್‌ಗಳಿದ್ರೆ, ನಾಲ್ಕು ಆಕರ್ಷಕ ಬೌಂಡರಿಗಳಿದ್ದವು. ದ್ವಿತೀಯ ವಿಕೆಟ್‌ಗೆ ಸ್ಟೀವ್ ಸ್ಮಿತ್ ಜೊತೆಗೂಡಿ ಸ್ಫೋಟಕ ಆಟವಾಡಿದ್ದ ಸಂಜು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಈ ಹಿಂದೆ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ ಆಟ ಬೊಂಬಾಟ್ ಆಗಿತ್ತು. ಕೇವಲ 32 ಎಸೆಗಳಲ್ಲಿ 72ರನ್ ಚಚ್ಚಿದ್ದ ಸಂಜು ತನ್ನ ತಾಕತ್ತನ್ನು ಪ್ರದರ್ಶಿಸಿದ್ರು.

ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಸಂಜು ಆಟವನ್ನ ನೋಡಿ ಹೊಗಳಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ''ರಾಜಸ್ಥಾನ್ ರಾಯಲ್ಸ್ ಸಂಪೂರ್ಣವಾಗಿ ನಂಬಲಾಗದ ಗೆಲುವು ಕಂಡಿದೆ. @iamSanjuSamson ಬಗ್ಗೆ ದಶಕದಿಂದ ತಿಳಿದಿದ್ದೇನೆ ಮತ್ತು ಅವನು 14 ವರ್ಷದವನಿದ್ದಾಗ ಅವನಿಗೆ ಒಂದು ದಿನ ಮುಂದಿನ ಎಂಎಸ್ ಧೋನಿ ಎಂದು ಹೇಳಿದ್ದಾನೆ. ಸರಿ, ಆ ದಿನ ಇಲ್ಲಿದೆ. ಅವನ ಈ ಎರಡು ಐಪಿಎಲ್ ಅದ್ಭುತ ಇನ್ನಿಂಗ್ಸ್ ವಿಶ್ವ ದರ್ಜೆಯ ಆಟಗಾರನೊಬ್ಬ ಬಂದಿದ್ದಾನೆಂದು ನಿಮಗೆ ತಿಳಿಸುತ್ತಿದೆ'' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಆದರೆ ಶಶಿ ತರೂರ್ ಮಾತನ್ನು ಒಪ್ಪದ ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ '' ಸಂಜು ಸ್ಯಾಮ್ಸನ್ ಮುಂದಿನ ಯಾರೊಬ್ಬರೂ ಇರಬೇಕಾಗಿಲ್ಲ. ಅವರು ಭಾರತೀಯ ಕ್ರಿಕೆಟ್‌ನ 'ದಿ' ಸಂಜು ಸ್ಯಾಮ್ಸನ್ ಆಗಿರುತ್ತಾರೆ'' ಎಂದು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಸ್ಯಾಮ್ಸನ್ ಐಪಿಎಲ್‌ನಲ್ಲಿ ತನ್ನ ಭವ್ಯವಾದ ಫಾರ್ಮ್ ಅನ್ನು ಮುಂದುವರೆಸಿದ್ದು ಆಡಿದ ಎರಡು ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಈಗ ಅವರು 2 ಪಂದ್ಯಗಳಿಂದ 159 ರನ್ ಗಳಿಸಿದ್ದಾರೆ, ಇದರಲ್ಲಿ ಸಿಎಸ್‌ಕೆ ವಿರುದ್ಧ 74 ರನ್‌ಗಳು ಸೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications